ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮ
Basava Kendra's Online Awareness House Live Broadcast Program
ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮ
ಹುಬ್ಬಳ್ಳಿ 13 : ಬಸವ ಸಮಿತಿ, ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಳೆದ 30 ವಾರಗಳಿಂದ ಬಿತ್ತರಗೊಳ್ಳುತ್ತಿರುವ ಶೂನ್ಯ ಸಂಪಾದನೆ ಅನುಭಾವ ಮಾಲಿಕೆಯಲ್ಲಿ ಅನುಭಾವ ನೀಡುತ್ತಿರುವ ಅನುಭಾವಿಗಳು, ಶರಣ ತತ್ವ ಚಿಂತಕರು, ಸಿ.ಎಸ್.ಐ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಅವರು ಪ್ರತಿ ಶನಿವಾರ ಶೂನ್ಯ ಸಂಪಾದನೆ ಕುರಿತು ನಿರಂತರವಾಗಿ ಅಪಾರ ಪಾಂಡಿತ್ಯ ಪೂರ್ಣ ಅನುಭಾವ ಉಣಬಡಿಸುತ್ತಿರುವ ಶುಭ ಸಂದರ್ಭದಲ್ಲಿ ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ಕಾರ್ಯಕ್ರಮದ ನಂತರ ಶೂನ್ಯ ಸಂಪಾದನೆ ಅನುಭಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 5ನೇ ತರಗತಿಯಲ್ಲಿ ಓದುತ್ತಿರುವ ಮಗು ಸೋಹನ ಸುರೇಶ ಹೊರಕೇರಿ ಅವರಿಗೆ ಹಿರಿಯರೆಲ್ಲರೂ ಸೇರಿ ಪ್ರೀತಿಯಿಂದ ಆಶೀರ್ವಾದ ರೂಪದಲ್ಲಿ ಮಾಲಾರೆ್ಣ ಮಾಡಿ ಶುಭಾಶೀರ್ವಾದ ಮಾಡಿದರು. ವಿದ್ಯಾರ್ಥಿ ಜೀವನ ಉತ್ತಮ ರೀತಿಯಲ್ಲಿ ಅಪಾರ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಬಸವ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಎಂ.ಜಿ.ಮುಳಕೂರ, ಶೇಖರ ಕುಂದಗೋಳ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ಕಲ್ಲಪ್ಪ ಚಂದನಮಟ್ಟಿ, ಸಾವಿತ್ರಿ ಘಟಿಗಳ್ಗಾವರ, ಶೈಲಾ ಲಂಗೋಟಿ, ಅನಸೂಯಾ ಬಿರಾದಾರ, ನಿರಂಜನ ಹಂಚಿನಾಳ, ವೀರ್ಪ ಘಟಿಗಳ್ಗಾವರ, ಎಸ್.ಕೆ.ಕುಂದರಗಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶ್ರೀಶೈಲ್ ಹುದ್ದಾರ, ಪ್ರವೀಣ, ಮುಂತಾದವರು ಇದ್ದರು.ಪ್ರವೀಣ
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 