ಭಾವಿಕಟ್ಟಿರವರ ‘786’ ರ ಗಣಿತ ಪರಿಕಲ್ಪನೆಗಳು ಪುಸ್ತಕ ಲೋಕಾರೆ​‍್ಣ ಸಮಾರಂಭ

 ಭಾವಿಕಟ್ಟಿರವರ ‘786’ ರ ಗಣಿತ ಪರಿಕಲ್ಪನೆಗಳು ಪುಸ್ತಕ ಲೋಕಾರೆ​‍್ಣ ಸಮಾರಂಭ Bhavikatti's '786' Mathematical Concepts Book Launch Ceremony

ಲೋಕದರ್ಶನ ವರದಿ 

ಧಾರವಾಡ 11: ಗಣಿತ ನಮ್ಮ ಭೌದ್ದಿಕ ಸಾಮರ್ಥ್ಯ ಹೆಚ್ಚಿಸಿ ತಾರ್ಕಿಕ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುವದಲ್ಲದೆ, ನಮ್ಮ ನಿತ್ಯ ಜೀವನದಲ್ಲೂ ಹಾಸು ಹೊಕ್ಕಾಗಿದೆ ಎಂದು ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕಿ ಜಯಶ್ರೀ ಕಾರೇಕರ ಅಭಿಪ್ರಾಯ ಪಟ್ಟರು. 

ಅವರು ಕ.ವಿ.ವ ಸಂಘವು ಏರಿ​‍್ಡಸಿದ್ದ ಶ್ರೇಷ್ಠ ಗಣಿತ ತಜ್ಞ ಎಂ.ಎ. ಭಾವಿಕಟ್ಟಿ ಅವರು ರಚಿಸಿದ ‘786’ ರಗಣಿತ ಪರಿಕಲ್ಪನೆಗಳು ಪುಸ್ತಕ ಲೋಕಾರೆ​‍್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೂ ಹಾಗೂ ಧಾರವಾಡ ‘ಡೈಟ್‌’ಗೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಈ ಎರಡೂ ಸಂಸ್ಥೆಗಳು ಕನ್ನಡದ ಜೀವನಾಡಿಗಳು.ಎಂ.ಎ. ಬಾವಿಕಟ್ಟಿಯವರ ಈ ಕೃತಿ 4 ನೇದ್ದಾಗಿದ್ದು ಗಣಿತ ಅಧ್ಯಯನಕಾರರಿಗೊಂದು ಪೂರಕ ಸಾಹಿತ್ಯವಾಗಿದೆ ಎಂದು ಹೇಳಿದರು. 

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಉಮೇಶ ಬೊಮ್ಮಕ್ಕನವರ ಮಾತನಾಡಿ, ಎಂ.ಎ.ಭಾವಿಕಟ್ಟಿ ಅನೇಕ ವರ್ಷಗಳಿಂದ ಡೈಟ್‌ದಲ್ಲಿ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರು ರಚಿಸಿದ ‘789’ ಗಣಿತ ಪರಿಕಲ್ಪನೆಗಳು ಕೃತಿ ನಿರತರಲ್ಲಿ ಖಂಡಿತಾ ಆಸಕ್ತಿ ಮೂಡಿಸುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಯೊಬ್ಬರೂ ಗಣಿತದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. 

