ಮಲೇಶಿಯಾದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಳ್ಳಾರಿ ವಿದ್ಯಾರ್ಥಿಗಳ ಸಾಧನೆ ಒಂದು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದು ಕೀರ್ತಿ

ಮಲೇಶಿಯಾದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಳ್ಳಾರಿ ವಿದ್ಯಾರ್ಥಿಗಳ ಸಾಧನೆ ಒಂದು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದು ಕೀರ್ತಿ Bellary students' achievements in Malaysia's international karate competition were commendable, winn

ಬಳ್ಳಾರಿ 11:  ಮಲೇಶಿಯಾ ದೇಶದ ಇಪಾನ್ ಸಿಟಿಯಲ್ಲಿ ಮೇ 8ರಿಂದ 10ರವರೆಗೆ ನಡೆದ 22ನೇ ಅಂತರರಾಷ್ಟ್ರೀಯ ಓಕಿನವ ಗೋಜು ರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ-2026ರಲ್ಲಿ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ ಟ್ರಸ್ಟ್‌ (ರಿ) ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದು ರಾಜ್ಯ ಮತ್ತು ಬಳ್ಳಾರಿ ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಸುಲ್ತಾನ್ ಅಜಿಯಾನ್ ಶಾ ಸಂಸ್ಥೆ, ಮಲೇಶಿಯಾ ಆರೋಗ್ಯ ಸಚಿವಾಲಯ ಹಾಗೂ ತನಜುಂಗ್ ರಮಭೂತಾನ್ ಇಪಾನ್ ಸಿಟಿ ವತಿಯಿಂದ ಆಯೋಜಿಸಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಮಲೇಶಿಯಾ, ಭಾರತ, ಇಂಡೋನೇಷ್ಯಾ, ತಜಕೀಸ್ಥಾನ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಸಾವಿರಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಲೇಶಿಯಾ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಮಲೇಶಿಯಾ ದೇಶದ ಕ್ರೀಡಾ ಸಚಿವ ಡಾ. ಮಹಮದ್ ತೌಪಿಕ್ ಜೋಹಾರಿ ಸ್ಪರ್ಧೆಯನ್ನು ಉದ್ಘಾಟಿಸಿದರು.

ಒಕಿನವ ಗೋಜುರಾಯ್ ಕರಾಟೆ ಅಕಾಡೆಮಿಯ ಸ್ಥಾಪಕ ಹಾಗೂ ಗ್ರ್ಯಾಂಡ್ ಮಾಸ್ಟರ್ ಅನಂತನ್ ಸ್ಪರ್ಧೆಯ ಮುಖ್ಯಸ್ಥರಾಗಿದ್ದರು.15 ವರ್ಷದೊಳಗಿನ ವಿಭಾಗದಲ್ಲಿ ಕುಮಾರಿ ನಯೋನಿಕ ಮಂಗಳಂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮತ್ತೊಂದು ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರೆ, ಕುಮಾರಿ ನಕ್ಷತ್ರ ವರ್ಣ ಮಂಗಳಂ ಕುಮಿಟೆ ಮತ್ತು ಕಟಾ ವಿಭಾಗಗಳಲ್ಲಿ ತಲಾ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಜ್ವಲ್ ಗಣೇಶ್ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದು, ಮುದಿಯಮಂ ದೇವಗನ್ ಶ್ರೀವತ್ಸ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಟ್ರಸ್ಟ್ನ ಗೌರವಾಧ್ಯಕ್ಷ ವಿಕ್ರಮ ಮಹಿಪಾಲ್, ಸದಸ್ಯರಾದ ಶಬರಿ ರವಿಚಂದ್ರ, ಆರ್‌.ಎಂ. ಬಸವರಾಜ್, ಹೆಚ್‌.ಕೆ. ಗೌರಿಶಂಕರ್, ಹೆಚ್‌.ಎಂ. ಅಂಬರೀಶ್ ಹಾಗೂ ಟ್ರಸ್ಟ್‌ ಅಧ್ಯಕ್ಷ ಮತ್ತು ತರಬೇತಿದಾರ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ ಅಭಿನಂದಿಸಿದ್ದಾರೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಮಕ್ಕಳಿಗೆ ಇನ್ನಷ್ಟು ಕ್ರೀಡಾ ಪ್ರೋತ್ಸಾಹ ದೊರೆಯಬೇಕೆಂದು ಟ್ರಸ್ಟ್‌ ಮನವಿ ಮಾಡಿದೆ.