ನಿಮಿಷಾಂಭಾ ದೇವಿ ದೇವಸ್ಥಾನದ ಮುಂದೆ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ
Celebration of Adi Shankaracharya's Jayanti in front of Nimishamba Devi Temple
ತಾಳಿಕೋಟಿ 22 : ಪಟ್ಟಣದ ನಿಮಿಷಾಂಭಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ವತಿಯಿಂದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಭೀಮರಾವ್ ಕುಲಕರ್ಣಿ ಮಾತನಾಡಿ ಪರಮೇಶ್ವರನ ಅವತಾರಿಗಳಾದ ಜಗದ್ಗುರು ಆದಿ ಶಂಕರಾಚಾರ್ಯರ ಅವಿರತ ಪ್ರಯತ್ನದಿಂದಾಗಿ ಸನಾತನ ಹಿಂದೂ ಧರ್ಮವೂ ಜೀವಂತವಾಗಿರಲು ಸಾಧ್ಯವಾಗಿದೆ.
ಜಗದ್ಗುರು ಶಂಕರಾಚಾರ್ಯರ ದೃಷ್ಟಿ ಲೋಕಕಲ್ಯಾಣವಾಗಿತ್ತು ಗೋವಿಂದ ಭಗವತ್ಪಾದರಿಂದ ಅನುಗ್ರಹಿತರಾಗಿ ಅವರ ಆದೇಶದಂತೆ ಪ್ರಸ್ತಾನತ್ರಯಗಳಿಗೆ ಭಾಷ್ಯವನ್ನು ಬರೆದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿ ಉತ್ತರದಲ್ಲಿ ಬದರಿ ಪಶ್ಚಿಮದಲ್ಲಿ ದ್ವಾರಕಿ ಪೂರ್ವದಲ್ಲಿ ಪುರಿ ಹಾಗೂ ದಕ್ಷಿಣದಲ್ಲಿ ಶೃಂಗೇರಿ ಹೀಗೆ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಅವರು ಸನಾತನ ಹಿಂದೂ ಧರ್ಮದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಅಧ್ಯಕ್ಷ ಘನಶ್ಯಾಮ ಚೌವ್ಹಾಣ, ರಾಘವೇಂದ್ರ ಚೌವ್ಹಾಣ, ಪುರಸಭೆ ಮಾಜಿ ಸದಸ್ಯ ಮುದಕಪ್ಪ ಬಡಿಗೇರ, ಗಣಪತಿ ಚೌವಾಣ, ರಮೇಶ ಚೌವ್ಹಾಣ, ದೊಂಡಿರಾಮ ಮಿರಜಕರ, ಸಚಿನ್ ಭೂಸಾರೆ, ಶಂಕರ ಉಬಾಳೆ, ಗೋವಿಂದ ಚೌದ್ರಿ, ರಾಘವೇಂದ್ರ ಮಿರಜಕರ್, ಕಾಶಿನಾಥ ಚಿತಾಪೂರ, ನಾಗೇಶ ಚೌವ್ಹಾಣ, ತುಳಸಿರಾಮ ಚೌವ್ಹಾಣ, ಅಶೋಕ ಶೆಟ್ಟಿ, ಮಹೇಶ ಕರ್ಜಗಾರ, ಸಂದೀಪ್ ಚೌವ್ಹಾಣ, ಆಕಾಶ ಪಿಂಪಳೆ, ಪ್ರದೀಪ ಭೂಸಾರೆ ಮತ್ತಿತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 