ಹಂಪಿ ಉತ್ಸವದಲ್ಲಿ ಎಸ್.ಎಂ.ಪೃಥ್ವಿ ಭಾವಗೀತೆಗೆ ಮನಸೋತ ಪ್ರೇಕ್ಷಕರು
Audience mesmerized by SM Prithvi's lyric at Hampi Festival
ಕಂಪ್ಲಿ 17: ಇತ್ತೀಚೆಗೆ ಹಂಪಿಯಲ್ಲಿ ನಡೆದ ಉತ್ಸವದಲ್ಲಿ ಕಂಪ್ಲಿ ನಿವಾಸಿ ಎಸ್.ಎಂ.ಪೃಥ್ವಿ ಎಂಬ ಕಲಾವಿದ ಭಾವಗೀತೆ ಹಾಡುವ ಮೂಲಕ ಜನರನ್ನು ರಂಜಿಸಿ, ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡು, ಕಂಪ್ಲಿಯ ಕೀರ್ತಿ ಪತಾಕಿ ಹಾರಿಸಿದ್ದಾನೆ.
ಮೂರು ದಿನದ ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಧುರ ಕಂಠದಿಂದ ಕಂಪ್ಲಿಯ ಎಸ್.ಎಂ.ಪೃಥ್ವಿ ಭಾವಗೀತೆ ಹಾಡುವದರೊಂದಿಗೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿದ್ದಾನೆ. ನಂತರ ಅಧಿಕಾರಿಗಳು ಭಾವಗೀತೆ ಹಾಡಿದ ಪೃಥ್ವಿಗೆ ಹಾಗೂ ಹಾರ್ಮೋನಿಯಂ ನುಡಿಸಿದ ವಿನೋದ್ ಪಾಟೀಲ್, ತಬಲವಾದಕ ಮಣಿಕಂಠ ವಿಶ್ವನಾಥ, ರಿಧಮ್ ನೀಡಿದ ಎಂ.ಶಂಕರ್ ಇವರಿಗೆ ಶಿಲ್ಡ್ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ.ಪವಿತ್ರಾ, ಎಸ್.ಎಂ.ಸಮರ್ಥ್ ಹಾಗೂ ಅಧಿಕಾರಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 