ಮಕ್ಕಳ ಶಿಕ್ಷಣ ಬಲಪಡಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ಸಿಆರ್‌ಪಿ ಕರುಣಾಕರ
CRP Karunakara holds a learning festival to strengthen children's education
ಲೋಕದರ್ಶನ ವರದಿ
ಕಂಪ್ಲಿ 13: ತಾಲೂಕಿನ ದೇವಸಮುದ್ರ ಕ್ಲಸ್ಟರ್ ಮಟ್ಟದ ಚಿಕ್ಕಜಾಯಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಸಮುದ್ರ ಸಮೂಹ ಸಂಪನ್ಮೂಲ ಕೇಂದ್ರದಿಂದ ಕಲಿಕಾ ಹಬ್ಬ ಗುರುವಾರ ಸಂಭ್ರಮದಿಂದ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಯಮನಪ್ಪ ಕಲಿಕಾ ಹಬ್ಬ ಕಾರ್ಯಕ್ರಮ ಚಿಹ್ನೆ ಉದ್ಘಾಟಿಸಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿಯೇ ಸರ್ಕಾರ ಕಲಿಕಾ ಹಬ್ಬ ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಕಲಿಕಾ ಬೋಧನೆಯೊಂದಿಗೆ ಆಟೋಟದ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಎಂದರು.
ಸಿಆರ್‌ಪಿ ಕರುಣಾಕರ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಶಿಕ್ಷಣ ಬಲಪಡಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ರೂಪಿಸಲಾಗಿದೆ. ಕೋವಿಡ್ ವೇಳೆ ಇಡೀ ದೇಶ ಸ್ತಬ್ಧವಾಗಿತ್ತು. ಮತ್ತು ಮಕ್ಕಳು ಶಿಕ್ಷಣದಿಂದ ಹಿಂದುಳಿದರು. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿತ್ತು. ಇದನ್ನು ಮನಗಂಡು ಸರ್ಕಾರ ಓದು ಮತ್ತು ಎಫ್‌ಎಲ್‌ಎನ್ ಆಧರಿತವಾಗಿ ಕಲಿಕಾ ಹಬ್ಬದ ಮೂಲಕ ಕಲಿಕೆಗೆ ಹೆಚ್ಷಿನ ಆಧ್ಯತೆ ನೀಡಿದೆ.
ಹಿಂದುಳಿದ ಮಕ್ಕಳಿಗೆ ಕಲಿಕೆ ನೀಡಬೇಕಾಗಿದೆ. ಪಾಠದ ಜೊತೆಗೆ ವಿವಿಧ ವಿಭಿನ್ನ ಕಾರ್ಯಚಟುವಟಿಕೆಯೊಂದಿಗೆ ಕಲಿಕೆಗೆ ಸ್ಫೂರ್ತಿ ನೀಡಲಾಗುತ್ತಿದೆ. ಎಂದರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ. ಹಬ್ಬದಲ್ಲಿ ಕಲಿಕೆ ಮಕ್ಕಳಿಗೆ ಹೊರೆ ಹಾಗೂ ಒತ್ತಡ ಉಂಟು ಮಾಡುವುದಿಲ್ಲ. ಆನಂದಮಯ ಚಟುವಟಿಕೆಯ ರೂಪದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ನಂತರ ಮಕ್ಕಳ ಕಲಿಕೋತ್ಸವವನ್ನು ವೀಕ್ಷಿಸಿದರು.
ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಕವಿತಾ ಪಂಪನಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಮುಖ್ಯಗುರು ಕೆ.ಮಲ್ಲಿಕಾರ್ಜುನ, ಸ್ಥಳದಾನಿ ಅಮರೇಗೌಡ, ಬಾಬು ಜಗಜೀವನ್‌ರಾವ್ ಅಧ್ಯಕ್ಷ ಪಂಪಾಪತಿ, ಮುಖಂಡರಾದ ಪಕ್ಕೀರ್ಪ, ಕೃಷ್ಣಪ್ಪ, ವಿರೇಶ, ಜಡೆಪ್ಪ, ಮಾರೆಣ್ಣ, ಹುಲುಗಪ್ಪ, ವೀರಕುಮಾರ, ಮುದುಕಪ್ಪ, ಮಂಜುನಾಥ, ನಾಗವೇಣಿ, ಪ್ಯಾರಿಜಾನ್, ಗಂಗಮ್ಮ ಸೇರಿದಂತೆ ಶಿಕ್ಷಕರು, ಮಕ್ಕಳು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 