ಸಿಪಿಐ ರಮೇಶ ಛಾಯಗೋಳ ಅವರಿಗೆ ಒಲಿದ ಸಿಎಂ ಚಿನ್ನದ ಪದಕ
CPI's Ramesh Chhayagol awarded CM's gold medal
ಲೋಕದರ್ಶನ ವರದಿ
ದೇವರಹಿಪ್ಪರಗಿ 27: ಬೆಂಗಳೂರಿನ ಸುದ್ದಗುಂಟೆಪಾಳ್ಯ ವೃತ್ತ ಪೊಲೀಸ್ ನೀರೀಕ್ಷಕರಾಗಿ ಕಾರ್ಯ ಮಾಡುತ್ತಿರುವ ರಮೇಶ ಛಾಯಗೋಳ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಕಟವಾಗಿದೆ. ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ರಮೇಶ ಛಾಯಗೋಳ ಜನಪರ ಅಧಿಕಾರಿಯಾಗಿದ್ದು, ಅನೇಕ ಅಪರಾಧ ಚಟುವಟಿಕೆ ತಡೆದು, ಆರೋಪಿಗಳಿಗೂ ಕೋಳ ತೊಡಿಸಿದ್ದಾರೆ ಎಂಬುದು ಉಲ್ಲೇಖನೀಯ.2007ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿ ಹುಕ್ಕೇರಿ, ಹುಬ್ಬಳ್ಳಿ, ಮನಗೂಳಿ, ಬಬಲೇಶ್ವರ ಹಾಗೂ ವಿಜಯಪುರದಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಸಿಪಿಐ ಆಗಿ ಯಮಕನಮರಡಿಯಲ್ಲಿ ಸೇವೆ ಸಲ್ಲಿಸಿ ಇವಾಗ ಬೆಂಗಳೂರಿನ ಸದ್ದುಗುಂಟೆ ಪಾಳ್ಯ ವೃತ್ತ ಪೊಲೀಸ್ ನೀರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಇವರಿಗೆ ಕೇಂದ್ರೀಯ ಗ್ರಹ ಮಂತ್ರಿಗಳ ಇಲಾಖೆಯ ಅತ್ಯುನ್ನತ ಪ್ರಶಸ್ತಿ ದೊರಕಿದ್ದು ವಿಶೇಷವಾಗಿದೆ.ಏಪ್ರಿಲ್ 2 ಪೊಲೀಸ್ ಧ್ವಜ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸರ್ಕಾರಿ ನೌಕರರು ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸಿದ್ದರೆ, ಸರ್ಕಾರ ಗುರುತಿಸುತ್ತದೆ. ನಮ್ಮ ಸಹೋದರ 2025ನೇ ಸಾಲಿನ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದು,ಹೆಮ್ಮೆಯ ವಿಷಯವಾಗಿದೆ ಹಾಗೂ ಇತರರಿಗೆ ಮಾದರಿಯಾಗಿದ್ದಾರೆ.ಕಳೆದ ವರ್ಷ ಕೇಂದ್ರೀಯ ಗೃಹ ಮಂತ್ರಿಗಳ ಇಲಾಖೆಯ ಅತ್ಯುನ್ನತ ಪ್ರಶಸ್ತಿ ದೊರಕಿದ್ದು,ಈ ಬಾರಿ 2025 ನೇ ಸಾಲಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಏಪ್ರಿಲ್ 2ರಂದು ಸಿಎಂ ಪದಕ ಪ್ರದಾನ ಮಾಡಲಿದ್ದು ಇದು ಅವರ ಜೀವಮಾನದ ಅತ್ಯುತ್ತಮ ಕ್ಷಣವಾಗಲಿದೆ. ಅವರಿಗೆ ಗ್ರಾಮಸ್ಥರ ಹಾಗೂ ಅಭಿಮಾನಿಗಳ ಪರವಾಗಿ ಅಭಿನಂದನೆಗಳು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 