ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾವಳಗಿ ಶಿವಲಿಂಗೇಶ್ವರರು ಕೃತಿ ಲೋಕಾರೆ​‍್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾವಳಗಿ ಶಿವಲಿಂಗೇಶ್ವರರು ಕೃತಿ ಲೋಕಾರೆ​‍್ಣ  Chief Minister Siddaramaiah's work on Shivalingeshwara is a world-famous work

ಲೋಕದರ್ಶನ ವರದಿ 

ಯರಗಟ್ಟಿ  16: ಪಟ್ಟಣದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾರಾದ ಡಾ. ರಾಜಶೇಖರ ಬಿರಾದಾರ ಅವರು ರಚಿಸಿದ ಸಾವಳಗಿ ಶಿವಲಿಂಗೇಶ್ವರರು ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರೆ​‍್ಣಗೊಳಿಸಿದರು. 

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಕನ್ನಡ ಅಭಿವೃದ್ಧಿ ಪ್ರಾಧಿಕಾರವು  ಕನ್ನಡ ಸಾಮರಸ್ಯ ನೆಲೆಗಳು ಶೀರ್ಷಿಕೆಯ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರ ಒಟ್ಟು 41 ಕೃತಿಗಳನ್ನು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುನಾಥ, ಕನ್ನಡದ ಖ್ಯಾತ ಸಾಹಿತಿ ಡಾ. ಬರಗೂರು ರಾಮಚಂದ್ರ​‍್ಪ, ಶಿಕ್ಷಣ ತಜ್ಞ ಡಾ. ನಿರಂಜನರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಸೇರಿದಂತೆ ಯೋಜನೆಯ ಸಂಚಾಲಕರು, ಲೇಖಕರು ಭಾಗವಹಿಸಿದ್ದರು. 

ತಾಲೂಕಿನ ಸಾಹಿತಿಯೊಬ್ಬರ ಕೃತಿಯು ಮಾನ್ಯ ಮುಖ್ಯಮಂತ್ರಿಗಳಿಂದ ಲೋಕಾರೆ​‍್ಣಯಾದುದು ಹೆಮ್ಮೆಯ ಸಂಗತಿ ಎಂದು ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.