ಸಂತ ಕನಕದಾಸ ಶಾಲೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಣೆ

ಸಂತ ಕನಕದಾಸ ಶಾಲೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಣೆ Celebration of Saint Kanakadasa's Jayanti at Saint Kanakadasa School


ಮುದ್ದೇಬಿಹಾಳ 08: ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಏನೇನಾದರೂ ಬಲ್ಲಿರಾ ಎಂಬ ಕನಕದಾಸರ ನುಡಿ ನಮಗೆಲ್ಲ ಮಾದರಿ ಎಂದು ಎಮ್ ಜಿ ಎಮ್ ಕೆ ಪ್ರಾಚಾರ್ಯಎಸ್ ಕೆ ಹರನಾಳ ಹೇಳಿದರು. 

  ಕನಕದಾಸರನ್ನು ನಾವು ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಫೂರ್ತಿಯಾಗಿದೆ. ದಾಸಶ್ರೇಷ್ಠರೆಂದೇ ಕರೆಯಲಾಗುವ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಅವರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು  

ಬಿ ಎಚ್ ಹಾಲಣ್ಣನವರ, ಲಕ್ಷ್ಮಣಗೌಡ ಬಿಜ್ಜೂರ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಮ್ ಎನ್ ಮದರಿಯವರು ಕನಕದಾಸರು ಮೂಲತಃ ಒಂದು ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರಾಗಿದ್ದರಿಂದ ಅವರಲ್ಲಿ ಸಂಗೀತದ ಕಲೆ ಹುಟ್ಟಿನಿಂದಲೇ ಇತ್ತು. ಅವರ ತಂದೆ ಬೀರ​‍್ಪ ನಾಯಕ ಆಸ್ಥಾನ ಸಂಗೀತಗಾರರಾಗಿದ್ದರು ಮತ್ತು ಅವರ ತಾಯಿ ಬಚ್ಚಮ್ಮ ಪ್ರತಿಭಾನ್ವಿತ ಗಾಯಕಿಯಾಗಿದ್ದರು. ಕನಕದಾಸರು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದತ್ತ ಒಲವು ಹೊಂದಿದ್ದರು ಎಂದು ಹೇಳಿದರು.  

ಶಾಲೆಯ ಅಧ್ಯಕ್ಷ ಮಲಕೇದ್ರಾಯಗೌಡ ಪಾಟೀಲ, ಬಿ ಎಸ್ ಹೊಸೂರು, ಬಿ ಎಸ್ ಶಿರೋಳ, ಬಿ ಎಸ್ ಮೇಟಿ, ಎಮ್ ಎಮ್ ಪೂಜಾರಿ, ಎಲ್ ಎಸ್ ಮೇಟಿ, ಎನ್ ಬಿ ರೂಡಗಿ, ಬಿ ಎಚ್ ಬಾಗೇವಾಡಿ, ಎಚ್ ಟಿ ಪೂಜಾರಿ, ಶಿವಲಿಂಗಪ್ಪಣ್ಣ ಯರಝರಿ, ಸಂಗಣ್ಣ ಮೇಲಿನಮನಿ, ಹುಲಗಪ್ಪ ಖಿಲಾರಹಟ್ಟಿ, ಮಲ್ಲಣ್ಣ ಕೆಸರಟ್ಟಿ ಮುಂತಾದವರು ಉಪಸ್ಥಿತರಿದ್ದರು.  

ಪ್ರಾರ್ಥನೆ ಎಮ್ ಆರ್ ತಡಸದ ಸ್ವಾಗತ ಎಮ್ ಎನ್ ಯರಝರಿ, ನಿರೂಪಣೆ ಎಮ್ ಸಿ ಕಬಾಡೆ, ವಂದನಾರೆ​‍್ಣ ಗೋಪಾಲ ಹೂಗಾರ ನೆರವೇರಿಸಿದರು.