ವಾಷಿಂಗ್ಟನ್, ಡಿ 8: ಮಹಾತ್ಮಾ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿಯನ್ನು ಹರಾಜಿಗೆ ಇಟ್ಟಿರುವುದಾಗಿ ಅಮೆರಿಕದ 'ರಾಬ್ ಕಲೆಕ್ಷನ್' ಪ್ರಕಟಿಸಿದೆ. ಇದು ಸಾರ್ವಜನಿಕವಾಗಿ ಲಭ್ಯವಿರುವ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿ ಎಂದೂ ಹೇಳಲಾಗಿದೆ. ಇದು 1948 ಜನವರಿ 22ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಅವರು ಮಾಡಿದ ಭಾಷಣದ ಹಸ್ತಪ್ರತಿಯಾಗಿದೆ ಎನ್ನಲಾಗಿದೆ. ಭಾರತ ವಿಭಜನೆ ಹಾಗೂ ಬಳಿಕ ಗಡಿಯ ಎರಡೂ ಭಾಗಗಳಲ್ಲಿ ಸಂಭವಿಸಿದ ಕೋಮು ಗಲಭೆಯ ಹಿನ್ನೆಲೆ ಮತ್ತು , ಹಿಂದೂ-ಮುಸ್ಲಿಂ ಸಮುದಾಯದ ನಡುವಣ ಸಾಮರಸ್ಯಕ್ಕಾಗಿ ನಡೆಸಿದ್ದ ಆಮರಣಾಂತ ಉಪವಾಸದ ಬಳಿಕ ಗಾಂಧಿಜಿಯವರು ಮಾಡಿದ ಮೊದಲ ಭಾಷಣವಾಗಿತ್ತು. ಈ ಭಾಷಣದ 8 ದಿನಗಳ ನಂತರ ದೆಹಲಿಯಲ್ಲಿ ಗಾಂಧೀಜಿವರ ಹತ್ಯೆಯಾಗಿತ್ತು.