ಮಕ್ಕಳ ಸಾಹಿತಿ ಕೆ.ಎಚ್‌.ನಾಯಕ ಮಾತನಾಡಿ, ಗಣಿತ ಎಂದೂ ಕಬ್ಬಿಣದ ಕಡಲೆಯಲ್ಲ. ಆಸಕ್ತಿಯಿಂದ ಅಧ್ಯಯನ ಮಾಡಿದರೆ ಅದು ಅತ್ಯಂತ ಸುಲಭ. ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಎಲ್ಲಾ ವಿಷಯಗಳನ್ನು ಒಬ್ಬರೆ ಬೋಧಿಸುತ್ತಿದ್ದರು. ಇಂದು ವಿಷಯಕ್ಕೊಬ್ಬರು ಪರಿಣಿತ ಶಿಕ್ಷಕರಿದ್ದಾರೆ. ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಗಣಿತವಿಲ್ಲದ ಜೀವನ ಉಹಿಸಿಕೊಳ್ಳುವುದೇ ಕಷ್ಟ.ಸ್ನೇಹಜೀವಿ, ಸದಾ ಹಸನ್ಮುಖಿಯಾದ ಎಂ.ಎ. ಭಾವಿಕಟ್ಟಿ ನಿವೃತ್ತಿ ನಂತರವೂ ಕ್ರಿಯಾಶೀಲರಾಗಿರುವುದು ಅಭಿನಂದನೀಯ ಎಂದರು. 

ವಿಶ್ರಾಂತ ಉಪನ್ಯಾಸಕರಾದ ಕೆ.ಜಿ. ದೇವರಮನಿ ಪುಸ್ತಕ ಪರಿಚಯಿಸಿ ಮಾತನಾಡಿ, ಈ ಕೃತಿ 82 ಪುಟಗಳನ್ನು 25 ಅಧ್ಯಾಯಗಳನ್ನು ಒಳಗೊಂಡಿದೆ. ಗಣಿತಕ್ಕೆ ಪೂರಕವಾದ ಎಲ್ಲಾ ಮೌಲ್ಯಗಳು ಈ ಕೃತಿಯಲ್ಲಿವೆ. ಅಕ್ಷರಸ್ಥ ಹಾಗೂ ಅನಕ್ಷರಸ್ಥರಿಬ್ಬರು ಪ್ರತಿನಿತ್ಯ ಬಳಸುವ ತಂತ್ರಗಳು ಇಲ್ಲಿವೆ. ಪ್ರಚಲಿತ ತಂತ್ರಜ್ಞಾನದಲ್ಲಿ ಇದೊಂದು ಪೂರಕ ಸಾಹಿತ್ಯವಾಗಲಿದೆ ಎಂದರು. 

ಕೃತಿಕಾರ ಎಂ. ಎ. ಭಾವಿಕಟ್ಟಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನನ್ನ ಈ ಪುಸ್ತಕ ಲೋಕಾರೆ​‍್ಣಗೊಳ್ಳುತ್ತಿರುವುದು ಸಂತಸವಾಗಿದೆ.ಗಣಿತವನ್ನು ಮಕ್ಕಳ ಕಲಿಕೆಗೆ ಸರಳಗೊಳಿಸಲು ಈ 4ನೇ ಕೃತಿ ರಚಿಸಿದ್ದೇನೆ.ಈ ಕೃತಿಎಲ್ಲರಿಗೂ ಹೊಸ ಅನುಭವತರಲಿದೆ ಎಂದರು. 

ರೋಹಿಣಿದಾನಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಸಿದರು. ವೀರಣ್ಣ ಒಡ್ಡೀನ ನಿರ್ವಹಿಸಿ ವಂದಿಸಿದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. 

ಕಾರ್ಯಕ್ರಮದಲ್ಲಿ ವಿಜಯಕುಮಾರ ಬಾಳಿಗಾ, ಎಂ.ಎಂ.ಚಿಕ್ಕಮಠ, ಅಶೋಕ ಮುತ್ತಗಿ, ಗುರುತಿಗಡಿ, ಬಿ.ಜಿ. ಬಾರ್ಕಿ, ಎಂ.ಜಿ.ಸುಬೇದಾರ. ಗಂಗಮ್ಮಕೋಟಿ ಗೌಡರ.ಡಾ. ಮಹಾದೇವಿ ದೊಡಮನಿ.ಎಸ್‌.ಎಸ್‌. ಆವೋಜಿ.ಎಚ್‌.ಎಸ್‌. ಬಡಿಗೇರ.ಜಿ. ಬಿ. ಸಜ್ಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.