ಎಸ್‌.ಆರ್‌. ಹಿರೇಮಠ ಅವರ 101ನೇ ಜನ್ಮದಿನ ಆಚರಣೆ

ಎಸ್‌.ಆರ್‌. ಹಿರೇಮಠ ಅವರ 101ನೇ ಜನ್ಮದಿನ ಆಚರಣೆ  Celebration of S.R. Hiremath's 101st Birthday

ಲೋಕದರ್ಶನ ವರದಿ 

ಹುಬ್ಬಳ್ಳಿ 30: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ವಿಶ್ವೇಶ್ವರ ನಗರದ ನಿವಾಸಿ, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪರೀಕ್ಷಾ ನಿಯಂತ್ರಕರಾದ ಎಸ್‌.ಆರ್‌. ಹಿರೇಮಠ (ಸೋಮಶೇಖರ ರಾಚಯ್ಯ ಹಿರೇಮಠ) ಅವರ 101ನೇ ಜನ್ಮದಿನವನ್ನು ಅವರ ನಿವಾಸದಲ್ಲಿ ಗೌರವ ಸಮರಾ​‍್ಣ ಸಮಾರಂಭದ ಮೂಲಕ ಆಚರಿಸಲಾಯಿತು.  

ಶತಾಯುಷಿ ಶಿಕ್ಷಣ ತಜ್ಞರಾಗಿರುವ ಎಸ್‌.ಆರ್‌. ಹಿರೇಮಠ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಸೇವೆ, ಸಮಾಜಮುಖಿ ಚಿಂತನೆ ಹಾಗೂ ಆದರ್ಶ ಜೀವನವನ್ನು ಸ್ಮರಿಸಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಲು ಹೊದಿಸಿ, ಮಾಲಾರೆ​‍್ಣ ಮಾಡಿ, ಗ್ರಂಥ ಹಾಗೂ ಹಣ್ಣುಗಳನ್ನು ನೀಡಿ ಗೌರವಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, 2025ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದ್ದ ಎಸ್‌.ಆರ್‌. ಹಿರೇಮಠ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಾದರಿಯಾಗಿದ್ದು, ಆರೋಗ್ಯವಂತ ಹಾಗೂ ಕ್ರಿಯಾಶೀಲ ಜೀವನದ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘಿಸಿದರು. ಅವರು ಇನ್ನೂ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಹೊಂದಲಿ ಎಂದು ಶುಭ ಹಾರೈಸಿದರು.  

ಕಾರ್ಯಕ್ರಮದಲ್ಲಿ ಎಸ್‌.ಆರ್‌. ಹಿರೇಮಠ ಅವರ ಧರ್ಮಪತ್ನಿ ಅನ್ನಪೂರ್ಣ ಎಸ್‌. ಹಿರೇಮಠ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ. ಎಸ್‌.ಎಂ. ಸಾತ್ಮಾರ, ಉಪಾಧ್ಯಕ್ಷ ಚೆನ್ನಬಸಪ್ಪ ಧಾರವಾಡಶೆಟ್ಟರ್, ಉಪನ್ಯಾಸಕ ವೀರೇಶ್ ಚಂದ್ರಕಾಂತ ಬಳಿಗಾರ, ಸತೀಶ್ ಎಸ್‌. ಹಿರೇಮಠ, ಗಿರಿಜಾ ಎಸ್‌. ಹಿರೇಮಠ, ಅಖಿಲೇಶ್ ಎಸ್‌. ಹಿರೇಮಠ, ಜಾನಪದ ತಜ್ಞ ಡಾ. ರಾಮು ಮೂಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.