ಕಾಂಗ್ರೇಸ್ ತಂತ್ರಗಾರಿಕೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಸೋಲು : ಸಂಸದ ಬೊಮ್ಮಾಯಿ

ಕಾಂಗ್ರೇಸ್ ತಂತ್ರಗಾರಿಕೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಸೋಲು : ಸಂಸದ ಬೊಮ್ಮಾಯಿ  BJP's defeat in the constituency due to Congress's tactics: MP Bommai

ಕಾಂಗ್ರೇಸ್ ತಂತ್ರಗಾರಿಕೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಸೋಲು : ಸಂಸದ ಬೊಮ್ಮಾಯಿ  

ಶಿಗ್ಗಾವಿ 12  : ಉಪಚುನಾವಣೆಯಲ್ಲಿ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ಟಿಕಾಣೆ ಹೂಡಿ ಹಣ ಬಲ ಅಧಿಕಾರಬಲದ ಜೊತೆಗೆ ಬೇರೆ ಕ್ಷೇತ್ರದ ಮತಗಳನ್ನು ಇಲ್ಲಿ ನೋಂದಾಯಿಸಿ ತಂತ್ರ ತಂತ್ರಗಾರಿಕೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಸೋಲುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.  ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ಸಭಾ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಶಿಗ್ಗಾವಿ ಹಾಗೂ ಸವಣೂರು ಮಂಡಳಗಳ ನೂತನ ಪದಾಧಿಕಾರಿಳಾಗಿ ಆಯ್ಕೆಯಾದ ಕಾರ್ಯಕರ್ತರಿಗೆ ನೇಮಕ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ಬಿಜೆಪಿಯನ್ನು ತಿರಸ್ಕರಿಸಿಲ್ಲ, ಆದರೆ ರಾಜ್ಯದ ಆಡಳಿತಾರೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ತಂತ್ರಗಾರಿಕೆಯಲ್ಲಿ ನಾವು ವಿಫಲವಾಗಿದ್ದರಿಂದ ಪಕ್ಷ ಸೋಲುವಂತಾಗಿದೆ ಎಂದರು.ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ.ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದಂತಹ ಜನರು ಈಗಾಗಲೇ ಪಾಶ್ಚಾತಾಪ ಪಡುವಂತಾಗಿದೆ. ಅವಳಿ ತಾಲೂಕಿನಲ್ಲಿ ಕಳ್ಳತನ, ಕೊಲೆ ಸುಲಿಗೆ ಜೂಜಾಟಗಳು ಹೆಚ್ಚಾಗಿ ಆಡಳಿತದ ಕಾನೂನು ಸೂವ್ಯವಸ್ಥೆ ಸಂಪೂರ್ಣ ಹದಗೆಟ್ಟು, ಕ್ಷೇತ್ರದ ಅಭಿವೃದ್ಧಿಯು ಕುಂಠಿತಗೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದಂತಹ ಜನರು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ ಎಂದರು.ನಮ್ಮ ಆಡಳಿತಾವಧಿಯಲ್ಲಿ ಧಾರ್ಮಿಕ, ಸಾಮಾಜಿಕ, ರೈತಾಪಿ ವರ್ಗ, ಉದ್ಯೋಗ ಸೃಷ್ಟಿಯ ಜೊತೆಗೆ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಯನ್ನು ಯಾವುದೇ ಒಂದೇ ವರ್ಗಕ್ಕೆ ಸೀಮಿತಗೊಳ್ಳದ ಬಿಜೆಪಿ ಆಡಳಿತವನ್ನು ಕ್ಷೇತ್ರದ ಜನತೆ ಈಗ ಮರು ಚಿಂತನೆ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಪಕ್ಷದ ಚಟುವಟಿಕೆಗಳು ಕುಂಠಿತಗೊಂಡಿದ್ದು, ಆಯ್ಕೆಯಾದ ಶಿಗ್ಗಾವಿ ಸವಣೂರ ಮಂಡಳದ ಪದಾಧಿಕಾರಿಗಳು ಜವಾಬ್ದಾರಿಯಿಂದ ನಮ್ಮ ಆಡಳಿತಾವಧಿಯ ಸಾಧನೆಗಳನ್ನು ಮನವರಿಕೆ ಮಾಡಿ, ಜವಾಬ್ದಾರಿಯಿಂದ ಬೂತ್ ಮಟ್ಟದ ಸಂಘಟನೆಯ ಜೊತೆಗೆ ಪ್ರತಿಯೊಂದು ಮೋರ್ಚಾಗಳ ಪ್ರತ್ಯೇಕ ಸಮ್ಮೇಳನಗಳನ್ನು ನಡೆಸಿ ಬಜೆಟ್ ನಂತರದಲ್ಲಿ ಬರುವ ಸ್ಥಳೀಯ ಚುನಾವಣೆಗಳಿಗೆ ಪಕ್ಷ ಸಿದ್ಧವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಗ್ಗಾಂವಿ ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ಮಂಡಲದ ಅಧ್ಯಕ್ಷ ಶಿವಪುತ್ರ​‍್ಪ ಕಲಕೊಟಿ, ಶಿವಾನಂದ ಮ್ಯಾಗೇರಿ, ರವೀಂದ್ರ ಕುಡವಕ್ಕಲಿಗರ, ಮಲ್ಲೇಶಪ್ಪ ಹರಿಜನ, ಶಿವಾನಂದ ಸೊಬರದ, ನರಹರಿ ಕಟ್ಟಿ, ವಿರುಪಾಕ್ಷಪ್ಪ ಆಡಿನ, ಸಿದ್ದಪ್ಪ ಶ್ಯಾಬಳ, ರೇಣುಕನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.