ಅಶ್ವಿನ್ ಸ್ಪಿನ್ ಮೋಡಿ: ಭಾರತೆಕ್ಕೆ 71 ರನ್ ಮುನ್ನಡೆ
ವಿಶಾಖಪಟ್ಟಣಂ, ಅ 5: ಆರ್. ಅಶ್ವಿನ್ (145 ಕ್ಕೆ 70 ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುನ್ನಡೆ ಸಾಧಿಸಿತು.
ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಎಂಟು ವಿಕೆಟ್ ಕಳೆದುಕೊಂಡು ಶನಿವಾರ ಬೆಳೆಗ್ಗೆ 385 ರನ್ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ 131.2 ಓವರ್ಗಳಲ್ಲಿ ತೆನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 431 ರನ್ ಗಳಿಸಿತು. ಆ ಮೂಲಕ 71 ರನ್ ಹಿನ್ನಡೆ ಅನುಭವಿಸಿತು.
ಇಂದು ಬೆಳೆಗ್ಗೆ ಬ್ಯಾಟಿಂಗ್ಗೆ ಇಳಿದ ಎಸ್. ಮುತ್ತುಸ್ವಾಮಿ ಹಾಗೂ ಕೇಶವ್ ಮಹರಾಜ್ ಜೋಡಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಕೇವಲ ಒಂಬತ್ತು ರನ್ ಗಳಿಸಿ ಕೇಶವ್ ಮಹರಾಜ್ ಅವರು ಆರ್.ಅಶ್ವಿನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ, ಜತೆಯಾದ ಮುತ್ತುಸ್ವಾಮಿ ಹಾಗೂ ಕಗಿಸೋ ರಬಡಾ ಜೋಡಿ ಕೊನೆಯ ವಿಕೆಟ್ಗೆ ಕೆಲಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಈ ಜೋಡಿ 35 ರನ್ ಗಳಿಸಿತು. 17 ಎಸೆತಗಳಲ್ಲಿ 15 ರನ್ ಗಳಿಸಿದ್ದ ರಬಡಾ ಅವರನ್ನು ಅಶ್ವಿನ್ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು.
ಕಾಡಿದ ಮುತ್ತುಸ್ವಾಮಿ:
ಕೊನೆಯ ಹಂತದಲ್ಲಿ ಎಸ್. ಮುತ್ತುಸ್ವಾಮಿ ಭಾರತ ಬೌಲರ್ಗಳಿಗೆ ಕಾಡಿದರು. ಭಾರತದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪು ನಿಧರ್ಾರ ತೆಗೆದುಕೊಳ್ಳದ ಅವರು ಸಮಯೋಜಿತವಾಗಿ ಬ್ಯಾಟಿಂಗ್ ಮಾಡಿದರು. 106 ಎಸೆತಗಳನ್ನು ಆಡಿದ ಅವರು ನಾಲ್ಕು ಬೌಂಡರಿಯೊಂದಿಗೆ 33 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೇಷ್ಠ ಬೌಲಿಂಗ್ ಮಾಡಿದ ಅಶ್ವಿನ್:
ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸುವಲ್ಲಿ ಆರ್. ಅಶ್ವಿನ್ ಅವರ ಪಾತ್ರ ಅಮೋಘವಾದದ್ದು. ಶುಕ್ರವಾರ ಐದು ಗೊಂಚಲು ವಿಕೆಟ್ ಪಡೆದಿದ್ದ ಅಶ್ವಿನ್, ಶನಿವಾರವೂ ಉಳಿದಿದ್ದ ಎರಡು ವಿಕೆಟ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಒಟ್ಟು 46.2 ಓವರ್ ಬೌಲಿಂಗ್ ಮಾಡದ ಅವರು, 145 ರನ್ ನೀಡಿ ಏಳು ವಿಕೆಟ್ ಪಡೆದುಕೊಂಡರು. ಇದರಲ್ಲಿ 11 ಮೆಡಿನ್ ಓವರ್ಗಳು ಒಳಗೊಂಡಿವೆ.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್: 502 (ಡಿ)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್: 131.2 ಓವರ್ಗಳಲ್ಲಿ 431/10 (ಡೀನ್ ಎಲ್ಗರ್ 160, ಡಿ ಕಾಕ್ 111, ಫಾಫ್ ಡೆುಪ್ಲೆಸಿಸ್ 55, ಎಸ್.ಮುತ್ತುಸ್ವಾಮಿ ಔಟಾಗದೆ 33; ಆರ್. ಅಶ್ವಿನ್ 145ಕ್ಕೆ 7, ರವೀಂದ್ರ ಜಡೇಜಾ 124ಕ್ಕೆ 2)
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 