ವಿಶಿಷ್ಟ ಜನಪದ ಸಂಸ್ಕೃತಿಯ ಜೋಕುಮಾರನ ಆಗಮನ
Arrival of Jokumar of unique folk culture
ಸವದತ್ತಿ: ತಾಲೂಕಿನ ಸಿಂದೋಗಿ ಗ್ರಾಮದ ಮಾರುತಿ ಬಡಾವಣೆಯಲ್ಲಿ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸುವ ವಿಶಿಷ್ಟ ಜನಪದ ಸಂಸ್ಕೃತಿಯ ಹಬ್ಬವಾದ ಜೋಕುಮಾರನ ಆಗಮನ ಭಾನುವಾರ ಸಂಭ್ರಮದಿಂದ ನಡೆಯಿತು.
ಉತ್ತರ ಕರ್ನಾಟಕದಲ್ಲಿ ಜೋಕುಮಾರನನ್ನು ಮಳೆ ತರಿಸುವ ಹಾಗೂ ಕೃಷಿಯನ್ನು ಕಾಪಾಡುವ ಜನಪದ ದೈವವೆಂದು ಆರಾಧಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಕ್ಕ ಬಾರಕೇರ, ಸಕ್ಕೂಬಾಯಿ ಬಾರಕೇರ ಹಾಗೂ ಯಲ್ಲಕ್ಕ ಬಾರಕೇರ ಸೇರಿದಂತೆ ಮಹಿಳೆಯರು ಜೋಕುಮಾರನ ಸಾಂಕೇತಿಕ ಪ್ರತಿಮೆಯನ್ನು ಹೊತ್ತು ಮನೆಮನೆಗೆ ತೆರಳಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಜನಪದ ಗೀತೆಗಳನ್ನು ಹಾಡಿ, ಉತ್ತಮ ಮಳೆಯಾಗಬೇಕು ಹಾಗೂ ಬೆಳೆಗಳು ಸಮೃದ್ಧವಾಗಿ ಬೆಳೆಯಬೇಕು ಎಂದು ಪ್ರಾರ್ಥಿಸಿ, ನೈವೇದ್ಯ ಅರ್ಿಸಿದರು.
ಸಾಮಾನ್ಯವಾಗಿ ಗಣೇಶ ಹಬ್ಬದ ನಂತರದ ಭಾದ್ರಪದ ಹುಣ್ಣಿಮೆ ಅಥವಾ ಅನಂತ ಚತುರ್ದಶಿಯ ಸಂದರ್ಭದಲ್ಲಿ ಈ ಆಚರಣೆ ನಡೆಯುತ್ತದೆ. ಜೋಕುಮಾರನ ಪ್ರತಿಮೆ ಏಳು ದಿನಗಳ ಕಾಲ ಗ್ರಾಮದಲ್ಲಿ ಸಂಚರಿಸಲಿದ್ದು, ಬಳಿಕ ವಿಧಿವಿಧಾನಗಳೊಂದಿಗೆ ವಿಸರ್ಜಿಸುವ ಮೂಲಕ ಹಬ್ಬದ ಆಚರಣೆ ಮುಕ್ತಾಯಗೊಳ್ಳಲಿದೆ. ಗ್ರಾಮೀಣ ಸೊಗಡಿನ ಈ ವಿಶಿಷ್ಟ ಸಂಪ್ರದಾಯದಲ್ಲಿ ಬಡಾವಣೆಯ ಮಹಿಳೆಯರು ಹಾಗೂ ಗ್ರಾಮಸ್ಥರು ಭಕ್ತಿಯಿಂದ ಪಾಲ್ಗೊಂಡಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 