ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ : ಸದುಪಯೋಗಕ್ಕೆ ಕರೆ
Children's all-round personality development camp: A call for good use
ಕೊಪ್ಪಳ 04: ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ಸುವರ್ಣ ಅವಕಾಶ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣವಷ್ಟೇ ಅಲ್ಲ, ಉತ್ತಮ ಸಂಸ್ಕಾರವೂ ಅತ್ಯಗತ್ಯ. ಮಕ್ಕಳ ಎಳೆಯ ಮನಸ್ಸಿನಲ್ಲಿ ಮೌಲ್ಯಗಳನ್ನು ಬಿತ್ತಿ, ಅವರನ್ನು ಸಶಕ್ತ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ...* "ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ ಇದೆ ದಿ, 5 ರಿಂದ 11ರ ವರೆಗೆ ಮಕ್ಕಳಿಗಾಗಿ ವ್ಯಕ್ತಿತ್ವ ವಿಕಾಸ ಶಿಬಿರ ಜರುಗಲಿದೆ ಇದರ ಸದುಪಯೋಗ ಪಡೆದು ಕೊಳ್ಳಲು ಕೊಪ್ಪಳ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ನವರು ಪ್ರಕಟಣೆಯಲ್ಲಿ ತಿಳಿಸಿ ಎಲ್ಲಾ ಮಕ್ಕಳಿಗೆ ಸ್ವಾಗತಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಶಿಬಿರದ ಪ್ರಮುಖ ಉದ್ದೇಶಗಳು: ಮೊಬೈಲ್ ನ ಆರೋಗ್ಯಕರ ಬಳಕೆನೈತಿಕ ಮೌಲ್ಯಗಳ ಜಾಗೃತಿ. ಮನಸ್ಸಿನ ಏಕಾಗ್ರತೆ ಹಾಗೂ ದೃಢತೆಯನ್ನು ಹೆಚ್ಚಿಸುವುದು. ಎಂಥಹುದೇ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯ ಬೆಳೆಸುವುದು. ಆಧ್ಯಾತ್ಮಿಕತೆಯ ಬುನಾದಿಯ ಮೇಲೆ ನವ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವುದು. ಶಿಬಿರದ ವಿವರಗಳು: ವಯೋಮಿತಿ: 12 ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ದಿ: 05- ರಿಂದ 11 ರ ವರೆಗೆ ಸಮಯ: ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 12:00 ರವರೆಗೆಬ್ರಹ್ಮಕುಮಾರೀಸ್ ದೇವರಾಜ್ ಅರಸ್ ಕಾಲೋನಿ, ಸಾಲಾರ್ ಜಂಗ್ ರೋಡ್ ಕೊಪ್ಪಳ ಸಂಪರ್ಕಿಸಿ: 9482610488 ನೋಂದಣಿ ಹೇಗೆ?
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇಲಿರುವ ಸೇವಾಕೇಂದ್ರದ ವಾಟ್ಸಾಪ್ ಸಂಖ್ಯೆಗೆ ಈ ಕೆಳಗಿನ ಮಾಹಿತಿಯನ್ನು ಕಳುಹಿಸಿ: ವಿದ್ಯಾರ್ಥಿಯ ಹೆಸರು ಓದುತ್ತಿರುವ ತರಗತಿ ಶಾಲೆಯ ಹೆಸರು ಸಂಪೂರ್ಣ ವಿಳಾಸಬನ್ನಿ, ಮಕ್ಕಳ ಭವಿಷ್ಯವನ್ನು ಒಟ್ಟಾಗಿ ರೂಪಿಸೋಣ. ದಯವಿಟ್ಟು ಈ ಸಂದೇಶವನ್ನು ತಮ್ಮ ತಮ್ಮ ಗ್ರೂಪ್ ಗಳಿಗೆ ಶೇರ್ ಮಾಡಿ ಮಕ್ಕಳಿಗೆ ತಿಳಿಸಿರಿ ಹಾಗೂ ಆಪ್ತರಿಗೂ ಶೇರ್ ಮಾಡಿ ಎಂದು ಕೊಪ್ಪಳ ನಗರದ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 