ಅಭಿಮಾನಿ ಬಳಗದಿಂದ ಅಷ್ಟಗಿ ಹುಟ್ಟು ಹಬ್ಬ ಆಚರಣೆ

ಅಭಿಮಾನಿ ಬಳಗದಿಂದ ಅಷ್ಟಗಿ ಹುಟ್ಟು ಹಬ್ಬ ಆಚರಣೆ Ashtagi's birthday celebrated by the fan base

ಲೋಕದರ್ಶನ ವರದಿ 

ಯಮಕನಮರಡಿ, 08 : ಸ್ಥಳೀಯ ಮತಕ್ಷೇತ್ರದ ರೂವಾರಿ ಬಿಜೇಪಿ ಜೇಡಿಎಸ್ ಯುವಮುಖಂಡರಾದ ಮಾರುತಿ ಅಷ್ಟಗಿರವರ ಹುಟ್ಟು ಹಬ್ಬವನ್ನು ದಿನಾಂಕ 8ರಂದು ಯಮಕನಮರಡಿ ಹಂಜಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಾರುತಿ ಅಷ್ಟಗಿರವರು ಕಾರ್ಯಕರ್ತರಿಗೆ ಅಭಿನಂದಿಸಿ ಆತ್ಮೀಯವಾಗಿ ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತಾ ನನ್ನ ಕ್ಷೇತ್ರದ ಎಲ್ಲ ಮುಖಂಡರು ಹಿರಿಯ ರಾಜಕಾರಣಿಗಳು ಹಾಗೂ ಕಿರಿಯ ರಾಜಕಾರಣಿಗಳು ಮಾರ್ಗದರ್ಶಕರು ಮತ್ತು ಯುವಕ ಮಿತ್ರರು ಈ ದಿನ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಈ ನನ್ನ ಕ್ಷೇತ್ರದಲ್ಲಿ ಹೊಸ ಬೆಳಕನ್ನು ಮೂಡಿಸಿದಂತಾಗಿದೆ. ನಿಮ್ಮ ಮನೆಮಗನಾದ ನನ್ನನ್ನು ಊತ್ತುಂಗಕ್ಕೆ ಏರಿಸಲು ಪಣ ತೊಟ್ಟಿದ್ದಿರಿ ಇದು ಸಂತಸದ ಸಂಗತಿ ಆದರೆ ನನ್ನ ಬಗ್ಗೆ ಎರಡು ಬಾರಿ ಕೆಲ ಹಿತಾಸಕ್ತಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ 12 ನೇ ಶತಮಾನದಲ್ಲಿ ಜಗಕ್ಕೆ ಜ್ಯೋತಿಯಾಗಿದ್ದ ಗುರು ಬಸವಣ್ಣನವರನ್ನು ಬಿಡಲಿಲ್ಲ ಅವರನ್ನು ಮುಗಿಸಲು ಕೊಂಡಿ ಮಂಚನ್ನ ಮುಂತಾದವರು ಅಪಪ್ರಚಾರ ಮಾಡಿ ಕಲ್ಯಾಣ ಕ್ರಾಂತಿ ಮಾಡಿಸಿದ್ದರು. ಅದರಂತೆ ಇಂದಿನ ರಾಜಕೀಯ ಕುತಂತ್ರಿಗಳು ಸಹಿತ ಅಲ್ಲಸಲ್ಲದ ಮಾತುಗಳನ್ನು ಹೆಳಿ ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದರು ಆದರೂ ಸಹಿತ ನಾನು ಹೆದರದೆ ತಮ್ಮ ಸೇವೆ ತಪ್ಪಿಸಬಾರದೆಂದು ಜೇಡಿಎಸ್ ಪಕ್ಷದ ಮೂಲಕ ಚುನಾವಣೆ ನಿಲ್ಲಬೆಕಾಯಿತು ಸುಮಾರು 2 ಚುನಾವಣೆಯಲ್ಲಿ ನನಗೆ ಗೆಲುವಿನ ಹಂತಕ್ಕೆ ಬರುವಂತೆ ಆಶಿರ್ವಾದ ಮಾಡಿದ್ದಿರಿ ಆದರೆ ಕೆಲ ವಿರೋಧಿಗಳು ತಮ್ಮ ಸ್ವಾರ್ಥ ಸಾಧಿಸಿಕೊಂಡರು ಸಹಿತ ತಮ್ಮ ಆಶಿರ್ವಾದ ಬೆಂಬಲ ಇರುವವರೆಗೆ ತಮ್ಮ ಸೇವೆ ಮಾಡುತೆನೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕ್ಷೇತ್ರದ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದು ಆತ್ಮೀಯವಾಗಿ ಸನ್ಮಾನಿಸಿದರು ಜೆಡಿಎಸ್ ಮತ್ತು ಬಿಜೇಪಿ ಒಂದೆ ನಾಣ್ಯದ ಎರಡು ಮುಖಗಳಿದಂತೆ ಎಂದು ಹೆಳುತ್ತಾ ಅಭಿಮಾನಿಗಳನ್ನು ಅಭಿನಂದಿಸಿದರು.