ಚನ್ನಮ್ಮನ ಕಿತ್ತೂರು ಹಿಂದೂ ಸಮಾಜೋತ್ಸವ: ಗಮನ ಸೆಳೆದ ಶೋಭಾಯಾತ್ರೆ
Channamma's Kittur Hindu Samaj Festival: A procession that attracted attention
ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರು 08: ಹಿಂದು ಸಮ್ಮೇಳನ ಸಮಿತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಅಂಗವಾಗಿ ರವಿವಾರ ನಡೆದ ಶೋಭಾಯಾತ್ರೆಗೆ ಜಾನಪದ ವಾದ್ಯ ಮೇಳಗಳ ಮೆರವಣಿಗೆ ಮೆರಗು ನೀಡಿತು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ವರ್ತುಳದಲ್ಲಿ ರಾಣಿ ಚನ್ನಮ್ಮಾಜಿಗೆ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಪ್ರತಿಮೆಗಳಿಗೆ ಗೌರವ ಸಲ್ಲಿಸಿ. ನಂದಿ ಕೋಲಗೆ ಪೂಜೆ ಸಲ್ಲಿಸುವ ಮುಲಕ ಆರಂಭವಾದ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳ ಮೂಲಕ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿತು.
ಶೋಭಾ ಯಾತ್ರೆಯಲ್ಲಿ ಹಿಂದೂ ಪರ ಘೋಷಣೆ, ಜೈಶ್ರೀರಾಮ ಮುಂತಾದ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಶ್ರೀರಾಮನ ಭಾವ ಚಿತ್ರ, ಕುಂಭಮೇಳ, ಭಗವದ್ಗೀತೆ, ಶಿವಾಜಿ ಪಟ್ಟಾಭಿಷೇಕದ ಸ್ತಬ್ದಚಿತ್ರಗಳು ಮತ್ತು ಆಟೋಗಳಲ್ಲಿ ರಾಣಿ ಚನ್ನಮ್ಮ ಮುಂತಾದವರ ಭಾವ ಚಿತ್ರಗಳು, ಎತ್ತಿನ ಚಕ್ಕಡಿ, ಒಂಟೆ, ಕುದರೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಶೋಭೆ ತಂದರು.
ಚಿಣ್ಣರು ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷಭೂಷಣಗಳಲ್ಲಿ ಗಮನ ಸೆಳೆದರು. ಪಟ್ಟಣದ ವಿವಿಧ ಮಹಿಳಾ ತಂಡಗಳು ಕೇಸರಿ ಧ್ವಜ ಹಿಡಿದು ಸಾಲಿನಲ್ಲಿ ಸಾಗಿದರು, ಪಟ್ಟಣದ ತುಂಬೆಲ್ಲಾ ಕೇಸರಿ ಧ್ವಜಗಳ ಪಾರುಪತ್ಯೆ ಮೆರೆಯಿತು.
ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಮಿತಿ ಅಧ್ಯಕ್ಷರು ಮಡಿವಾಳಪ್ಪ ಮುರಗೋಡ, ರಮೇಶಗೌಡ ಪಾಟೀಲ, ಸ್ವಯಂ ಸೇವಕ ಸಂಘದ ಪ್ರಾಂತ ವ್ಯವಸ್ಥಾಪಕ ಕೃಷ್ಣಾನಂದ ಕಾಮತ, ವಿಶ್ವಹಿಂದು ಪರಿಷತ್ ಕ್ಷೇತ್ರಿಯ ಸಾಮರಸ್ಯ ಪ್ರಮುಖ ಕೃಷ್ಣಾಜೀ ಭಟ್, ಶಾಸಕ ಬಾಬಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಲಕ್ಷ್ಮೀ ಇನಾಮದಾರ, ಶಿವನಶಿಂಗ್ ಮೊಖಾಶಿ ಸೇರಿದಂತೆ ವಿಶ್ವಹಿಂದು ಪರಿಷತ್, ಭಜರಂಗ ಧಳ, ರಾಷ್ಟ್ರೀಯ ಸ್ವಯಂ ಸೇವಕ ಕಾರ್ಯಕರ್ತರು ಸೇರಿದಂತೆ ನೂರಾರು ಜನ ಮಹಿಳೆಯರು ಸಹಿತ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಭಾರಿ ಬಿಗಿಬಂದೋಬಸ್ತ್ ಏರಿ್ಡಸಿದ್ದರು.
ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಲಕ್ಷ್ಮೀ ಇನಾಮದಾರ ಸೇರಿದಂತೆ ಹಲವಾರು ಮುಖಂಡರು ಪಕ್ಷಾತೀತವಾಗಿ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿ ಒಗ್ಗಟ್ಟನ್ನು ಪ್ರದರ್ಶಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 