ರಾಷ್ಟ್ರಪತಿಯೊಂದಿಗೆ ರಕ್ಷಾಬಂಧನ ಆಚರಣೆ : ಭಾರತಿ ತಾಳಿಕೋಟಿ

ರಾಷ್ಟ್ರಪತಿಯೊಂದಿಗೆ ರಕ್ಷಾಬಂಧನ ಆಚರಣೆ : ಭಾರತಿ ತಾಳಿಕೋಟಿ Celebration of Raksha Bandhan with the President: Bharati Talikoti

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 03: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಕ್ಷಾಬಂಧನ ಆಚರಿಸಿರುವುದು ನಮಗೆ ಅಪಾರ ಸಂತಸ ಹಾಗೂ ಹೆಮ್ಮೆ ತಂದಿದೆ ಎಂದು ರಬಕವಿ ಹೊಸೂರಿನ ಪದ್ಮಾವತಿ ಇಂಟರನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಗಳಾದ ಭಾರತಿ ತಾಳಿಕೋಟಿ ಹೇಳಿದರು.  ಅಗಷ್ಟ 28 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಂಸ್ಥೆಯ ಐವರು ವಿದ್ಯಾರ್ಥಿಗಳಾದ ಕೃತಿಕಾ ಅಜಿತ ಕಾಸರ, ವಿಜಯಲಕ್ಷಿ-್ಮ ರಾಜೇಂದ್ರ ಆಸಂಗಿ, ದಿಯಾ ಹುಮಾಯೂನ್ ಸುತಾರ, ಶೌರ್ಯ ಸಂತೋಷ ಸಮಾಜೆ ಹಾಗೂ ಪ್ರಣವ ಸುರೇಶ ಘಡಾಲೋಟೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಭಾರತೀಯ ಸಂಪ್ರದಾಯದಂತೆ ರಕ್ಷಾಬಂಧನ ಆಚರಿಸಿದರು. ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಪತಿಯವರು ಆತ್ಮೀಯವಾಗಿ ಬೆರೆತು,

ಪ್ರೀತಿಯಿಂದ ಸ್ವಾಗತಿಸಿ ಗೌರವಿಸಿದ್ದು ಮಕ್ಕಳಲ್ಲಿ ಸಂತಸ ಮೂಡಿಸಿತು ಎಂದು ಅವರು ತಿಳಿಸಿದರು.  ರಾಷ್ಟ್ರಪತಿಯೊಂದಿಗೆ ನಡೆಸಿದ ಸಂವಾದ ಹಾಗೂ ಅವರ ಮಾತುಗಳು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಸ್ಫೂರ್ತಿ ತುಂಬಿವೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು. ಜಾತಿ, ಪಂಥ, ಧರ್ಮ ಯಾವುದೇ ಸಾಧನೆಗೆ ಅಡ್ಡಿಯಾಗಬಾರದು. ದೃಢವಾದ ನಂಬಿಕೆ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದೊಂದಿಗೆ ಗುರಿ ಸಾಧಿಸಬೇಕು. ದೇಶಕ್ಕಾಗಿ ತಮ್ಮಿಂದಾದ ಅತ್ಯುತ್ತಮ ಕೊಡುಗೆ ನೀಡುವ ಹಠವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರಪತಿಯವರು ಹಲವು ಸಂದೇಶಗಳನ್ನು ನೀಡಿದರು ಎಂದು ಭಾರತಿ ತಾಳಿಕೋಟಿ ಹೇಳಿದರು.