ಬೆಟಗೇರಿ: ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
Betageri: Nagara Panchami festival celebrated with enthusiasm
ಲೋಕದರ್ಶನ ವರದಿ
ಬೆಟಗೇರಿ 17: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರವಿವಾರ ಆ.16 ಮತ್ತು ಸೋಮವಾರ ಆ.17ರಂದು ನಾಗರ ಪಂಚಮಿ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ರವಿವಾರ ಆ.16ರಂದು ಬೆಟಗೇರಿ ಗ್ರಾಮದ ಹಲವಡೆವಿರುವ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ, ಪೂಜೆ, ಪುನಸ್ಕಾರ ದೇವಸ್ಥಾನಗಳಲ್ಲಿಯೂ ಸಹ ಪುರಜನರಿಂದ ನಡೆದು, ಸಂಜೆ ಹೊತ್ತಿನಲ್ಲಿ ಎಲ್ಲರ ಮನೆಗಳಲ್ಲಿ ಮಣ್ಣಿನಿಂದ ರೂಪಿಸಿದ ನಾಗರ ಹಾವಿನ ಮೂರ್ತಿಗೆ ಹತ್ತಿ ಅರಳಿಯಿಂದ ಮಾಡಿದ ಹೊಂಗನೂಲು ಹಾಕಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿದ ಬಳಿಕ ರುಚಿಕರ ಉಂಡಿ, ತಿಂಡಿ ತಿನಿಸುಗಳನ್ನು ಆದಿಶೇಷನಿಗೆ ನೈವೇದ್ಯ ಸಮರ್ಿಸಿದ ಬಳಿಕ ಮನೆ ಮಂದಿಯಲ್ಲ ಒಟ್ಟೂಟ್ಟಿಗೆ ಕುಳಿತು ಸಿಹಿ ಸಿಹಿಯಾದ ತರತರಹದ ಉಂಡಿ, ತಿಂಡಿ ತಿನಸುಗಳನ್ನು ತಿಂದು ಆಸ್ವಾದಿಸಿದರು.
ಸೋಮವಾರ ಆ.17ರಂದು ಹೆಣ್ಣು ಮಕ್ಕಳು ನವನವೀನ ಉಡುಗೆ-ತೊಡುಗೆ ತೊಟ್ಟು ಗ್ರಾಮದ ಮನೆಗಳಲ್ಲಿ ಕಟ್ಟಿದ ಜೋಕಾಲಿ ಹಾಗೂ ಊರಿನ ಹಲವಡೆ ಗಿಡ-ಮರಗಳ ರಂಬೆ-ಕೊಂಬೆಗಳಿಗೆ ಹಗ್ಗದಿಂದ ಕಟ್ಟಿದ ಜೋಕಾಲಿ ಜೀಕುವ ಹಾಗೂ ಬಾಲಕರು ಕೊಬರಿ ಬಟ್ಟಲಿನ ಬಿಂಗರಿಕೆ ಆಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಯುವಕ-ಯುವತಿಯರು, ವೃದ್ಧರು ಸೇರಿದಂತೆ ಬಾಲಕ-ಬಾಲಕಿಯರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಜೋಕಾಲಿ ಆಡಿ ನಲಿದು ಸಂಭ್ರಮಿಸಿದರು. ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ಡದಾಗಿದೆ, ಎಲ್ಲರ ಮನೆ-ಮನಗಳಲ್ಲಿ ಸಹೋದರತ್ವದ ಪ್ರತೀಕವಾಗಿದೆ. ನಾಗರ ಪಂಚಮಿ ಹಬ್ಬ ತಮ್ಮ ತಮ್ಮ ಬಂಧು ಬಳಗದವರಿಗೆ ಸಿಹಿಯಾದ ತಿಂಡಿಗಳನ್ನು ಹಂಚಿಕೊಳ್ಳುವ ಅವಿನಾಭಾವ ಸಂಬಂಧ ಬೆಸೆಯುವ ವೈಶಿಷ್ಟ್ಯ ಪೂರ್ಣ ಹಬ್ಬವಾಗಿದೆ ಎಂದು ನಾಗರ ಪಂಚಮಿ ಹಬ್ಬದ ವೈಶೀಷ್ಟ್ಯದ ಕುರಿತು ಸ್ಥಳೀಯ ಹಿರಿಯ ನಾಗರಿಕ ಪತ್ರೆಪ್ಪ ನೀಲಣ್ಣವರ ಹೇಳಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 