ಸಾತ್ವಿಕ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಬಸವಪ್ರಭು ಕೋರೆ ಪಾತ್ರ ಮಹತ್ವದಾಗಿದೆ

 ಸಾತ್ವಿಕ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಬಸವಪ್ರಭು ಕೋರೆ ಪಾತ್ರ ಮಹತ್ವದಾಗಿದೆ Basavaprabhu Kore's role has been significant in building a peaceful, civilized society.

 ಸಾತ್ವಿಕ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಬಸವಪ್ರಭು ಕೋರೆ ಪಾತ್ರ ಮಹತ್ವದಾಗಿದೆ

ಮಾಂಜರಿ 14: ಸ್ವಾಂತಂತ್ರ್ಯ ಚಳುವಳಿ, ಸಹಕಾರಿ ಕ್ಷೇತ್ರ, ಶಿಕ್ಷಣ ಹಾಗೂ ಕರ್ನಾಟಕ ಏಕೀಕರಣದ ಜೊತೆಗೆ ವೀರಶೈವ ಸಂಘಟನೆಗಳಿಗಾಗಿ ದುಡಿದ ಪ್ರಾತಃಸ್ಮರಣೀಯರಾದ ಶ್ರೀಮಂತ ಬಸವಪ್ರಭು ಕೋರೆ ಅವರ ಆದರ್ಶಗಳು ಸಮಕಾಲೀನ ಯುವಜನಾಂಗಕ್ಕೆ ದಾರೀದೀಪವಾಗಿವೆ. ಜೀವನದ ಸಾರ್ಥಕತೆಯ ಪ್ರತಿಕವಾಗಿ ಸರಳತೆ ದೇಶ ಸೇವೆ ಸತ್ಯದ ದಾರಿ ಸಹಬಾಳ್ವೆ ಶಿಕ್ಷಣ ಕ್ರಾಂತಿಯೆ ಪ್ರತಿಕವಾಗಿ ಜೀವಿಸಿದರು. ನಿಸ್ವಾರ್ಥದ ಜೀವನ ಕೆಲವರು ಹಿಂದಿನ ವೈಭವ ಇತಿಹಾಸ ಮೆಲುಕು ಹಾಕುತ್ತ ಭೂತದಲ್ಲಿ ಬದುಕುತ್ತಾರೆ. ಮತ್ತೆ ಕೆಲವರು ತಮ್ಮ ಭೋಗ ಜೀವನದ ವರ್ತಮಾನದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಕಾಲಹರಣ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ವರ್ತಮಾನದ ಸುಖ ಸುಪತ್ತಿಗಳಿಗೆ  ನೀರೆರೆದು ಭವಿಷ್ಯವನ್ನು ಕಟ್ಟುತ್ತಾರೆ. ಇತಿಹಾಸ ಮಾಡಿ ಇತಿಹಾಸವೇ ಆಗುತ್ತಾರೆ. ಅಂತಹ ಶ್ರೇಷ್ಠ ಸಾಲಿನಲ್ಲಿ ಶ್ರೀಮಂತ ಬಸವಪ್ರಭು ಕೋರೆಯವರು ಮುಂಚೂಣಿಯಲ್ಲಿ ಇದ್ದಾರೆ ಎಂದು ನಿವೃತ್ತ್ತ ಪ್ರಾಚಾರ್ಯರಾದ ಡಾ. ಎಂ. ಟಿ. ಕುರಣಿ ಹೇಳಿದರು.  ಇಂದು ಕೆ.ಎಲ್‌.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶ್ರೀಮಂತ ಬಸವಪ್ರಭು ಕೋರೆ 134ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ತಾವು ಸ್ವತಃ ಸಾಕಷ್ಟು ಶ್ರೀಮಂತರಾಗಿದ್ದು ಸುಖಬೋಗಕ್ಕೆ ಹೆಚ್ಚು ಮನಸ್ಸು ಕೊಡದೆ ಸಮಾಜದ, ಬಡವರ, ರೈತರ, ದೀನದಲಿತರ ಉದ್ದಾರವನ್ನೇ ಪ್ರಮುಖ ಕಾಳಜಿಯನ್ನಾಗಿ ಮಾಡಿಕೊಂಡು ಹಲವು ಹತ್ತು ಕ್ಷೇತ್ರಗಳಲ್ಲಿ ನವಮನ್ವಂತರ ರೂಪಿಸಿದವರ ಸಾಲಿನಲ್ಲಿ ಶ್ರೇಷ್ಠತೆಯಿಂದ ಕೂಡಿದ್ದಾರೆ ಎಂದರು. 19, 20ನೇ ಶತಮಾನದಲ್ಲಿ ಬ್ರೀಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ಮಾಡಿ ಹಿಂಸಿಸುತ್ತಿದ್ದರು. ಆ ಸಂದರ್ಭದಲ್ಲಿ ಬ್ರಿಟಿಷರ ವಿರುದ್ದ ಹೋರಾಟದ ದಬ್ಬಾಳಿಕೆ ಸರಕಾರದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದರು ಕೂಡಾ ಎದೆಗುಂದದೆ ದೇಶದ ಸ್ವಾತಂತ್ರ್ಯಕ್ಕೆ ತನುಮನ ದನದಿಂದ ಸೇವೆ ಸಲ್ಲಿಸಿದರು. ವ್ಯಾಪಾರ, ಕೃಷಿ, ಶಿಕ್ಷಣ, ಸಮಾಜಸೇವೆ, ದೀನ ದಲಿತ ಉದ್ದಾರಕ್ಕೆ ಅವಿರತವಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದು ಇತಿಹಾಸವನ್ನು ಅರಿಯದವ ಇತಿಹಾಸ ನಿರ್ಮಿಸಲಾರದಂತೆ ಉತ್ತಮ ಜೀವನ ಸಾಧನೆ ಮಾಡಿದ್ದಾರೆಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಪ್ರಸಾದ ರಾಂಪೂರೆ ಮಾತನಾಡಿ ಬಸವಪ್ರಭು ಕೋರೆಯವರ ಜೀವನ ತತ್ವ ಜೀವನ ಸರ್ವಧರ್ಮ ಸಹಿಷ್ಣುತೆ, ಸಮಾಜಸೇವೆ, ಕೃಷಿ, ಶಿಕ್ಷಣ ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು ಇವರ ಜೀವನ ಅತ್ಯುತ್ತಮ ಮಾರ್ಗದರ್ಶನ ಎಲ್ಲರಿಗೂ ಸ್ಪೂತಿಯಾಗಿದೆಂದರು.  ಕು. ಮಹಾಶ್ವೇತಾ ಭಿಷ್ಟೆ ಪ್ರಾರ್ಥನಾ ಗೀತೆಯನ್ನು ಹಾಡಿದರು, ಪದವಿ ಪ್ರಾಚಾರ್ಯರಾದ ಡಾ. ಬಿ ಜಿ ಕುಲಕರ್ಣಿ ಸ್ವಾಗತಿಸಿದರು, ಪದ್ಮಶ್ರೀ ಚೌಗಲಾ ಮತ್ತು ಸಿದ್ದಣ ನಾಯಕ ಕಾರ್ಯಕ್ರಮ ನಿರೂಪಿಸಿದರು,  ಡಾ. ವಿನಾಯಕ ಮಂಜಲಾಪೂರ ವಂದಿಸಿದರು, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರಕಾಶ ಕೋಳಿ, ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಡಿ.ಬಿ ಸೋಲ್ಲಾಪೂರೆ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.