ಕೆನರಾ ಬ್ಯಾಂಕನ 120 ನೇ ಸಂಸ್ಥಾಪನಾ ದಿನಾಚರಣೆ: 120 ಸಸಿ ನೆಡುವ ಕಾರ್ಯಕ್ರಮ
Canara Bank's 120th Foundation Day Celebration: 120 Sapling Plantation Program
ಬೆಳಗಾವಿ 09: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ ಕೆನರಾ ಬ್ಯಾಂಕ್‌ನ 120 ನೇ ಸಂಸ್ಥಾಪನಾ ದಿನದ ಅಂಗವಾಗಿ ಹಾಗೂ ಕೆನರಾ ಬ್ಯಾಂಕ್ ಸಂಸ್ಥಾಪಕರಾದ “ಶ್ರೀ ಅಮ್ಮೆಂಬಳ್ ಸುಬ್ಬರಾವ್ ಪೈ” ಇವರ ಜ್ಞಾಪಕಾರ್ಥವಾಗಿ ಜುಲೈ 01 ರಿಂದ ಜುಲೈ 07 ರ ವರೆಗೆ 120 ಸಸಿಗಳನ್ನು ನೇಡುವುದರ ಮೂಲಕ ಸಪ್ತಾಹವನ್ನು ಪ್ರಾರಂಭಿಸಿ, ಶಿವಾಲಯ ಗಾರ್ಡನ ರಾಮತಿರ್ಥ ನಗರ ಮತ್ತು ಲಕ್ಷ್ಮೀಪುರಿ ಕುಲಕರ್ಣಿ ಲೇಓಟ ಗಾರ್ಡನ್ ಮತ್ತು ಕೆನರಾ ಬ್ಯಾಂಕ್ ಆರ್‌ಸೆಟಿ ಪ್ಲಾಟ ನಂ ಸಿ ಎ 3 ಪಾರ್ಟ ಕಣಬರ್ಗಿ ಇಂಡಸ್ಟ್ರೀಯಲ್ ಎರಿಯಾ ಅಟೋ ನಗರ ಬೆಳಗಾವಿಯಲ್ಲಿ, ಅರಣ್ಯ ಇಲಾಖೆಯ ವಿವಿಧ ಜಾತಿಯ ಮರಗಳ ಸಸಿಗಳನ್ನು ನೆಡುವುದರ ಮೂಲಕ ಸಪ್ತಾಹವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಲಿಡ್ ಡಿಸ್ಟ್ರೀಕ್ಟ ಮ್ಯಾನೇಜರ ಆದ ಪ್ರಶಾಂತ ಘೊಡಕೆ, ಕೆ. ಎಸ್. ಎಸ್ ಎಸ್. ಭಗವಾನ್ ಅನಿಲಕುಮಾರ ವಿ ಡಿವಿಜನಲ್ ಮ್ಯಾನೇಜರ ಕೆನರಾ ಬ್ಯಾಂಕ್‌ನ ಪ್ರಾದೇಶೀಕ ಕಛೇರಿ ಬೆಳಗಾವಿ ಮತ್ತು ಕೆನರಾ ಬ್ಯಾಂಕ್ ಮಹಾಂತೇಶ ನಗರ ಶಾಖೆಯ ಮ್ಯಾನೇಜರ ಆದ ಮಾನ್ಸಿ ಪನ್ಸಾರೇ ಹಾಗೂ ಕೆನರಾ ಬ್ಯಾಂಕ್ ಆರ್‌ಸೆಟಿ ನಿರ್ದೇಶಕರಾದ ಪ್ರವೀಣ ಕೆ. ಎಸ್, ಸಿಬ್ಬಂದಿ ವರ್ಗದದವರು ಮತ್ತು ಬ್ಯೂಟಿ ಪಾರ್ಲರ ಮ್ಯಾನೇಜಮೆಂಟ್ ಹಾಗೂ ಕಂಪ್ಯೂಟರ ಹಾರ್ಡವೇರ ನೇಟ್‌ವರ್ಕಿಂಗ ತರಬೇತಿಯ ಶಿಭಿರಾರ್ಥಿಗಳು ಈ 120 ಸಸಿ ನೆಡುವ ಸಪ್ತಾಹದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣಿಬೂತರಾಗಿರುತ್ತಾರೆ. ಸಪ್ತಾಹದಲ್ಲಿ ಸುತ್ತ ಮುತ್ತಲಿನ ನಿವಾಸಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.
ಇದೆ ಸಂದರ್ಭದಲ್ಲಿ ಸುತ್ತ ಮುತ್ತಲಿನ ನಿವಾಸಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕ್ ಬೆಳದು ಬಂದ ರೀತಿ ಹಾಗೂ ಗ್ರಾಹಕರಿಗೆ ದೊರಕುವ ಎಲ್ಲ ರೀತಿಯ ಬ್ಯಾಂಕಿಂಗ್ ಸೇವಾ ಸೌಲಭ್ಯಗಳ ಬಗ್ಗೆ, ಪ್ರಚಲಿತ ಸ್ಕೀಮ್‌ಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಪ್ತಾಹದಲ್ಲಿ ಗಿಡ ನೆಡುವುದರಿಂದ ಆಗುವ ಪ್ರಯೋಜನಗಳು ಹಾಗೂ ನಮ್ಮ ನಾಳೆಯ ಜೀವನಕ್ಕಾಗಿ ನಮ್ಮ ಮುಂದಿನ ಪೀಳಿಗೆಗಾಗಿ ಗಿಡ ನೆಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾತಯಿತು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 