ಒಳ ಮೀಸಲಾತಿ ಕಲ್ಪಿಸಲು ಸಿಎಂ ಘೋಷಣೆಗೆೆ ಹರ್ಷ
CM's announcement to provide internal reservation is a cause for joy
ಒಳ ಮೀಸಲಾತಿ ಕಲ್ಪಿಸಲು ಸಿಎಂ ಘೋಷಣೆಗೆೆ ಹರ್ಷ
ರಾಯಬಾಗ, 21 ; ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಗುರುವಾರ ಪಟ್ಟಣದಲ್ಲಿ ತಾಲೂಕು ಮಾದಿಗ ಸಮುದಾಯದ ಮುಖಂಡರು ಹರ್ಷವ್ಯಕ್ತಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಸುರೇಶ ಐಹೊಳೆ ಅವರು, ಒಳ ಮೀಸಲಾತಿಗಾಗಿ ಮಾದಿಗ ಸಮುದಾಯ ದೀರ್ಘವಾಗಿ ಹೋರಾಟ ನಡೆಸಿದ ಫಲವಾಗಿ ಇಂದು ಒಳ ಮೀಸಲಾತಿ ಜಾರಿ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು ಅತ್ಯಂತ ಸಂತೋಷದ ವಿಷಯವಾಗಿದ್ದು, ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಎಲ್ಲ ಎಸ್.ಸಿ, ಎಸ್.ಟಿ ಸಚಿವರಿಗೆ, ವಿರೋಧ ಪಕ್ಷದ ನಾಯಕರಿಗೆ ಅಭಿನಂದಿಸುವುದಾಗಿ ಹೇಳಿದರು.
ಸುಪ್ರೀಂಕೋರ್ಟ ತೀರ್ಿನ ತತ್ವದ ಅನುಸಾರ ಪರಿಶಿಷ್ಟ ಜಾತಿಗಳ ಮೀಸಲು ಉಪವರ್ಗೀಕರಣ ಮಾಡಲಾಗಿದ್ದು, ಎ.ಜೆ.ಸದಾಶಿವ ಆಯೋಗದ ನಿರ್ದೇಶನದಂತೆ ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ ಏಕ ಸದಸ್ಯ ಆಯೋಗ ನೀಡಿದ ವರದಿಯನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಶೈಕ್ಷಣಿಕ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಉದ್ಯೋಗಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರು ಅವಕಾಶ ವಂಚಿತಗೊಂಡಿದ್ದು, ಈಗ ಒಳ ಮೀಸಲಾತಿ ಜಾರಿಯಿಂದ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಭಾರತ ದೇಶದಲ್ಲಿ ಎಲ್ಲರಿಗೂ ಸಮಪಾಲು ಸಮಬಾಳು ದೊರಕಬೇಕೆಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಇಂದು ಈಡೇರಿದಂತಾಗಿದೆ ಎಂದರು.
ಮುಖಂಡರಾದ ಮಹಾವೀರ ಐಹೊಳೆ, ಲಕ್ಕಪ್ಪ ಪೂಜಾರಿ, ಮಹೇಶ ಐಹೊಳೆ, ಪ್ರಭು ಮೈಶಾಳೆ, ಭೀಮಸಿ ಮೇತ್ರಿ, ರಾಮಣ್ಣ ಮಾದರ, ಮುದಕಪ್ಪ ಮೇಗಾಡಿ, ಕಾಡೇಶ ಐಹೊಳೆ, ಪ್ರಮೋದ ಕುರಣಿ, ಉತ್ತಮ ಕಾಂಬಳೆ, ರೇಖಾ ಭಂಡಾರಿ, ಭಾರತಿ ಮೈಶಾಳೆ, ಸಾವಿತ್ರಿ ಹಳಕಲ, ಸಂಪತ್ತಾ ಮೈಶಾಳೆ, ಶಾರದಾ ಭಂಡಾರೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 