ಅ.3 ರಿಂದ ಚನ್ನವೃಷಭೇಂದ್ರರ 42ನೇ ವೇದಾಂತ ಪರಿಷತ್ ಆರಂಭ
Channavrishabhendra's 42nd Vedanta Parishad begins from October 3
ಹಾರೂಗೇರಿ 30: ಒಂದಾಗಿ ಬಾಳಿರಿ ವಿಶ್ವಶಾಂತಿ ಪಡೆಯಿರಿ ಎಂಬ ಸಂದೇಶದೊಂದಿಗೆ ಅಕ್ಟೋಬರ್ 3 ಶುಕ್ರವಾರದಿಂದ 7 ಮಂಗಳವಾರದವರೆಗೆ 42ನೇ ವೇದಾಂತ ಪರಿಷತ್ ನಡೆಯಲಿದ್ದು, ದೇಶದ ನಾನಾ ಭಾಗಗಳಿಂದ ಮಹಾತ್ಮರು, ಪೂಜ್ಯರು ಆಗಮಿಸಿ, ಆಶೀರ್ವಚನ ನೀಡಲಿದ್ದಾರೆ.
ಇಂಚಲ-ಹಾರೂಗೇರಿ ಮಠಗಳ ಪೀಠಾಧ್ಯಕ್ಷ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ 5 ದಿನಗಳವರೆಗೆ 42ನೇ ವೇದಾಂತ ಪರಿಷತ್ ನಡೆಯಲಿದೆ.
ಅ.3ರಂದು ಶುಕ್ರವಾರ ಮಧ್ಯಾಹ್ನ 3.15 ಗಂಟೆಗೆ ಶ್ರೀಗಳ ಅಮೃತ ಹಸ್ತದಿಂದ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಮೂರ್ತಿಗೆ ಸುವರ್ಣ ಕೀರೀಟ ಧಾರಣೆ, ಅಭಿಷೇಕ ಹಾಗೂ ಮಹಾಪೂಜೆ ನಡೆಯುವುದು. ಮಧ್ಯಾಹ್ನ 3.30 ಗಂಟೆಗೆ ಸಕಲ ವಾಧ್ಯ ವೈಭವ, ಭವ್ಯ ಕುಂಭೋತ್ಸವದೊಂದಿಗೆ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಭವ್ಯ ಸ್ವಾಗತ ಮೆರವಣಿಗೆ ನಡೆಯಲಿದೆ. ನಂತರ ಶ್ರೀಗಳಿಂದ ವೇದಾಂತ ಪರಿಷತ್ತಿನ ಉದ್ಘಾಟನೆ, ಭಕ್ತಿ ಸಂಗೀತ ಹಾಗೂ ರಾತ್ರಿ 9.30ವರೆಗೆ ಮಹಾತ್ಮರಿಂದ ಪ್ರವಚನ ಕೀರ್ತನೆ, ಮಹಾಪೂಜೆ ನಡೆಯಲಿದೆ.
ಅ.4ರಂದು ಶನಿವಾರ ಬೆಳಿಗ್ಗೆ 7.30ರಿಂದ 8.30 ರವರೆಗೆ ಭಕ್ತಿ ಸಂಗೀತ, 8.30 ರಿಂದ 12.30 ರವರೆಗೆ ಮಹಾತ್ಮರಿಂದ ಪ್ರವಚನ, ಮಧ್ಯಾಹ್ನ 5ರಿಂದ 6 ಗಂಟೆಯವರೆಗೆ ಶ್ರೀ ಚನ್ನವೃಷಭೇಂದ್ರ ಭಜನಾ ತಂಡ ಹಾಗೂ ಪರಸ್ಥಳದಿಂದ ಆಗಮಿಸಿದ ತಂಡ ಹಾಗೂ ವಿವಿಧ ಮೇಳಗಳಿಂದ ಭಜನಾ ಕಾರ್ಯಕ್ರಮ. ಸಂಜೆ ಭಕ್ತಿ ಸಂಗೀತ ಹಾಗೂ ರಾತ್ರಿ 9.30ರವರೆಗೆ ಮಹಾತ್ಮರಿಂದ ಪ್ರವಚನ ಕೀರ್ತನೆ, ನಂತರ ಸದ್ಭಕ್ತರಿಂದ ಶ್ರೀಗಳ ಭಕ್ತಿಯ ತುಲಾಭಾರ ಹಾಗೂ ಮಹಾಪೂಜೆ ನಡೆಯಲಿದೆ.
ಅ. 5ರಂದು ರವಿವಾರವಾರ ಬೆಳಿಗ್ಗೆ 7.30ರಿಂದ 8.30 ರವರೆಗೆ ಭಕ್ತಿ ಸಂಗೀತ, 8.30 ರಿಂದ 12.30 ರವರೆಗೆ ಮಹಾತ್ಮರಿಂದ ಪ್ರವಚನ, ಮಧ್ಯಾಹ್ನ 5ರಿಂದ 6 ಗಂಟೆಯವರೆಗೆ ಜಾನಪದ ಕಲಾಮೇಳ. ಸಂಜೆ ಭಕ್ತಿ ಸಂಗೀತ ಹಾಗೂ ರಾತ್ರಿ 9..0 ಗಂಟೆವರೆಗೆ ಮಹಾತ್ಮರಿಂದ ಪ್ರವಚನ ಕೀರ್ತನೆ, ನಂತರ ಸದ್ಭಕ್ತರಿಂದ ಶ್ರೀಗಳ ಭಕ್ತಿಯ ತುಲಾಭಾರ ಹಾಗೂ ಮಹಾಪೂಜೆ ನಡೆಯಲಿದೆ.
