ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಸೋಗಿ ಚಾಂಪಿಯನ್

ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಸೋಗಿ ಚಾಂಪಿಯನ್ Ball Badminton, Kho-Kho Champions

ಲೋಕದರ್ಶನ ವರದಿ 

ಹೂವಿನ ಹಡಗಲಿ: ಆ.30- ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸೋಗಿ ಸರ್ಕಾರಿ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದ್ದಾರೆ.ಗುಂಪು ಆಟಗಳ ವಿಭಾಗದಲ್ಲಿ ಕಾಲೇಜಿನ ಬಾಲಕರ ಬಾಲ್ ಬ್ಯಾಡ್ಮಿಂಟನ್ ತಂಡ ಚಾಂಪಿಯನ್ ಪಟ್ಟವನ್ನು ಗೆದ್ದರೆ, ಬಾಲಕಿಯರ ಖೋ-ಖೋ ತಂಡ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡೂ ತಂಡಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿವೆ.ವೈಯಕ್ತಿಕ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪದಕಗಳ ಸರಮಾಲೆಯನ್ನೇ ಗೆದ್ದಿದ್ದಾರೆ. ಭಾರತಿ 3000 ಮೀಟರ್ ಓಟ (ಪ್ರಥಮ ಸ್ಥಾನ) 800 ಮೀಟರ್ ಓಟ ಸ್ಪಂದನ (ದ್ವಿತೀಯ) ಭಾರತಿ (ತೃತೀಯ ಸ್ಥಾನ) ಗಳಿಸಿದ್ದಾರೆ. 400 ಮೀಟರ್ ಓಟ ತೇಜಸ್ವಿನಿ (ದ್ವಿತೀಯ) ಮತ್ತು ರಂಜಿತಾ (ತೃತೀಯ ಸ್ಥಾನ) ಪಡೆದಿದ್ದಾರೆ.

ನಂದಿನಿ 100 ಮೀಟರ್ ಓಟದಲ್ಲಿ (ತೃತೀಯ ಸ್ಥಾನ) ಗಳಿಸಿದ್ದಾರೆ.ಸ್ಪಂದನ, ರಂಜಿತಾ, ನಂದಿನಿ ಮತ್ತು ಮಮತಾ ತಂಡವು 400 ಮೀಟರ್ ರಿಲೇಯಲ್ಲಿ (ತೃತೀಯ ಸ್ಥಾನ) ಪಡೆದುಕೊಂಡಿದೆ. ಹಾಲಮ್ಮ ಮತ್ತು ಗಂಗಾಧರ ನಡುಗೆ (ತೃತೀಯ ಸ್ಥಾನ ) ದಿವ್ಯಾ ಉದ್ದ ಜಿಗಿತದಲ್ಲಿ (ದ್ವಿತೀಯ ಸ್ಥಾನ)ಪಡೆದಿದ್ದಾರೆ.ಬಾಲಕರ ವಿಭಾಗ: ಎಸ್‌. ಆಕಾಶ್ ಚಕ್ರ ಎಸೆತ (ಪ್ರಥಮ ಸ್ಥಾನ) ಜಾವೆಲಿನ್ ಎಸೆತ ಮತ್ತು ಗುಂಡು ಎಸೆತದಲ್ಲಿ (ದ್ವಿತೀಯ ಸ್ಥಾನ) ಗಳಿಸಿದ್ದಾರೆ. ಪ್ರಜ್ವಲ್ 200 ಮೀಟರ್ ಓಟ (ಪ್ರಥಮ ಸ್ಥಾನ) ಉದ್ದ ಜಿಗಿತ ಗಂಗಾಧರ (ದ್ವಿತೀಯ) ಹಾಗೂ ಪ್ರಜ್ವಲ್ (ತೃತೀಯ) ಸ್ಥಾನ ಗಳಿಸಿದ್ದಾರೆ. ಪ್ರದೀಪ್ ಎತ್ತರ ಜಿಗಿತದಲ್ಲಿ (ದ್ವಿತೀಯ ಸ್ಥಾನ) ಪಡೆದುಕೊಂಡಿದ್ದಾರೆ.ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಜ್ಯೋತಿ ಎಸ್‌., ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್, ಉಪನ್ಯಾಸಕರಾದ ವೆಂಕಟೇಶ್, ಶಬೀನ, ಪರಶುರಾಮ ನಾಗೋಜಿ, ನರೇಶ್ ನಟರಾಜ್ ಹಾಗೂ ನೇತ್ರಾವತಿ ಅವರು ಅಭಿನಂದಿಸಿದ್ದಾರೆ.