ಡಾ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

ಡಾ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ Blood donation camp on the occasion of Dr. Ambedkar's Jayanti

ಸವಣೂರ 16 :  ಡಾ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ ಅಂಗವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ಸವಣೂರು ಘಟಕ ಇವರ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಏರಿ​‍್ಡಸಲಾಗಿತ್ತು. ಘಟಕದ ವ್ಯವಸ್ಥಾಪಕರಾದ  ಟಿ. ಎಸ್‌. ಮುನ್ನಾಸಾಬ್ ಅವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಡಾ ಅಂಬೇಡ್ಕರ್ ಅವರು ರೂಪಿಸಿದ ನಮ್ಮ ಸಂವಿಧಾನ ಸಮಾನತೆ ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ದೇಶಕ್ಕೆ ನೀಡಿದ್ದು ಮಹತ್ವವಾಗಿದೆ.

ಅವರ ಆದರ್ಶಗಳು ಸದಾ ನಮ್ಮೆಲ್ಲರಗೂ ದಾರಿ ತೋರಿಸುತ್ತಿವೆ ನಮ್ಮ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ, ಕಣ್ಣಿನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಇನ್ನೂ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.ಪ್ರಸ್ತಾಪವಾಗಿ ಮಾತನಾಡಿದ ಚಾಲಕರಾದ ಬಿ.ಆರ್ ಫಕೀರಣ್ಣನವರ ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರ ಜನ್ಮದಿನವನ್ನು ನೆನಪಿಟ್ಟುಕೊಳ್ಳಲು ಪ್ರತಿ ವರ್ಷ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.

ಭಾರತದ ಇತಿಹಾಸದಲ್ಲಿ ಅಂಬೇಡ್ಕರ್ ಅವರು ಮಹತ್ವದ ವ್ಯಕ್ತಿಯಾಗಿದ್ದಾರೆ. ಅವರು ಕೇವಲ ರಾಜಕಾರಣಿ, ಕಾನೂನು ತಜ್ಞ ಅಥವಾ ಸಮಾಜ ಸುಧಾರಕರಾಗಿರಲಿಲ್ಲ, ಬದಲಾಗಿ ಅವರು ದೀನದಲಿತರ, ಶೋಷಿತರ  ಧ್ವನಿಯಾಗಿದ್ದರು. ಅವರ ಜೀವನ ಮತ್ತು ಕಾರ್ಯಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿವೆ. ಅಂಬೇಡ್ಕರ್ ಜಯಂತಿಯನ್ನು ಅವರ ಜನ್ಮದಿನಾಚರಣೆಯಷ್ಟೇ ಅಲ್ಲದೆ, ಅವರ ಆದರ್ಶಗಳು ಮತ್ತು ತತ್ವಗಳನ್ನು ಸ್ಮರಿಸುವ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ಅವಕಾಶವಾಗಿ ಆಚರಿಸಲಾಗುತ್ತದೆ.

ಈ ದಿನವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂಬ ಅವರ ಸಂದೇಶವನ್ನು ಸಾರುತ್ತದೆ ಎಂದರು.  ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕ ತಾಂತ್ರಿಕ ಅಧಿಕಾರಿಗಳಾದ ಪ್ರಸಾದ್ ಎಂ, ಸುರೇಶ ಛಲವಾದಿ, ವಾಯ್ ಎನ್ ದಾಸರ, ಎನ್ ವೈ ಛಲವಾದಿ, ರಂಗನಾಥ್, ಇಮಾಮ್ ಸಾಬ್ ನಾಯ್ಕೋಡಿ, ಗಂಗಾಧರ್ ಪಶುಪತಿಹಾಳ, ಮುತ್ತೇಶ್ ಭೋವಿ, ರವಿ ಕರಿಗಾರ ತಾಲೂಕು ಆಸ್ಪತ್ರೆ ರಕ್ತ ಶೇಖರಣಾ ಘಟಕದ ಮಹಾಂತೇಶ ಹೊಳೆಮ್ಮನವರ, ಪ್ರವೀಣ್ ಪಾಟೀಲ್ ಇತರರು ಉಪಸ್ಥಿತರಿದ್ದರು.