ಬಸವರಾಜ ಕುರಿಹುಲಿ ಅಚ್ಚರಿ ಗ್ರಾಮ ವಾಸ್ತವ್ಯ: ವಸತಿ ನಿಲಯಗಳ ಪರೀಶೀಲನೆ

ಬಸವರಾಜ ಕುರಿಹುಲಿ ಅಚ್ಚರಿ ಗ್ರಾಮ ವಾಸ್ತವ್ಯ: ವಸತಿ ನಿಲಯಗಳ ಪರೀಶೀಲನೆ Basavaraja Kurihuli's surprise village stay: Inspection of hostels

ಸಂಬರಗಿ 19: ಬೆಳಗಾವಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಮಸ್ತಿ ನಿಲಯ ಇಲಾಖೆಯ ಜಿಲ್ಲೆಯ ಅಧಿಕಾರಿ ಬಸವರಾಜ ಕುರಿಹುಲಿ ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಯಾರಿಗೂ ಸೂಚನೆ ನೀಡದೇ ವಾಸ್ತವ್ಯ ಮಾಡಿ ಖುದ್ದು ಪರೀಶೀಲನೆಗೆ ಮುಂದಾಗಿದ್ದಾರೆ. 

ಅವರು ಇಂದು ಬೆಳಿಗ್ಗೆ 7 ಗಂಟೆಗೆ  ಮಧಭಾವಿಯಲ್ಲಿರುವ ವಸ್ತಿ ನಿಲಯಕ್ಕೆ ಭೇಟಿ ನೀಡಿ ಆಹಾರ ಸ್ವಚ್ಛತೆಯನ್ನು ಪರೀಶೀಲಿಸಿದರು ಮತ್ತು ಸಮಯಕ್ಕೆ ಸರಿಯಾಗಿ ಬರದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಅಧಿಕಾರಿಗೆ ಆದೇಶಿಸಿದರು. ಗಡಿ ಪ್ರದೇಶದ ಅನೇಕ ವಸತಿ ನಿಲಯಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸೂಕ್ತ ಸೂಚನೆಗಳನ್ನು ನೀಡಿದರು.

ಸರ್ಕಾರಿ ಆದೇಶದಂತೆ ಹಾಜರಿರುವ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ಸೂಚಿಸಿದರು. ವಿದ್ಯಾರ್ಥಿಗಳಿಗೆ ಇರುವ ಯಾವುದೇ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಬೇಕು  ಎಂದು ಸೂಚಿಸಿದರು. ಆಹಾರ ವಿತರಣಾ ಪುಸ್ತಕವನ್ನು ಪರೀಶೀಲಿಸಿದರು.

ಅನೇಕ ಸ್ಥಳಗಳಲ್ಲಿ ವ್ಯತ್ಯಾಸಗಳು ಕಂಡುಬಂದ ಕಾರಣ, ನಿಲಯದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ವ್ಯಕ್ತಿ ರಾತ್ರಿ ಇಲ್ಲಿಯೇ ಇರಬೇಕು. ಕೆಲಸ ಮಾಡುತ್ತಿರುವ ನೌಕರರು ನಿಯಮಿತವಾಗಿ ಹಾಜರಿರಬೇಕು ಎಂದು ಅವರು ಸೂಚಿಸಿದರು.  

ನಾನು ಆಕಸ್ಮಿಕವಾಗಿ  ಭೇಟಿ ನೀಡಿದರೆ, ಅವರು ಅಲ್ಲಿ ಇಲ್ಲದಿದ್ದರೆ, ಸ್ಥಳದಲ್ಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಸಹ ಎಚ್ಚರಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ವೆಂಕಟೇಶ ಕುಲಕರ್ಣಿ, ವಿಸ್ತರಣಾಧಿಕಾರಿ ಅಶೋಕ ಸತ್ತಿ ಗೌಡರ, ಮಹೇಶ ಗಾಡಿವಡ್ಡರ ಪಾರ್ವತಿ ಮಲಗೌಡರ ಇದ್ದರು.