ಎಚ್. ಕೆ. ಪಾಟೀಲರಿಗೆ 73ನೇ ಜನ್ಮದಿನದ ಶುಭಾಶಯ: ವಿದ್ಯಾರ್ಥಿನಿಯಿಂದ ವಿಶಿಷ್ಟ ಭಾವಚಿತ್ರ ಕಲಾಕೃತಿ ಅರೆ್ಣ
Birthday wishes to H. K. Patil on his 73rd birthday: Student presents a unique portrait artwork
ಲೋಕದರ್ಶನ ವರದಿ
ಗದಗ 16 : ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಡಾ. ಎಚ್. ಕೆ. ಪಾಟೀಲ ಅವರ 73ನೇ ಜನ್ಮದಿನಾಚರಣೆಯ ಪ್ರಯುಕ್ತ, ಗದಗ ನಗರದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ ಶ್ರೀ ಸಿ.ಡಿ.ಒ. ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ್ ಅವರು ತಮ್ಮ ವಿಭಿನ್ನ ಕಲಾ ಪ್ರತಿಭೆಯ ಮೂಲಕ ಎಚ್. ಕೆ. ಪಾಟೀಲ ಅವರ ಭಾವಚಿತ್ರವನ್ನು ರಚಿಸಿ ಗೌರವ ಸಲ್ಲಿಸಿದರು. ಆಗಸ್ಟ್ 15ರಂದು ಗದಗದಲ್ಲಿ ಎಚ್. ಕೆ. ಪಾಟೀಲ ಸೇವಾ ತಂಡದ ವತಿಯಿಂದ ಆಯೋಜಿಸಲಾಗಿದ್ದ ‘ನಿಮ್ಮ ಸೇವೆಗೆ ಅವಕಾಶ ಕೊಡಿ’ ಎಂಬ ಬೃಹತ್ ಸಮಾವೇಶದಲ್ಲಿ, ವಿದ್ಯಾರ್ಥಿನಿ ಅನನ್ಯ ಅವರು ತಮ್ಮ ಕೈಬರಹದ ಕಲಾಕೃತಿಯಲ್ಲಿ ಮೂಡಿಸಿದ ಎಚ್. ಕೆ. ಪಾಟೀಲ ಅವರ ಭಾವಚಿತ್ರವನ್ನು ಅವರಿಗೆ ಅರ್ಿಸಿ, ನೆಚ್ಚಿನ ನಾಯಕನಿಗೆ 73ನೇ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಎಚ್. ಕೆ. ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಎಲ್. ಬುರುಬುರೆ, ಕೋಆರ್ಡಿನೇಟರ್ ಬಿ. ಬಿ. ಅಸೂಟಿ, ಪರ್ಪ ಫಕೀರ್ಪ ಕಮತರ, ರಾಮಣ್ಣ ಬಾಕಳೆ, ಅಂಗಾಂಗ ದಾನ ಸಮಿತಿಯ ಚೇರ್ಮನ್ ಡಾ. ಪ್ಯಾರಾಲಿ ನೂರಾನಿ, ಶುದ್ಧ ನೀರಿನ ಘಟಕದ ಅಧ್ಯಕ್ಷ ವಿಜಯಕುಮಾರ ಹಾಲಮಠ, ಉಪಾಧ್ಯಕ್ಷ ಮಂಜುನಾಥ ಜೋಗದಂಡಕರ್, ಸಾಗರ ಬಳ್ಳಾರಿ, ಗದಗ-ಬೆಟಗೇರಿ ನಗರಸಭೆಯ 20ನೇ ವಾರ್ಡ್ನ ನಗರಸಭಾ ಸದಸ್ಯೆ ಶ್ರೀಮತಿ ಪರ್ವೀನಬಾನು ಮುಲ್ಲಾ, ಕುಮಾರಿ ಸೌಜನ್ಯ ರಾಘವೇಂದ್ರ ಪಾಲನಕರ್, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಮುನಾಫ್ ಮುಲ್ಲಾ, ಎಚ್. ಕೆ. ಪಾಟೀಲ ಸೇವಾ ತಂಡದ ಕ್ಯಾಪ್ಟನ್ ಶಿವಪ್ಪ ತಿಪ್ಪಣ್ಣ ಬಳ್ಳಾರಿ, ರಾಘವೇಂದ್ರ ಪಾಲನಕರ್, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನನ್ಯ ಅವರ ಕಲಾ ಪ್ರತಿಭೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ, ಅವರ ಮುಂದಿನ ಶೈಕ್ಷಣಿಕ ಹಾಗೂ ಕಲಾ ಬದುಕಿಗೆ ಶುಭ ಹಾರೈಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 