ಬೆಸ್ಟ್‌ ಪಿಯು ಸೈನ್ಸ್‌ ಕಾಲೇಜು ಮಿಣಜಗಿ ಕ್ರಾಸ್, ತಾಳಿಕೋಟಿ ಬೆಸ್ಟ್‌ ಟ್ಯಾಲೆಂಟ್ ಏಕ್ಸಾಮ್‌-2026 ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಬೆಸ್ಟ್‌ ಪಿಯು ಸೈನ್ಸ್‌ ಕಾಲೇಜು ಮಿಣಜಗಿ ಕ್ರಾಸ್, ತಾಳಿಕೋಟಿ     ಬೆಸ್ಟ್‌ ಟ್ಯಾಲೆಂಟ್ ಏಕ್ಸಾಮ್‌-2026 ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ  Best PU Science College Minajagi Cross, Talikoti Students' Performance in Best Talent Exam-2026

ಬೆಸ್ಟ್‌ ಪಿಯು ಸೈನ್ಸ್‌ ಕಾಲೇಜು ಮಿಣಜಗಿ ಕ್ರಾಸ್, ತಾಳಿಕೋಟಿ   

ಬೆಸ್ಟ್‌ ಟ್ಯಾಲೆಂಟ್ ಏಕ್ಸಾಮ್‌-2026 ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ  

ತಾಳಿಕೋಟಿ  25: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಬೆಸ್ಟ್‌ ಪಿಯು ಸೈನ್ಸ್‌ ಕಾಲೇಜ್ ಮಿಣಜಗಿ ಕ್ರಾಸ್ ಹಾಗೂ ಭವಿತಾ ನೀಟ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ :25-01-2025 ರಂದು  ಬೆಸ್ಟ ಟ್ಯಾಲೆಂಟ್ ಏಕ್ಸಾಂ ನ್ನು ಏರಿ​‍್ಡಸಲಾಗಿತ್ತು. ಪರೀಕ್ಷೆಯಲ್ಲಿ ಮೊದಲ 5 ಸ್ಥಾನ ಪಡೆದ  ವಿದ್ಯಾರ್ಥಿಗಳಿಗೆ ತಲಾ 2500 ರೂಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಈ ಟ್ಯಾಲೆಂಟ್ ಏಕ್ಸಾಮ್ ಪರೀಕ್ಷೆಯಲ್ಲಿ ಅನೇಕ ಶಾಲೆಗಳ 616 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.  

ಪ್ರಥಮ ಸ್ಥಾನ  ಪಡೆದ ವಿದ್ಯಾರ್ಥಿ  ಕುಮಾರ  ಶ್ರೀಧರ ಜಿ ಪಿ ಹಿರೇಮಠ  , ದ್ವಿತೀಯ  ಸ್ಥಾನ ಪಡೆದ ವಿದ್ಯಾರ್ಥಿನಿ  ಕುಮಾರಿ ಹರ್ಷಿತಾ  , ತೃತೀಯ  ಸ್ಥಾನ ಪಡೆದ ವಿದ್ಯಾರ್ಥಿನಿ  ಕುಮಾರಿ  ಶ್ರೇಯಾ ಪಾಟೀಲ, ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿ  ಕುಮಾರ  ಮಲ್ಲನಗೌಡ ಸಿದ್ದರೆಡ್ಡಿ, ಐದನೇ  ಸ್ಥಾನ ಪಡೆದ ವಿದ್ಯಾರ್ಥಿ  ಕುಮಾರ  ನಿಂಗನಗೌಡ ಸಿದ್ದರೆಡ್ಡಿ,  ಈ ಎಲ್ಲಾ ವಿದ್ಯಾರ್ಥಿಗಳಿಗೆ  ನಗದು ಬಹುಮಾನ  ವಿತರಣೆ ಮಾಡಿ ಜೊತೆಗೆ ಉಚಿತ  ಪ್ರವೇಶವನ್ನು  ನೀಡುವುದಾಗಿ  ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಎಮ್ ಸಜ್ಜನ ಅವರು  ತಿಳಿಸಿದರು. ಈ ಬಹುಮಾನವು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗಿ ಪರಿಣಮಿಸಲಿದೆ ಎಂದರು. ಮುಂದಿನ ದಿನಗಳಲ್ಲಿ ಕೂಡ ಈ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳ ಶ್ರೇಷ್ಠತೆಯನ್ನು ಗುರುತಿಸುವ ಮತ್ತು ಉತ್ತೇಜಿಸುವ ಕಾರ್ಯವನ್ನು ಮುಂದುವರಿಸುವ ಆಶಯವನ್ನು ಸಂಸ್ಥೆ ವ್ಯಕ್ತಪಡಿಸಿದೆ.  

ಈ ಸಂದರ್ಭದಲ್ಲಿ ಭವಿತಾ ನೀಟ್ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ ದತ್ತಾತ್ರೇಯ ಸರ್, , ನಿರ್ದೇಶಕರಾದ ಪುರುಷೋತ್ತಮ್ ಸರ್, ಬೆಸ್ಟ್‌ ಪಿಯು ಸೈನ್ಸ್‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಾರೆಣ್ಣ ಶ್ರೀ ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರಾಂಶುಪಾಲರಾದ ಶ್ರೀ  ಬಸವರಾಜ ಸಜ್ಜನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ಶಿಕ್ಷಕರಾದ ಶ್ರೀ ಮಂಜುನಾಥ ಸರ್ ಅವರು ನಿರೂಪಣೆ ಮಾಡಿದರು.