ಅಥಣಿ: ಡಿ.ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ
Athani: D. Devaraj Urs' 110th birth anniversary celebration program
ಅಥಣಿ, 20 ; ದಿ. ದೇವರಾಜ ಅರಸ್ ತುಳಿತಕ್ಕೊಳಗಾಗಿದ್ದ 21ಲಕ್ಷ ಸಮುದಾಯಗಳ ಕುಟುಂಬಗಳಿಗೆ ಸುಮಾರು 4.5 ಲಕ್ಷ ಎಕರೆ ಭೂಮಿಯನ್ನು ಭೂ ಸುಧಾರಣೆ ಕಾಯ್ದೆ ತರುವ ಮೂಲಕ ಹಂಚಿಕೆ ಮಾಡಿದ ಮಹನೀಯರು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮೀತಿಯ ಅಥಣಿ ತಾಲೂಕಾ ಅಧ್ಯಕ್ಷ ಸಿದ್ಥಾರ್ಥ ಸಿಂಗೆ ಹೇಳಿದರು.
ಅವರು ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸುರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ದೇವರಾಜ ಅರಸ್ ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ ಅವರು ಸಾಮಾನ್ಯ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಕಾರಖಾನೆಯಂತಿದ್ದರು ಎಂದ ಅವರು ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗೆ, ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಸೇರಿದಂತೆ ಇಂದಿನ ಅನೇಕ ಸಾಮಾನ್ಯ ರಾಜಕಾರಣಿಗಳನ್ನು ನಾಯಕರನ್ನಾಗಿಸಿದ ಕೀರ್ತಿ ದೇವರಾಜ ಅರಸರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀಮತಿ ಪ್ರಿಯಂವದಾ ಅಣೆಪ್ಪನವರ ಮಾತನಾಡಿ, ದೇವರಾಜ ಅರಸ್ ಕೇವಲ ಒಬ್ಬ ವ್ಯಕ್ತಿ, ಅಥವಾ ರಾಜಕರಾಣಿ ಆಗಿರಲಿಲ್ಲ ಅವರೊಬ್ಬ ಶಕ್ತಿಯಾಗಿದ್ದರು. ಅವರ ಅನೇಕ ಯೋಜನೆಗಳು ಜನಪರ ಅಷ್ಟೇ ಅಲ್ಲ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದ ಅವರು ಎಲ್ಲ ರಾಜಕೀಯ ಪಕ್ಷಗಳ ಇಂದಿನ ಸಂಸದರು, ಶಾಸಕರು, ಮುಖಂಡರು ದೇವರಾಜ ಅರಸ್ ಅವರ ರಾಜಕೀಯ ಆಧರ್ಶವನ್ನು ಮೈಗೂಡಿಸಿಕೊಂಡಲ್ಲಿ ನಮ್ಮ ರಾಜ್ಯ ಇಡೀ ದೇಶಕ್ಕೆ ಅಷ್ಟೇ ಅಲ್ಲ ವಿಶ್ವದಲ್ಲಿಯೇ ಮಾದರಿಯಾಗಲಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ ಮಾತನಾಡಿ, ಅಥಣಿ ಮತ್ತು ಕಾಗವಾಡ ತಾಲೂಕುಗಳ ಸೇರಿ ಒಟ್ಟು 18 ವಸತಿ ನಿಲಯಗಳಿದ್ದು, ಈ ನಿಲಯಗಳ ಮೂಲಕ ಹೈಸ್ಕೂಲ್ ಮತ್ತು ಕಾಲೇಜ ವಿದ್ಯಾರ್ಥಿಗಳಿಗೆ ವಸತಿ, ಊಟ ಸೇರಿದಂತೆ ಶೈಕ್ಷಣಿಕ ಅನಕೂಲತೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಬಡ್ತಿ ಹೊಂದಿದ ವೆಂಕಟೇಶ ಕುಲಕರ್ಣಿ ಇವರನ್ನು ನಿಲಯ ಪಾಲಕರು ಸತ್ಕರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭಾಧ್ಯಕ್ಷೆ ಶಿವಲಿಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಸತಿ ನಿಲಯ ವಿದ್ಯಾರ್ಥಿಗಳು ದೇವರಾಜ ಅರಸ್ ಕುರಿತು ಮಾತನಾಡಿದರು. ಉಪ ತಹಶೀಲ್ದಾರ ಎಮ್.ವ್ಹಿ.ಬಿರಾದಾರ, ವಸತಿ ನಿಲಯ ಮೇಲ್ವಿಚಾರಕರಾದ ಕೇದಾರಿ ಬಾಗಿ, ಅಶೋಕ ಸತ್ತಿಗೌಡರ, ಬಸಲಿಂಗ ಯಲ್ಲಟ್ಟಿ,ಅಶೋಕ ಆಜೂರ,ಮಹೇಶ ಗಾಡಿವಡ್ಡರ, ಗೀತಾ ನಾಯಿಕ, ಪಾರ್ವತಿ ಮಲಗೌಡರ ಉಪಸ್ಥಿತರಿದ್ದರು. ಶಿಕ್ಷಕ ಸಂಗಮೇಶ ಹಚಡದ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 