ಸೆ. 5ರಿಂದ ಅಸ್ಮೀತಾ ವುಮೆನ್ಸ್‌ ರೋಡ್ ಲೀಗ್ಸ್‌

ಸೆ. 5ರಿಂದ ಅಸ್ಮೀತಾ ವುಮೆನ್ಸ್‌ ರೋಡ್ ಲೀಗ್ಸ್‌  Asmita Women's Road Leagues from Sept. 5


ವಿಜಯಪುರ 02: ಕೇಂದ್ರ ಸರಕಾರದ ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಡ್ರಗ್ಸ್‌ ಮುಕ್ತ ಭಾರತ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಅಮೇಚೂರು ಸೈಕ್ಲಿಂಗ್ ಅಸೋಸಿಯೇಶನ್, ವಿಜಯಪುರ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ಜಿಲ್ಲಾಡಳಿತ, ವಿಸಿಜಿ ಗ್ರುಪ್ ಸಹಯೋಗದಲ್ಲಿ ಅಸ್ಮೀತಾ ವುಮೆನ್ಸ್‌ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಫ್ ಸೆ. 5 ಮತ್ತು 6 ರಂದು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ (ಸೊಲ್ಲಾಪುರ ರಸ್ತೆ ಎಡ ಬದಿ) ಯಲ್ಲಿ ಬೆಳಿಗ್ಗೆ 7ರಿಂದ 12 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಹೇಳಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಲಿರುವ ಸೈಕ್ಲಿಂಗ್ ಚಾಂಪಿಯನ್ ಶಿಫ್‌ಗೆ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಕ್ರೀಡಾಕೂಟದಕ್ಕೆ ಈಗಿನಿಂದಲೇ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.  

ನಡೆಯಲಿರುವ ಸ್ಪರ್ಧೆಗಳು:  

17 ವರ್ಷದ ಬಾಲಕಿಯರಿಗಾಗಿ 10 ಕಿಮೀ ಟೈಂ ಟ್ರಯಲ್ ಮತ್ತು 25 ಕಿಮೀ ಮಾಸ್ಟ್‌ ಸ್ಟಾರ್ಟ್‌ ಆಯೋಜಿಸಲಾಗಿದೆ. ಮಹಿಳೆಯರಿಗಾಗಿ 20 ಕಿಮೀ ಟೈಂ ಟ್ರಯಲ್ ಹಾಗೂ 45 ಕಿಮೀ ಮಾಸ್ಟ್‌ ಸ್ಟಾರ್ಟ್‌ ಆಯೋಜಿಸಲಾಗಿದ್ದು, ಇದರಲ್ಲಿ ಆಯ್ಕೆಯಾದ ಆಯಾ ವಯೋಮಿತಿಯ ತಲಾ 6 ಸೈಕ್ಲಿಸ್ಟ್‌ ಗಳನ್ನು ಸೌತ್ ಝೇನ್‌ಗೆ ಕಳುಹಿಸಲಾಗುವುದು ಎಂದವರು ತಿಳಿಸಿದರು.  

11, 12 ರಂದು ಟ್ರ್ಯಾಕ್ ಸೈಕ್ಲಿಂಗ್‌:  

ಬರುವ ಸೆಪ್ಟೆಂಬರ್ 11 ಮತ್ತು 12 ರಂದು ನಡೆಯಲಿರುವ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಶಿಫ್‌ನ್ನು ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿಕೊಂಡು, ನಗರ ಹೊರವಲಯದಲ್ಲಿರುವ ನೂತನ ವೆಲೋಡ್ರೋಮ್‌ನಲ್ಲಿ ಆಯೋಜಿಸಲಾಗಿದೆ ಎಂಬುದನ್ನು ತಿಳಿಸಲು ಸಂತಸವಾಗುತ್ತದೆ ಎಂದವರು ತಿಳಿಸಿದರು.  

ಇದರಲ್ಲಿ 14, 16, 18 ಬಾಲಕರ, ಬಾಲಕಿಯರ ಹಾಗೂ ಪುರುಷರ ಮತ್ತು ಮಹಿಳೆಯರ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಫ್ ಆಯೋಜಿಸಲಾಗಿದೆ. ಇದರಲ್ಲಿ ವೈಯಕ್ತಿಕ ಟೈಂ ಟ್ರಾಯಲ್, ಇಂಡಿವ್ಯುಜುಲ್ ರ್ಸೂಟ್ ಮತ್ತು ಮಾಸ್ಟ್‌ ಸ್ಟಾರ್ಟ್‌ ಆಯೋಜಿಸಲಾಗಿದೆ.  ಇದರಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ರಾಂಚಿಯಲ್ಲಿ ಮುಂಬರುವ ದಿನಗಳಲ್ಲಿ ರಾಷಿೊಥಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಫ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗುವುದು ಎಂದವರು ತಿಳಿಸಿದರು.  

ಈ ಚಾಂಪಿಯನ್ ಶಿಫ್‌ಗಾಗಿ ಅಂದಾಜು 6 ರಿಂದ 7 ಲಕ್ಷ ರೂ. ಖರ್ಚಾಗುವ ಸಾಧ್ಯತೆಯಿದೆ. ನಗರದ ದಾನಿಗಳು ಹಾಗೂ ಕ್ರೀಡಾ ಪ್ರೇಮಿಗಳಿಂದ ನೆರವು ಪಡೆಯಲಾಗುವುದು. ಹಾಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ದಾನಿಗಳು ಹಾಗೂ ಕ್ರೀಡಾ ಪ್ರೇಮಿಗಳು ನೆರವು ನೀಡುವಂತೆ ರಾಜು ಬಿರಾದಾರ ಮನವಿ ಮಾಡಿದರು.