ಬಾಗಲಕೋಟೆ: ಮೇ 3 ರಂದು ನೀಟ್ ಪರೀಕ್ಷೆ: 3727 ಪರೀಕ್ಷಾರ್ಥಿಗಲಿಗೆ 10 ಕೇಂದ್ರಗಳು

ಬಾಗಲಕೋಟೆ: ಮೇ 3 ರಂದು ನೀಟ್ ಪರೀಕ್ಷೆ: 3727 ಪರೀಕ್ಷಾರ್ಥಿಗಲಿಗೆ 10 ಕೇಂದ್ರಗಳು   Bagalkot: NEET exam on May 3: 10 centers for 3727 candidates

ಲೋಕದರ್ಶನ ವರದಿ

ಬಾಗಲಕೋಟ 01 :  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌-2026) ಇದೆ  ಮೇ 3 ರಂದು  ನಡೆಯಲಿದ್ದು, ಜಿಲ್ಲಾ ಕೇಂದ್ರದಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 3727 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತೀಳಿಸಿದರು.  ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ  ಡೆಸ್ಕಗಳ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.   

ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್, ಸ್ಮಾರ್ಟ್ವಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ಪೇಪರ್ ಚೂರುಗಳು, ವಾಲೆಟ್ ಹಾಗೂ ಹ್ಯಾಂಡ್ ಬ್ಯಾಗ್ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಪರೀಕ್ಷಾ ಸಂಸ್ಥೆಯೇ (ಓಖಿಂ) ಕಪ್ಪು ಬಾಲ್ ಪೆನ್ ನೀಡಲಿದ್ದು, ಅದನ್ನೇ ಬಳಸಬೇಕು ಜೆಲ್ ಪೆನ್ ಬಳಕೆಗೆ ನಿಷೇಧಿಸಲಾಗಿದೆ. ಒಂದು ವೇಳೆ ಈ ಉಪಕರಣಗಳು ಯಾವುದೇ ವಸ್ತುಗಳು ಅಭ್ಯರ್ಥಿಯ ಬಳಿ ಕಂಡು ಬಂದಲ್ಲಿ, ಅದನ್ನು ‘ಅಕ್ರಮ ಮಾರ್ಗಗಳ ಬಳಕೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು  ಎಚ್ಚರಿಸಿದರು.  

ಜಿಲ್ಲಾಡಳಿತದಿಂದ  ಜಿಲ್ಲಾ ಮಟ್ಟದ ಅಧಿಕಾರಿಗಳನ್ನು 10  ಪರೀಕ್ಷಾ ಕೇಂದ್ರಗಳಿಗೆ  ವೀಕ್ಷಕರನ್ನಾಗಿ ನೇಮಿಸಿದ್ದು, ಪರೀಕ್ಷೆ ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ನಡೆಯಲು, ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಪರೀಕ್ಷೆ ನಡೆಯುವ ದಿನ, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗವುದು. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಜೆರಾಕ್ಸ್‌ ಹಾಗೂ ಕಂಪ್ಯೂಟರ್ ಸೆಂಟರ್ಗಳು ನಿಷೇಧಾಜ್ಞೆ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಅವರು ಹೇಳಿದರು.  

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗುವುದು, ತುರ್ತು ವೈದ್ಯಕೀಯ ಸೇವೆಗಾಗಿ ಆರೋಗ್ಯ ಇಲಾಖೆಯ ವತಿಯಿಂದ ಪ್ರಥಮ ಚಿಕಿತ್ಸಕರ ತಂಡ ನಿಯೋಜಿಸಿದೆ. ರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕಾೊನಿಕ್ ಉಪಕರಣಗಳನ್ನು ಬಳಸದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.   

ಪರೀಕ್ಷೆಯು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ನಡೆಯಲಿದ್ದು,  ಅಭ್ಯರ್ಥಿಗಳು ಬೆಳಿಗ್ಗೆ 11:00 ಗಂಟೆ ಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು. ಮಧ್ಯಾಹ್ನ 1:30 ಗಂಟೆಯ ನಂತರ ಪ್ರವೇಶ ಇರುವುದಿಲ್ಲ. ಪ್ರತಿ ಕೇಂದ್ರಕ್ಕೆ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಪ್ರಶ್ನೆ ಪತ್ರಿಕೆ ನಗರದ ರಾಷ್ಟ್ರೀಕೃತ ಬ್ಯಾಂಕ್ನಿಂದ ಪೋಲಿಸ್ ಭದ್ರತೆಯಲ್ಲಿ  ಕೇಂದ್ರಗಳಿಗೆ ಸಾಗಿಸಲಾಗುತ್ತದೆ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು  ಸುರಕ್ಷೀತವಾಗಿ ಸಂಗ್ರಹಿಸಲು  ಕ್ರಮ ಕೈಗೊಳ್ಳಲಾಗಿದೆ  ಎಂದು ತಿಳಿಸಿದರು.