ಬಂಡೆಪ್ಪ ಖಾಶೆಂಪುರ್ ಜನ್ಮ ದಿನ: ವಿಶೇಷ ಆಡಿಯೋ, ವಿಡಿಯೋ ಸಾಂಗ್ ಬಿಡುಗಡೆ
Bandeppa Khashempur's birthday: Special audio, video song released
ಲೋಕದರ್ಶನ ವರದಿ
ಬೀದರ್ 19: ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ 62ನೇ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳು ವಿಶೇಷ ಆಡಿಯೋ, ವಿಡಿಯೋ ಸಾಂಗ್ ಅನ್ನು ಹೊರತಂದಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಬಂಡೆಪ್ಪ ಖಾಶೆಂಪುರ್ ರವರ ತೋಟದ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬಂಡೆಪ್ಪ ಖಾಶೆಂಪುರ್ ರವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಅವರ ಯಶೋಗಾಥೆಯನ್ನೊಳಗೊಂಡ 08 ನಿಮಿಷಗಳ ವಿಶೇಷ ಆಡಿಯೋ, ವಿಡಿಯೋ ಗೀತೆಯನ್ನು ಅಭಿಮಾನಿಗಳು ಬಿಡುಗಡೆಗೊಳಿಸಿದರು.
ಈ ವಿಶೇಷ ಹಾಡನ್ನು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು, ಅದೇ ಗ್ರಾಮದ ಭಜೇಂದ್ರ ಪಾಮನಕಲ್ಲೂರು ಹಾಗೂ ಬೀದರ್ ತಾಲೂಕಿನ ಕಮಠಾಣಾದ ರಮೇಶ್ ಚಾಂಬಾಳೆ (ಆರ್ ಕೆ ಸ್ಟೂಡಿಯೋ) ರವರ ಸಹಕಾರದೊಂದಿಗೆ ಹೊರ ತಂದಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ಸಾಹಿತಿ ಪರಶು ನಾಯಕ ಯರದೊಡ್ಡಿ ರಚಿಸಿದ ಗೀತೆಯನ್ನು ಅದೇ ಜಿಲ್ಲೆಯ ಲಿಂಗಸುಗೂರಿನ ಗಾಯಕ ಹುಸೇನ್ ಸಾಬ್ ಲಿಂಗಸುಗೂರುರವರು ಹಾಡಿದ್ದಾರೆ.
ಗೀತೆಯ ದೃಶ್ಯ ಸಂಕಲನ (ವಿಡಿಯೋ ಎಡಿಟಿಂಗ್) ವನ್ನು ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆಯ ಚೇತನ್ ಕುಮಾರ್ ಹಾಗೂ ಬೀದರ್ ತಾಲೂಕಿನ ಘೋಡಂಪಳ್ಳಿಯ ಸಾಯಿಕುಮಾರ್ ಮಾಡಿದ್ದು, ಗ್ರಾಫಿಕ್ಸ್ ಡಿಸೈನಿಂಗ್ ಸಾಯಿಕುಮಾರ್ ಘೋಡಂಪಳ್ಳಿರವರು ಮಾಡಿದ್ದಾರೆ.
ಈ ವಿಶೇಷ ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಬಂಡೆಪ್ಪ ಖಾಶೆಂಪುರ್ ರವರ ಸಹೋದರರಾದ ಮಾರುತಿ ಖಾಶೆಂಪುರ್, ರಾಜು ಖಾಶೆಂಪುರ್, ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜಶೇಖರ್ ಜವಳೆ ಸೇರಿದಂತೆ ಅನೇಕರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 