ಅರಿಹಂತ ಆಂಗ್ಲಮಾಧ್ಯಮ ಶಾಲೆಯ ೧೮ನೇ ವಾರ್ಷಿಕ ಸ್ನೇಹ ಸಮ್ಮೇಳನ

ಅರಿಹಂತ ಆಂಗ್ಲಮಾಧ್ಯಮ ಶಾಲೆಯ ೧೮ನೇ ವಾರ್ಷಿಕ ಸ್ನೇಹ ಸಮ್ಮೇಳನ Arihant English Medium School's 18th Annual Friendship Conference

             ಬೆಳಗಾವಿ ಸಮ್ಮೇಳನವನ್ನು 20-01-2026 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಅಮಿತ್ ಶರ್ಮಾ (ಉದ್ಯಮಿ, ಎಸ್.ಜಿ. ಗ್ರೂಪ್, ಬೆಂಗಳೂರು) ಮತ್ತು ಡಾ. ಶಿವಕುಮಾರ ಎನ್. ರೇವಶೆಟ್ಟಿ (ಅಧ್ಯಕ್ಷರು, ಬೆಳಗಾಂ ಪಬ್ಲಿಕ್ ಸ್ಕೂಲ್, ಶಿಂದೂಳಿ, ಬೆಳಗಾವಿ) ಆಗಮಿಸಿದ್ದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೊಮಟೇಶ್ ಡಿ. ಮುತಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೆ. ಕರ್ನಲ್ ಗೌರವ ತ್ರಿಪಾಠಿ (ಭಾರತೀಯ ಸೇನೆ), ಲೆ. ಕರ್ನಲ್ ಪ್ರವೀಣ ಮುಚ್ಚಂಡಿ (ಭಾರತೀಯ ಸೇನೆ), ಶ್ರೀ ಸತೀಗೌಡ ಎಂ. ಪಾಟೀಲ್ (ನಿರ್ದೇಶಕರು, ಪಿ.ಕೆ.ಪಿ.ಎಸ್), ಶ್ರೀ ಕೆ. ಸ್ವಾಮಿ, ಶ್ರೀ ದರ್ಶಿತ್ ಶಿವಣಗೆರೆ ಹಾಗೂ ಶ್ರೀ ಶಶಿಧರ ಮರಡಿ ಇವರಿಗೆ ಸತ್ಕಾರ ಮಾಡಲಾಯಿತು.

             ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನಿತಾ ಡಿ. ಮುತಗಿ ಹಾಗೂ ಶ್ರೀ ಮಹಾವೀರ್ ಡಿ. ಪಾಟೀಲ್, ಶ್ರೀ ಅನಿಲ್ ಪಾಟೀಲ್, ಶ್ರೀ ಭೂಷಣ ಪಾಟೀಲ್, ಶ್ರೀ ಧರ್ಮು ಅನಗೋಳಕರ, ಶ್ರೀ ಮಹಾವೀರ್ ಅನಗೋಳಕರ, ಶ್ರೀ ಬಹುಬಲಿ ಸಂಗಮಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಧರಣೇಂದ್ರ ಜೆ. ಮುತಗಿ, ಶ್ರೀ ಮೋಹನ್ ಬಕೇಡಿ, ಶ್ರೀ ನಾಗೇಂದ್ರ ಜಕ್ಕಣ್ಣವರ, ಶ್ರೀ ಮಹಾವೀರ್ ಚೌಗಲೆ, ಶ್ರೀ ಸುಭಾಷ ಪಾಟೀಲ್ ಮತ್ತು ಶ್ರೀ ಪಾರೇಶ್ ಗುಂಡಕಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

             ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸೌಮ್ಯ ಸಿ.ಆರ್. ವಹಿಸಿದ್ದರು. ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯೊಂದಿಗೆ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶ್ರೀ ಧರ್ಮು ಅನಗೋಳಕರ ಮತ್ತು ಶಿಕ್ಷಕಿ ಶ್ರೀಮತಿ ವೀಣಾ ಶಿಂಧೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.

           ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ಶ್ರೀಮತಿ ಪೂಜಾ ಘಂಟೇಕರ್ ಮತ್ತು ನಿಕಿತಾ ಉಸುಲ್ಕರ್ ನೀಡಿದರು. ಗಣ್ಯರ ಹಸ್ತದಿಂದ ದೀಪ ಪ್ರಜ್ವಲನ ಮಾಡಿ ನಂತರ ಅತಿಥಿಗಳಿಗೆ ಪುಷ್ಪಾರ್ಪಣೆ ಮತ್ತು ಸನ್ಮಾನ ಮಾಡಲಾಯಿತು. ಶಾಲಾ ವರದಿಯನ್ನು ಶಿಕ್ಷಕಿ ಶ್ರೀಮತಿ ವೀಣಾ ಶಿಂಧೆ ವಾಚಿಸಿದರು. ನಂತರ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ನುಡಿಗಳನ್ನು ಹೇಳಿದರು.

            ಡಾ. ಶಿವಕುಮಾರ ಎನ್. ರೇವಶೆಟ್ಟಿ ಅವರು ತಮ್ಮ ಭಾಷಣದಲ್ಲಿ, ಶಿಕ್ಷಣದಿಂದ ಜೀವನದಲ್ಲಿ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗುತ್ತದೆ. ದೇಶದ ಪ್ರಗತಿ ನಮ್ಮ ಶೈಕ್ಷಣಿಕ ಉನ್ನತಿಯಲ್ಲಿ ಅಡಗಿದೆ ಎಂದು ಹೇಳಿದರು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕೇವಲ ಶಿಕ್ಷಕರು ಅಥವಾ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಪಾಲಕರ ಪಾತ್ರವೂ ಅತ್ಯಂತ ಮಹತ್ವದ್ದೆಂದು ತಿಳಿಸಿದರು. ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸದ ಒತ್ತಡ ನೀಡದೆ, ಅವರಲ್ಲಿನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಹಂತ ಹಂತವಾಗಿ ಸಾಧನೆ ಮಾಡಬಲ್ಲರು ಎಂದರು.

         20252026ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಆದರ್ಶ ವಿದ್ಯಾರ್ಥಿ ಕುಮಾರ ವಿವೇಕ ಗೋವೇಕರ್ ಮತ್ತು ಆದರ್ಶ ವಿದ್ಯಾರ್ಥಿನಿ ಕುಮಾರಿ ಶ್ರಾವಣಿ ಭುವಿನಾಯಕ ಇವರಿಗೆ ಶ್ರೀ