ಮಹಾರಾಷ್ಟ್ರ ಮಾದರಿ ಬೆಲೆ ನಿಗದಿಗೆ ರೈತರಿಂದ ಬೈಕ್ ರ್ಯಾಲಿ ! ಹಗಲಿರುಳು ದುಡಿದು ಸಾಲದಲ್ಲಿಯೇ ಬದುಕು ಸವೇಸುತ್ತಿರುವವರು ರೈತ ಮಿತ್ರರು.

 ಮಹಾರಾಷ್ಟ್ರ ಮಾದರಿ ಬೆಲೆ ನಿಗದಿಗೆ ರೈತರಿಂದ ಬೈಕ್ ರ್ಯಾಲಿ ! ಹಗಲಿರುಳು ದುಡಿದು ಸಾಲದಲ್ಲಿಯೇ ಬದುಕು ಸವೇಸುತ್ತಿರುವವರು ರೈತ ಮಿತ್ರರು. Bike rally by farmers for Maharashtra model pricing! Those who work day and night and live on debt a

ಲೋಕದರ್ಶನ ವರದಿ 

ಮಹಾರಾಷ್ಟ್ರ ಮಾದರಿ ಬೆಲೆ ನಿಗದಿಗೆ ರೈತರಿಂದ ಬೈಕ್ ರ್ಯಾಲಿ ! ಹಗಲಿರುಳು ದುಡಿದು ಸಾಲದಲ್ಲಿಯೇ ಬದುಕು ಸವೇಸುತ್ತಿರುವವರು ರೈತ ಮಿತ್ರರು. 

ಮಹಾಲಿಂಗಪುರ, 02 : ಮಹಾರಾಷ್ಟ್ರ ಮಾದರಿ ಬೆಲೆ ನಿಗದಿಗೊಳಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಬಿಸಬೇಕೆಂದು ಬಾಗಲಕೋಟ, ಬೆಳಗಾವಿ ಮತ್ತು ವಿಜಯಪೂರ ಜಿಲ್ಲೆಗಳ ರೈತರ ಹೋರಾಟಕ್ಕೆ ಬೆಂಬಲಾರ್ಥವಾಗಿ ಮಹಾಲಿಂಗಪುರ ವಲಯದ ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ರೈತರು ಸಹ ಕೈಜೋಡಿಸಿ ಮಹಾಲಿಂಗಪುರ ದಿಂದ ಗುರ್ಲಾಪೂರ ಕ್ರಾಸ್ ವರೆಗೆ ಬೈಕ್ ರ್ಯಾಲಿ ನಡೆಸಿದರು. 

ಭಾನುವಾರ ಮಧ್ಯಾಹ್ನ ಪಟ್ಟಣದ ಎಪಿಎಂಸಿ ಗಣೇಶ ದೇವಸ್ಥಾನದಿಂದ ತಾಲೂಕು ಹೋರಾಟ ಸಮಿತಿ, ರಾಜ್ಯ ರೈತ ಸಂಘ, ಹಸಿರು ಸೇನೆ, ನೇಕಾರ ಸೇವಾ ಸಂಘ, ಮಾಲದಾರ ಸಂಘ ಮತ್ತು ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಬೈಕ್ ರ್ಯಾಲಿ ಹೊರಡಿ ಮುಷ್ಕರ ನಿರತ ಸ್ಥಳಕ್ಕೆ ತಲುಪಿತು. 

ರ್ಯಾಲಿ ಆರಂಭಕ್ಕೂ ಮುನ್ನ ಮುಖಂಡರಾದ ಧರೆಪ್ಪ ಸಾಂಗ್ಲಿಕರ ಮಾತನಾಡಿ, ರೈತ ಬೆಳೆದ ಕಬ್ಬಿನಿಂದ ಸಕ್ಕರೆ, ಎಥೆನಾಲ್, ಲಿಕರ್, ವಿದ್ಯುತ್ ಮತ್ತು ಇನ್ನಿತರೆಗಳನ್ನು ತಯಾರಿಸಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಆರ್ಥಿಕವಾಗಿ ಸುಭದ್ರವಾಗಿದ್ದಾರೆ.  

ಹಗಲಿರುಳು ದುಡಿದು ಸಾಲದಲ್ಲಿಯೇ ಬದುಕು ಸವೇಸುತ್ತಿರುವವರು ರೈತ ಮಿತ್ರರು.ರೈತರೆನೂ ಹೆಚ್ಚಿನದನ್ನು ಕೇಳುತ್ತಿಲ್ಲ ಪಕ್ಕದ ರಾಜ್ಯದಲ್ಲಿ ನೀಡುತ್ತಿರುವ ಹಣ ನಿಗದಿಗೊಳಿಸಿ ಕಾರ್ಖಾನೆಗಳನ್ನು ಆರಂಭಿಸಲು ಮನವಿ ಮಾಡಿದರು. ತಾವು ಮೊಂಡುತನ ಪ್ರದರ್ಶಿಸಿದರೆ ಬೇಡಿಕೆ ಈಡೇರುವವರೆಗೆ ರೈತರು ಹೋರಾಟದಿಂದ ವಿಮುಖರಾಗುವುದಿಲ್ಲ.ಇದರ ಗಂಭೀರತೆ ಮನಗಂಡು ಹೋರಾಟ ಉಗ್ರ ಸ್ವರೂಪ ಪಡೆಯುವ ಮೊದಲು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು. 

ಇನ್ನೋರ್ವ ರೈತ ಸಂಘ ಹಸಿರು ಸೇನೆಯ ಸಂಚಾಲಕ ಗಂಗಾಧರ ಮೇಟಿ ಮತ್ತು ಮುಖಂಡ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಈಗಾಗಲೇ ನೆರೆ ರಾಜ್ಯ ಮಹಾರಾಷ್ಟ್ರದ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ 3400 ಹಣ ನಿಗದಿ ಮಾಡಿ ಕಾರ್ಖಾನೆಗಳನ್ನು ಆರಂಭಿಸಿದ್ದಾರೆ.ಆ ತೆರನಾಗಿ ಈ ಭಾಗದ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಗಳ ಕಾರ್ಖಾನೆ ಮಾಲೀಕರು ದರ ನಿಗದಿಗೊಳಿಸಿ ರೈತರಿಗೆ ಸಹಕರಿಸಬೇಕು. 

ಈಗಾಲೇ ಐದು ದಿನಗಳಿಂದ ಹೋರಾಟ ಆರಂಭವಾಗಿದೆ.ತಾವು ಎಷ್ಟು ವಿಳಂಬ ಧೋರಣೆ ತಾಳುತ್ತಿರೋ ಹೋರಾಟವೂ ಅಷ್ಟೇ ತೀವ್ರತೆ ಪಡೆದುಕೊಳ್ಳುತ್ತದೆ.ಮುಂದೆ ಆಗುವ ಹಾನಿಗೆ ತಾವೆ ಕಾರಣಿಭೂತರಾಗುತ್ತಿರಿ, ಈಗಲೂ ಕಾಲ ಮಿಂಚಿಲ್ಲ ರೈತರ ಬೇಡಿಕೆಗೆ ಸ್ಪಂದಿಸಿ ಎಂದು ಎಚ್ಚರಿಸಿದರು. 

ಈ ರ್ಯಾಲಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ (ರೈತರು) ನೂರಾರು ಬೈಕ್ ಸವಾರರು ಮತ್ತು ಅನೇಕ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ರೈತರು ಪಾಲ್ಗೊಂಡರು.