ಅ.6ರಂದು ಸೋಮವಾರ ಬೆಳಿಗ್ಗೆ 7.30ರಿಂದ 8.30 ರವರೆಗೆ ಭಕ್ತಿ ಸಂಗೀತ, 8.30 ರಿಂದ 12.30 ರವರೆಗೆ ಮಹಾತ್ಮರಿಂದ ಪ್ರವಚನ, ಮಧ್ಯಾಹ್ನ 5ರಿಂದ 6 ಗಂಟೆಯವರೆಗೆ ಮನರಂಜನಾ ಭಕ್ತಿಗೀತೆಗಳ ಕಾರ್ಯಕ್ರಮ. ಸಂಜೆ ಭಕ್ತಿ ಸಂಗೀತ ಹಾಗೂ ರಾತ್ರಿ 9.30 ಗಂಟೆವರೆಗೆ ಮಹಾತ್ಮರಿಂದ ಪ್ರವಚನ ಕೀರ್ತನೆ, ನಂತರ ಸದ್ಭಕ್ತರಿಂದ ಶ್ರೀಗಳ ಭಕ್ತಿಯ ತುಲಾಭಾರ ಹಾಗೂ ಮಹಾಪೂಜೆ ನಡೆಯಲಿದೆ.
ಅ.7ರಂದು ಮಂಗಳವಾರ ಬೆಳಿಗ್ಗೆ 7.30ರಿಂದ 8.30 ರವರೆಗೆ ಭಕ್ತಿ ಸಂಗೀತ, 8.30 ರಿಂದ 12.30 ರವರೆಗೆ ಮಹಾತ್ಮರಿಂದ ಪ್ರವಚನ, ಮಧ್ಯಾಹ್ನ 3 ಗಂಟೆಗೆ ಪ್ರಸಿದ್ಧ ಪೈಲವಾನರಿಂದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿಗಳು. 6 ಗಂಟೆಯವರೆಗೆ ಶ್ರೀ ಭಾರತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ, ಭರತನಾಟ್ಯ, ಭಕ್ತಿ ಸಂಗೀತ ಹಾಗೂ ರಾತ್ರಿ 9.30 ಗಂಟೆವರೆಗೆ ಮಹಾತ್ಮರಿಂದ ಪ್ರವಚನ ಕೀರ್ತನೆ, ನಂತರ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ 85ನೇ ಜಯಂತ್ಯೋತ್ಸವ ನಿಮಿತ್ತ ತೊಟ್ಟಿಲೋತ್ಸವ ಕಾರ್ಯಕ್ರಮ. ಆಮೇಲೆ ಮಹಾಪೂಜೆ, ಅನ್ನದಾಸೋಹ ಹಾಗೂ ಬೆಳಗಿನ ಪರ್ಯಂತ ವಿವಿಧ ಕಲಾಮೇಳಗಳಿಂದ ಡೊಳ್ಳಿನ ಪದಗಳು ನಡೆಯಲಿದೆ.
5 ದಿನಗಳವರೆಗೆ ನಡೆಯಲಿರುವ ವೇದಾಂತ ಮಹೋತ್ಸವಕ್ಕೆ ಬೀದರ ಚಿದಂಬರಾಶ್ರಮದ ಶಿವಕುಮಾರ ಮಹಾಸ್ವಾಮಿಗಳು, ಕೊಪ್ಪಳ ಗವಿಸಿದ್ದೇಶ್ವರ ಮಹಾಸಂಸ್ಥಾನದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಶಿರಸಿ ಸ್ವಾದಿ ದಿಗಂಬರ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹೇಮಕೂಟ-ಹಂಪಿ ಶಿವರಾಮಾವಧೂತಾಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕಲಬುರ್ಗಿ ಲಕ್ಷ್ಮೀ ತಾಯಿಯವರು, ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ದಾವಣಗೇರಿಯ ಶಿವಾನಂದ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅನಗವಾಡಿಯ ಅನುಸೂಯಾ ತಾಯಿಯವರು, ಹಡಗಿನಾಳದ ಮಲ್ಲೇಶ್ವರ ಶರಣರು, ಅಥಣಿಯ ಶ್ರೀ ಬಿ.ಎಂ.ಮುಜಾವರ ಸಾಹೇಬರು, ಶ್ರೀ ನಿಂಗಾನಂದ ಸ್ವಾಮೀಜಿ ಹಾಗೂ ನಾಡಿನ ಅನೇಕ ಮಹಾತ್ಮರು ಆಗಮಿಸಿ ಆಶೀರ್ವಚನ ನೀಡಲಿರುವರು ಎಂದು ಗುರು ಚನ್ನವೃಷಭೇಂದ್ರ (ದೇವರಕೊಂಡಜ್ಜನವರ) ಮಹಾರಾಜರ ಲೀಲಾಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 