ನಮ್ಮವರು ಅಲ್ಲಿಗೆ,ಅಲ್ಲಿಯವರು ನಮ್ಮಲ್ಲಿಗೆ ಬರುತ್ತಾರೆ : ಟಿಕೆಟ್ ಆಕಾಂಕ್ಷಿಗಳ ಕುರಿತು ಮುಖ್ಯಮಂತ್ರಿ ಹೇಳಿಕೆ

ಬೆಂಗಳೂರು,ನ 11 :         ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿರುವ ರಾಜು ಕಾಗೆ ಮತ್ತು ಅಶೋಕ್ ಪೂಜಾರಿ ಅವರನ್ನು ಕರೆಸಿ ಮಾತ ನಾಡುತ್ತೇನೆ.ನಮ್ಮವರು ಅವರ ಕಡೆ ಹೋಗುತ್ತಾರೆ.ಅವರ ಕಡೆಯವರು ನಮ್ಮಲ್ಲಿಗೆ ಬರುತ್ತಾರೆ.ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೈ ಚೆಲ್ಲಿದ್ದಾರೆ.   

ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜು ಕಾಗೆ ಮತ್ತು ಅಶೋಕ್ ಪೂಜಾರಿ ಅವರು ಸಿದ್ದರಾಮಯ್ಯ ಅವರ ನ್ನು ಭೇಟಿ ಮಾಡಿದ ವಿಚಾರ ನನಗೆ ತಿಳಿದಿಲ್ಲ.ಆದರೂ  ನಾನು ಎಲ್ಲವನ್ನೂ ಗಮ ನಿಸುತ್ತಿದ್ದೇನೆ.ರಾಜುಕಾಗೆ ಮತ್ತು ಅಶೋಕ್ ಪೂಜಾರಿ ಅವರನ್ನು ಕರೆಸಿ ಮಾತನಾ ಡುತ್ತೇವೆ.ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.ಏನೇ ಆದರೂ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 12 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.   

ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ ಪಕ್ಷೇತರನಾಗಿ ನವೆಂಬರ್ 15 ರಂದು ನಾಮಪತ್ರ ಸಲ್ಲಿಸುವ ಬಗ್ಗೆ ತಮಗೆ ಮಾಹಿತಿ.ಆ ಬಗ್ಗೆ ನಾನು ಮಾತನಾಡು ವುದಿಲ್ಲಎಂದು ಹೇಳುವ ಮೂಲಕ ಟಿಕೆಟ್ ಆಕಾಂಕ್ಷಿಗಳು ತಮ್ಮ ಮಾತನ್ನು ಮೀರಿದ್ದಾರೆ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾ ರೆ.ಆಮೂಲಕ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ತಮ್ಮ ವಿರುದ್ಧವೇ ತೊಡೆತಟ್ಟಿದ್ದಾರೆಂಬ ಅಸಮಾಧಾನವನ್ನು ಅವರು ಹೊರ ಹಾಕಿದರು.