ಬಿಜೆಪಿ ಕೈ ಹಿಡಿದ ಬಿ.ಸಿ.ಪಾಟೀಲ ಭವಿಷ್ಯ ಅತಂತ್ರ: ರುದ್ರಪ್ಪ
ಹಾವೇರಿ: ರಾಜಕೀಯವಾಗಿ ಮರು ಹುಟ್ಟು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಕೈ ಹಿಡಿದ ಬಿ.ಸಿ.ಪಾಟೀಲ ಭವಿಷ್ಯ ಮುಂದಿನ ದಿನಗಳಲ್ಲಿ ಅತಂತ್ರವಾಗಲಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಭವಿಷ್ಯ ನುಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಿ.ಸಿ.ಪಾಟೀಲ ಅವರಿಗೆ ಜೆಡಿಎಸ್ ಕುಮಾರಸ್ವಾಮಿ ಅವರು ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಿದ್ದರು. 2018 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಟಿಕೆಟ್ ನೀಡಿ, ಅವರನ್ನು ಗೆಲ್ಲಿಸಿಕೊಂಡ ಬಂದಿದ್ದರು. ರಾಜಕೀಯ ಋಣ ಮರೆತ ಬಿಸಿಪಿ : ಬಿಸಿ ಪಾಟೀಲ ರಾಜಕೀಯ ಋಣವನ್ನು ಅವರು ತೀರಿಸಬೇಕಾಗಿತ್ತು. ತಾಯಿ ಋಣ, ಭೂಮಿ ಋಣದಂತೆ ರಾಜಕೀಯಕ್ಕೂ ಋಣವಿದೆ ಆ ಋಣವನ್ನು ತಿರಿಸಬೇಕು. ಅದನ್ನು ಬಿಟ್ಟು, ಇಂದು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ನಾನು ಎತ್ತರದಲ್ಲಿದ್ದೇನೆ, ನನಗೆ ಮಂತ್ರಿ ಪದವಿ ನೀಡಬೇಕಿತ್ತು ಎಂದು ಕೇಳುತ್ತಿದ್ದಾರೆ.
ಅದಕ್ಕಾಗಿ ಸರಕಾರಕ್ಕೆ ದ್ರೋಹ ಮಾಡಿದ್ದಾರೆ. ಈಗ ಮಾಡಿರುವ ದ್ರೋಹಕ್ಕೆ ಮುಂದಿನ ದಿನದಲ್ಲಿ ತಕ್ಕ ಪಶ್ಚಾತಾಪ ಅನುಭವಿಸಲಿದ್ದಾರೆ ಎಂದು ತಿಳಿಸಿದರು.
ಸಾಕಷ್ಟು ಅಭ್ಯಥರ್ಿಗಳಿದ್ದಾರೆ : ಅತೃಪ್ತರ ಸ್ಥಾನಗಳಿಗೆ ಮರಳಿ ಉಪಚುನಾವಣೆ ನಡೆದರೆ, ಕಾಂಗ್ರೆಸ್ ಪಕ್ಷದಲ್ಲಿ ಅಭ್ಯಥರ್ಿಗಳಿಗೆ ಕೊರತೆಯಿಲ್ಲ.
ನಮ್ಮ ಪಕ್ಷದಲ್ಲಿ ಅಭ್ಯಥರ್ಿಗಳಾಗುವ ಬೇಕಾದಷ್ಟು ಜನರಿದ್ದಾರೆ. ಕಾದು ನೋಡಿ, ಯಾರಿಗೆ ನೀಡಿದರೆ ಆ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುಲು ಸಾಧ್ಯ ಎಂದು ಪರಿಶೀಲಿಸಿ ಪಕ್ಷದ ಹೈ ಕಮಾಂಡ್ ತಿಮರ್ಾನ ಮಾಡುತ್ತದೆ ಎಂದರು.
ಪಕ್ಷಕ್ಕೆ ದ್ರೋಹ : ಬಿ.ಸಿ.ಪಾಟೀಲ ಮಂತ್ರಿಯಾಗಬೇಕು ಎಂಬ ಆಕಾಂಕ್ಷಿಯಾಗಿದ್ದರು. ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಮುಕ್ತವಾಗಿ ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ಹಾಗೂ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಅವರಿಗೆ ಮನವೋಲಿಸಿ ಸಚಿವರನ್ನಾಗಿ ಮಾಡಲು ಶ್ರಮಿಸಲಾಗಿತ್ತು. ] ಆದರೆ, ಬಿ.ಸಿ.ಪಾಟೀಲ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಿ, ಪಕ್ಷಕ್ಕೆ ದ್ರೋಹ ಮಾಡಿ, ಸರಕಾರ ಕೆಡವಿದ ಬಳಿಕ ರೆಸಾಟರ್್ನಲ್ಲಿ ಉಳಿದುಕೊಂಡಿದ್ದಾರೆ.
ಇವರ ನಡೆಯನ್ನು ಕ್ಷೇತ್ರದ ಜನರು ಗಮನಿಸಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಸಿ ಪಾಟೀಲ ಮುಂದಿನ ಗತಿಯನ್ನು ನೋಡಿ ಎಂದು ಮಾಮರ್ಿಕವಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 