‘ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ’
Century Remembrance of the Kakori Movement'
‘ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ’
ಧಾರವಾಡ, 10 : ಉತ್ತರ ಪ್ರದೇಶದ ಕಾಕೋರಿ ರೈಲು ಪಿತೂರಿ ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಘಟನೆಯಾಗಿದೆ. ಈ ಘಟನೆ ಭಾರತದ ಸ್ವಾತಂತ್ರ್ಯ ಹೋರಾಟದ ಮುಂದಿನ ಹೋರಾಟಗಳಿಗೆ ನಾಂದಿಯಾಯಿತು ಎಂದು ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕ್ಯಾಪ್ಟನ್ ಬಿ. ಸಿ. ಕಲ್ಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ’ ವಿಷಯ ಕುರಿತು ಮಾತನಾಡುತ್ತಿದ್ದರು.
ಭಾರತದಲ್ಲಿ ಬ್ರಿಟಿಷ ಸಾಮ್ರಾಜ್ಯದ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಲು ಹಿಂದೂಸ್ತಾನ ಸೋಸಿಯಾಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಕ್ರಾಂತಿಕಾರರು ಹುಟ್ಟು ಹಾಕಿದರು. ಈ ಸಂಘಟನೆಗೆ ಬ್ರಿಟಿಷರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳ ಖರೀದಿಗೆ ಹಣದ ಅವಶ್ಯಕತೆ ಉಂಟಾಗಿ ಹಣ ಸಂಗ್ರಹಿಸಲು ಕಾಕೋರಿ ರೈಲು ಪಿತೂರಿ ಆಯೋಜಿಸಿದ್ದರು.
ರೈಲು 1925ರ ಅಗಸ್ಟ 9 ರಂದು ಶಹಜಾನಪುರದಿಂದ ಲಕ್ನೋಗೆ ಪ್ರಯಾಣ ಬೆಳೆಸಿತ್ತು. ಈ ರೈಲಿನಲ್ಲಿ ಲಕ್ನೋದ ಸರಕಾರಿ ಖಜಾನೆಗೆ ಸುಮಾರು 8000 ಹಣ ವರ್ಗಾಯಿಸಲಾಗುತ್ತಿತ್ತು. ರೈಲು ಕಾಕೋರಿ ಸಮಿಪಿಸುತ್ತಿದ್ದಂತೆ ಕ್ರಾಂತಿಕಾರಿಯೊಬ್ಬ ರೈಲಿನ ಸರಪಳಿ ಎಳೆದು ರೈಲು ನಿಲ್ಲಿಸಿದ. ಎಚ್.ಎಸ್.ಆರ್.ಪಿ ಹಾಗೂ ರೈಲು ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ಜರುಗಿ ನಿರಪರಾದಿಯೊಬ್ಬ ಮರಣ ಹೊಂದಿದನು. ರೈಲು ಪಿತೂರಿ ಉದ್ದೇಶ ಯಾವ ಜೀವ ಹಾನಿ ಮಾಡುವುದ್ದಾಗಿರಲಿಲ್ಲ.
ಬ್ರಿಟಿಷ ಸರಕಾರ ರೈಲು ಪಿತೂರಿಯನ್ನು ಗಂಭೀರವಾಗಿ ಪರಿಗಣಿಸಿ ಹಿಂದೂಸ್ತಾನ ಸೋಸಿಯಾಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ದ ಪ್ರಮುಖರಾದ ರಾಮ ಪ್ರಸಾದ ಬಿಸ್ಮಿಲಾ, ರೋಷಣಸಿಂಗ್, ರಾಜೇಂದ್ರನಾಥ ಲಹಿರಿ ಹಾಗೂ ಅಶ್ಫಾಕುಲ್ಲಾ ಖಾನ ಇವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿ ಮರಣದಂಡನೆ ಶಿಕ್ಷೆ ವಿಧಿಸಿದರೆ ಉಳಿದ ಕ್ರಾಂತಿಕಾರಿ ಹೋರಾಟಗಾರರಿಗೆ ಕಾಲಾಪಾಣಿ ಶಿಕ್ಷೆ ವಿಧಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರು ಮರಣ ದಂಡನೆ ರದ್ದುಪಡಿಸಬೇಕೆಂಬ ಮನವಿಯನ್ನು ಬ್ರಿಟಿಷ ಸರ್ಕಾರ ತಿರಸ್ಕರಿಸಿತು. ಈ ಹುತಾತ್ಮರ ತ್ಯಾಗ, ಬಲಿದಾನದ ನೂರು ವರ್ಷದ ನಂತರವೂ ಭಾರತೀಯರು ಸ್ಮರಿಸುವ ದಿನವಾಗಿದೆ. ಈ ಕ್ರಾಂತಿಕಾರಿ ನಾಯಕರು ತಮ್ಮ ಜೀವಕ್ಕಿಂತ ಸ್ವಾತಂತ್ರ್ಯವನ್ನು ಹೆಚ್ಚು ಪ್ರೀತಿಸುತ್ತಿದ್ದರೆಂಬುದನ್ನು ಇಂದಿನ ಯುವ ಜನರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.
ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಾರದಾ ಕಲ್ಮಠ ಇದ್ದರು. ದತ್ತಿದಾನಿ ಗೌರವಾನ್ವಿತ ನ್ಯಾಯಾಧೀಶೆ ಶ್ರೀಕಾವೇರಿ ಕಲ್ಮಠ ದತ್ತಿ ಕುರಿತು ಮಾತನಾಡಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಡಾ. ಸಿದ್ಧನಗೌಡ ಪಾಟೀಲ, ಕೆ.ಬಿ. ನಾವಲಗಿಮಠ, ಡಾ. ಲಿಂಗರಾಜ ಅಂಗಡಿ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಡಾ. ವಿನಯಾ ಒಕ್ಕುಂದ, ಶ್ರೀಮತಿ ಪ್ರಮೀಳಾ ಜಕ್ಕಣ್ಣವರ, ಸನ್ಮತಿ ಅಂಗಡಿ, ರತ್ನಾ ಹಲಗತ್ತಿ, ರಾಜೇಶ ನಾವಲಗಿಮಠ, ರಾಮಚಂದ್ರ ಗೆದ್ದೆಣ್ಣವರ, ಕಲ್ಮಠ ಕುಟುಂಬದವರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 