ಮಕ್ಕಳ ದಿನಾಚರಣೆ: ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ
Children's Day: Uniforms distributed to athletes
ಮಕ್ಕಳ ದಿನಾಚರಣೆ: ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ
ಹುಬ್ಬಳ್ಳಿ 15: ಇಲ್ಲಿನ ಕಾರುಣ್ಯ ಸ್ಪೋರ್ಟ್ಸ ಅಕಾಡೆಮಿಯಿಂದ ಯುವ ಕ್ರೀಡಾಪಟುಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವುದರ ಮೂಲಕ ಮಕ್ಕಳ ದಿನ ಆಚರಿಸಲಾಯಿತು. ಇದೆ ವೇಳೆ ಇತ್ತೀಚಿಗೆ ನಿಧನರಾದ ದೈಹಿಕ ಶಿಕ್ಷಕಿ ಗಂಗವ್ವ ಕಟಗಾವಲಿ (ಬಳ್ಳಾರಿ) ಅವರ ಹೆಸರಿನಲ್ಲಿ ಸೇವಾ ಸಂಸ್ಥೆಯನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಧಾರವಾಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಅವರು ಮಾತನಾಡಿ ಅಕಾಡೆಮಿಯಿಂದ ಇದುವರೆಗೆ 70ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಗಳಿಸಿ, ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ದೈಹಿಕ ಶಿಕ್ಷಣವೂ ಅವಶ್ಯವಾಗಿದ್ದು, ಈ ದಿಸೆಯಲ್ಲಿ ಕಾರುಣ್ಯ ಸ್ಪೋರ್ಟ್ಸ ಅಕಾಡೆಮಿ ಉಚಿತ ತರಬೇತಿ ನೀಡುವುದರ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ಬಣ್ಣಿಸಿದರು.
ಅಕಾಡೆಮಿಯ ಅಧ್ಯಕ್ಷ ಅರ್ಜುನ ದೊಡ್ಡಮನಿ ಅವರು ಮಾತನಾಡಿ, ತಾವು ವಿದ್ಯಾರ್ಥಿ ಆಗಿದ್ದಾಗ ಬಡತನದ ಮಧ್ಯೆಯೂ ರಾಷ್ಟ್ರ ಪಟ್ಟದ ಕ್ರೀಡಾಪಟು ಆಗಿ ಹೊರಹೊಮ್ಮಿದ ಮಹಾಂತೇಶ ಬಳ್ಳಾರಿ ಅವರು ತಮಗೆ ಎದುರಾಗಿದ್ದ ಸಮಸ್ಯೆಗಳು ಅವಳಿ ನಗರದ ಇಂದಿನ ವಿದ್ಯಾರ್ಥಿಗಳಿಗೆ ಬರಬಾರದು ಎಂಬ ಉದ್ದೇಶದಿಂದ ಉಚಿತ ತರೆಬೇತಿ ನೀಡುತ್ತಿದ್ದಾರೆ. ಇವರಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ತಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು. ಅಕಾಡೆಮಿಯ ಸಂಸ್ಥಾಪಕ ಮಹಾಂತೇಶ ಬಳ್ಳಾರಿ ಅವರು, "ಉತ್ಸಾಹಿ ಕ್ರೀಡಾಪಟುಗಳು ಮತ್ತು ಪಾಲಕರ ಆಸಕ್ತಿ ಹಾಗೂ ಸಹಕಾರದಿಂದ ಅಕಾಡೆಮಿ ಮುನ್ನಡೆಯುತ್ತಿದೆ. ನನ್ನ ಪತ್ನಿ ದಿ. ಗಂಗವ್ವ ಬಳ್ಳಾರಿಯವರ ಕನಸಿನಂತೆ ಅಕಾಡೆಮಿ ಉಚಿತ ತರಬೇತಿ ನೀಡುವುದನ್ನು ಮುಂದುವರಿಸಲಿದೆ" ಎಂದರು. ಇದೆ ಸಂದರ್ಭದಲ್ಲಿ ಗಂಗವ್ವ ಬಳ್ಳಾರಿ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ ಮುತ್ತಣ್ಣ ಸುರಪುರ ಮತ್ತು ಇತ್ತೀಚೆಗೆ ಮಹಾನಗರ ಪಾಲಿಕೆ ಧೀಮಂತ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯಿಂದ ಕಳೆದ ವರ್ಷ ಮತ್ತು ಈ ವರ್ಷ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಹು.ಧಾ.ಮ.ನ.ಪಾಲಿಕೆ ನಿವೃತ್ತ ಆರೋಗ್ಯಾಧಿಕಾರಿ ಡಾ. ಕಓ ಬಿರಾದಾರ, ಉದ್ಯಮಿ ಸತೀಶ ಪಾಟೀಲ, ಕಲ್ಮೇಶ ಹೂಗಾರ, ನಾಗರಾಜ ಹಬೀಬ, ದೊಡ್ಡಯ್ಯ ಹಿರೇಮಠ, ವಿದ್ಯಾಧರ ತೆರದಾಳ, ಮಲ್ಲಪ್ಪ ತಡಸದ, ಸಂಜಯ ಪುಟ್ಟಪ್ಪನವರ, ರಾಯಕರ, ಚಂದ್ರಶೇಖರ ಬಳ್ಳಾರಿ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕು. ಅನನ್ಯ ತಡಸದ ತನ್ನ ಅನಿಸಿಕೆ ವ್ಯಕ್ತಪಡಿಸಿದರೆ, ಗೀತಾ ತಡಸದ ಕಾರ್ಯಕ್ರಮ ನಿರೂಪಿಸಿದರು. ರಾಮಯ್ಯ ವಂದಿಸಿದರು. ಕಾರುಣ್ಯ ಸ್ಪೋರ್ಟ್ಸ ಅಕಾಡೆಮಿಯಿಂದ ಕಳೆದ ವರ್ಷ ಮತ್ತು ಈ ವರ್ಷ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಇತ್ತೀಚಿಗೆ ನಿಧನರಾದ ದೈಹಿಕ ಶಿಕ್ಷಕಿ ಗಂಗವ್ವ ಕಟಗಾವಲಿ (ಬಳ್ಳಾರಿ) ಅವರ ಹೆಸರಿನಲ್ಲಿ ಸೇವಾ ಸಂಸ್ಥೆಯನ್ನು ಆರಂಭಿಸಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 