ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ: ರೂಹಾನಿ ಶೀಘ್ರ ಭಾಷಣ

ಮಾಸ್ಕೋ, ಜ 8 ಇರಾಕಿನಲ್ಲಿನ ಅಮೆರಿಕ ಸೇನಾ ನೆಲೆಗಳ ಮೇಲಿನ ಕ್ಷಿಪಣಿ ದಾಳಿಯ ನಂತರ ಇರಾನ್ ಅಧ್ಯಕ್ಷ ಹಸನ್ ರೂಹಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವಿಷಯವನ್ನು ರಾಜ್ಯ ಮಾಧ್ಯಮ ಬುಧವಾರ ವರದಿ ಮಾಡಿದೆ.ಪ್ರೆಸ್ ಟಿವಿ ಅಧ್ಯಕ್ಷರ ಭಾಷಣದ ನಿಖರ ಸಮಯವನ್ನು ನೀಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಘಟನೆಗೆ ಸಬಂಧಪಟ್ಟಂತೆ ಹೇಳಿಕೆ ನಿಡುವುದಾಗಿ ತಿಳಿಸಿದ್ದಾರೆ. ಅಮೆರಿಕ ಇರಾನ್ ನಡುವೆ ಬಿಕ್ಕಟ್ಟು ಮುಂದುವರೆಯುತ್ತಿದ್ದು, ಪರಿಣಾಮ ಮೂರನೆ ಯುದ್ದ ಆರಂಭವಾಗಬಹದೆನೋ ಎಂಬ ಬೀತಿ ಅವರಿಸಿಕೊಳ್ಳುತ್ತಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಉನ್ನತ ಕಮಾಂಡರ್ ಕಾಸೆಮ್ ಸೊಲೈಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆಯನ್ನು ಇರಾನ್ ಪ್ರಾರಂಭಿಸಿದೆ . ಕನಿಷ್ಠ 22 ಇರಾನ್ ಕ್ಷಿಪಣಿಗಳು ಅಮೆರಿಕ ನೆಲೆಗಳಮೇಲೆ ದಾಳಿ ಮಾಡಿದ್ದು ಪರಿಣಾಮ , 80 ಅಮೆರಿಕ ಯೋಧರು ಹತರಾಗಿದ್ದಾರೆ ಎಂದೂ ವರದಿಯಾಗಿದೆ ಆದರೆ ಇದರ ಬಗ್ಗೆ ಅಮೆರಿಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ .