ಸಿ. ಎಸ್‌. ಪಾಟೀಲ ಬಾಲಕರ ಪ್ರೌಢಶಾಲೆಯ ನೂತನ ಮುಖ್ಯೋಪಾಧ್ಯಾಯ ಎನ್‌.ಎಸ್‌. ಹಂಜಗಿ ಅವರಿಗೆ ಸನ್ಮಾನ

ಸಿ. ಎಸ್‌. ಪಾಟೀಲ  ಬಾಲಕರ ಪ್ರೌಢಶಾಲೆಯ ನೂತನ ಮುಖ್ಯೋಪಾಧ್ಯಾಯ ಎನ್‌.ಎಸ್‌. ಹಂಜಗಿ ಅವರಿಗೆ ಸನ್ಮಾನ C. S. Patil Boys' High School's new headmaster N.S. Hanjagi felicitated

ಗದಗ 10:  ನೂತನ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ ಎನ್‌. ಎಸ್‌. ಹಂಜಗಿ ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವಂತಾಗಲಿ ಎಂದು ಸಾಂಸ್ಕೃತಿಕ ಚಿಂತಕ ಡಾ. ಬಸವರಾಜ ಧಾರವಾಡ ಹೇಳಿದರು. ಸಿ .ಎಸ್‌. ಪಾಟೀಲ ಬಾಲಕರ ಪ್ರೌಢಶಾಲೆಗೆ ನೂತನ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ ಎನ್ .ಎಸ್‌. ಹಂಜಗಿ ಅವರು ಖುಷಿ ಹಂಚಿಕೊಳ್ಳಲು ಸ್ನೇಹಿತರೊಂದಿಗೆ ತಮ್ಮ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನ ಸನ್ಮಾನಿಸಿ ಮಾತನಾಡಿದ ಡಾ ಬಸವರಾಜ ಧಾರವಾಡ ಅವರು ಪ್ರಸ್ತುತ ಖಾಸಗಿ ಶಾಲೆಗಳು ಸಾಕಷ್ಟು ಜ್ವಲಂತ ಸಮಸ್ಯೆಗಳನ್ನ ಎದುರಿಸುತ್ತಿವೆ ಅವುಗಳತ್ತ ವಿಶೇಷ ಗಮನ  ಹರಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣದತ್ತ ಹೆಚ್ಚು ಕಾಳಜಿ ವಹಿಸಿ. ಮಕ್ಕಳ ಹಿತಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಿ .ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ನೀಡುವುದರಿಂದ ಶಾಲೆಯ ಕೀರ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಿದರು.

ತಮ್ಮ ಮೂರು ದಶಕದ ಅನುಭವವನ್ನು ಬಳಸಿಕೊಂಡು ಶಿಕ್ಷಣ ಇಲಾಖೆ ಮಾರ್ಗದರ್ಶನ, ಹಿತೈಷಿಗಳ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಲಹೆಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಬೆಳಗಿಸಿ ತಮ್ಮ ಸೇವಾ ಅವದಿಯನ್ನ ಸಾರ್ಥಕ ವಾಗಿಸುವಲ್ಲಿ ಮುಂದಾಗಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿಮಗೆ ಎಲ್ಲ ರೀತಿಯ ಸಹಕಾರವನ್ನು ನೀಡುವದಾಗಿ ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯ ಎಸ್‌.ಎಂ. ಅಗಡಿಯವರು ಮಾತನಾಡಿ ಶಾಲೆಯ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿಯವರ ಹಾಗೂ ಎಲ್ಲ ಸಿಬ್ಬಂದಿಯವರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಿ ತಮ್ಮ ಸೇವಾ ಅವದಿಯನ್ನ ಸಾರ್ಥಕವಾಗಿಸಿಕೊಂಡರೆ ಶಿಕ್ಷಣ ಇಲಾಖೆ, ಸಮಾಜ ,ವಿಧ್ಯಾರ್ಥಿ ಸಮೂಹ  ತಮ್ಮನ್ನು ಎಂದು ಮರೆಯಲಾರರು ಅದರತ್ತ ತಮ್ಮ ಗಮನ ಹರಿಸಿ ಎಂದು ಹೇಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎನ್‌. ವಿ .ಪಾಟೀಲ, ಎಂ. ಎಸ್‌. ಸರ್ವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.