ಯುದ್ದ ಬೇಡ ಸೇನೆ, ಜನರ ಸುರಕ್ಷತೆಗೆ ಗಮನ ಕೊಡಿ: ನಾನ್ಸಿ ಪೆಲೊಸಿ

ವಾಷಿಂಗ್ಟನ್, ಜ 8 ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಯುದ್ಧ ದ ಅತಿ ಉತ್ಸಾಹಕ್ಕೆ ಸ್ವದೇಶಗರಿಂದಲೇ ತೀವ್ರ ವಿರೋಧ ಕೇಳಿ ಬರುತ್ತಿದೆ. ನಮ್ಮ ದೇಶ ಮತ್ತು ಜಗತ್ತಿಗೆ ಮತ್ತೊಂದು ಯುದ್ಧ ಬೇಕಾಗಿಲ್ಲ ಎಂದು ಅಮೆರಿಕದ ಹೌಸ್ ಅಫ್ ರೆಪ್ರಸೆಂಟೇಟಿವ್ ಡೆಮೊಕ್ರಟಿಕ್ ಪಕ್ಷದ ಸ್ಪೀಕರ್ ನಾನ್ಸಿ ಪೆಲೊಸಿ ಹೇಳಿದ್ದಾರೆ. ಈ ಮೂಲಕ ಟ್ರಂಪ್ ದುಸ್ಸಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇರಾಕ್ ರಾಜಧಾನಿ ಬಾದ್ದಾದ್ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಕ್ಷಿಪಣಿ ನಡೆದ ದಾಳಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸ್ಪೀಕರ್ ನಾನ್ಸಿ ಪೆಲೊಸಿ, ಇರಾನ್ ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಸಹಕರಿಸಲಿ ಅನಗತ್ಯ ಯುದ್ಧ ಯರಿಗೂ ಬೇಡ, ಜಗತ್ತಿಗೆ ಬೇಡವಾಗಿದೆ ಎಂದು ಸಷ್ಟಪಡಿಸಿದ್ದಾರೆ . ಇಲ್ಲಿನ ಸರ್ಕಾ ರ ಎಲ್ಲಕ್ಕಿಂತ ಮೊದಲಾಗಿ ಸೇನಾ ಸಿಬ್ಬಂದಿ ಮತ್ತು ನಾಗರಿಕರ ಸುರಕ್ಷತೆಯ ಕಡೆ ಆದ್ಯ ಗಮನ ಹರಿಸಬೇಕು ಎಂದೂ ಅಧ್ಯಕ್ಷ ಟ್ರಂಪ್ ಅವರನ್ನು ನಾನ್ಸಿ ಆಗ್ರಹಿಸಿದ್ದಾರೆ.