ಕೂಡಗಿಯಲ್ಲಿ ಸೆ.10ರಿಂದ ಬಸವೇಶ್ವರ ಜಾತ್ರೆ
Basaveshwara Jatra in Koodagi from September 10
ಕೊಲ್ಹಾರ 09: ತಾಲೂಕಿನ ಕೂಡಗಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಸೆಪ್ಟೆಂಬರ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ ಈ ಜಾತ್ರಾ ಮಹೋತ್ಸವಕ್ಕೆ ಜಗದೀಶ್ವರ ಹಿರೇಮಠ ಹಾಗೂ ಮಸೂತಿಯ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವರು ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕರಾದ ಶಿವಾನಂದ ಎಸ್. ಪಾಟೀಲ ಅವರು ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳು: ಸೆಪ್ಟೆಂಬರ್ 10 ಬೆಳಗ್ಗೆ 10 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಮೇಲ್ಭಾಗದಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಸಂಜೆ 8 ಗಂಟೆಗೆ ವಿವಿಧ ವಾದ್ಯಮೇಳಗಳೊಂದಿಗೆ ಕಳಸಾರೋಹಣ ಹಾಗೂ ಭವ್ಯ ಬಣಬಣ್ಣದ ಮದ್ದುಸುಡುವ ಪ್ರದರ್ಶನ ನಡೆಯಲಿದೆ.ಸೆಪ್ಟೆಂಬರ್ 11 (ಶುಕ್ರವಾರ): ಮಧ್ಯಾಹ್ನ 12 ಗಂಟೆಗೆ ಶಿವಲಿಂಗೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯಮೇಳಗಳೊಂದಿಗೆ ಬಸವೇಶ್ವರ ಪಲ್ಲಕ್ಕಿ ಉತ್ಸವ ಮತ್ತು ಮೆರವಣಿಗೆ ಜರುಗಲಿದೆ.
ರಾತ್ರಿ 9 ಗಂಟೆಗೆ ಕಾರಕಲ್ಲ ಹಾಗೂ ಕಲಗುರ್ಕಿ ಗ್ರಾಮದ ಪ್ರಸಿದ್ಧ ತಂಡಗಳಿಂದ ಸುಪ್ರಸಿದ್ಧ ಡೊಳ್ಳಿನ ಪದಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆಪ್ಟೆಂಬರ್ 12 (ಶನಿವಾರ): ಬೆಳಗ್ಗೆ ಪ್ರಸಿದ್ಧ ಗೀಗೀ ಮೇಳಗಳ ಕಾರ್ಯಕ್ರಮ, ಸಂಜೆ 4 ಗಂಟೆಗೆ ’ಜಂಗಿ ನಿಕಾಲಿ ಕುಸ್ತಿ’ ಪಂದ್ಯಾವಳಿ ನಡೆಯಲಿದೆ. ರಾತ್ರಿ 10 ಗಂಟೆಗೆ ಚಿಕ್ಕಾಲಗುಂಡಿಯ ಅಂಜನಿಪುತ್ರ ನಾಟ್ಯ ಸಂಘದಿಂದ ‘ತಾಯಿ ಇಲ್ಲದ ತವರು’ ಎಂಬ ಹಾಸ್ಯಭರಿತ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ನಿರಂತರ ಅನ್ನಪ್ರಸಾದ ಸೇವೆ: ಜಾತ್ರೆಯ ಅಂಗವಾಗಿ ಸೆಪ್ಟೆಂಬರ್ 11 ಮತ್ತು 12ರಂದು ಭಕ್ತಾದಿಗಳಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶಂಕರಗೌಡ ಎಸ್. ಪಾಟೀಲ ಅವರು ಅನ್ನದಾಸೋಹದ ಸೇವೆಯನ್ನು ವಹಿಸಿಕೊಂಡಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಸವೇಶ್ವರರ ಕೃಪೆಗೆ ಪಾತ್ರರಾಗಬೇಕಾಗಿ ಬಸವೇಶ್ವರ ದೇವಸ್ಥಾನ ಕ್ಷೇಮಾಭಿವೃದ್ಧಿ ಸಂಘ, ಆಡಳಿತ ಮಂಡಳಿ ಹಾಗೂ ಸಮಸ್ತ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 