ಕರವೇ ನೂತನ ಪದಾಧಿಕಾರಿಗಳ ನೇಮಕ

ಕರವೇ ನೂತನ ಪದಾಧಿಕಾರಿಗಳ ನೇಮಕ  Appointment of new office-bearers for KaRaVe

ಕರವೇ ನೂತನ ಪದಾಧಿಕಾರಿಗಳ ನೇಮಕ  

ದೇವರ ಹಿಪ್ಪರಗಿ 13: ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ರಹಿಮಾನಸಾಬ ಕನಕಾಲ್ ತಿಳಿಸಿದ್ದಾರೆ. ಅಬೂಬಕರ ಯಲಗಾರ ಅವರನ್ನು ತಾಲೂಕು ಉಪಾಧ್ಯಕ್ಷರಾಗಿ, ಅಮೀದ ಮುಲ್ಲಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಮಲ್ಲಿಕಾರ್ಜುನ ಬಿರಾದರ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಇಮಾಮ್ ಮುಲ್ಲಾ ಅವರನ್ನು ತಾಲೂಕು ಕ್ರೀಡಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.  

ನೂತನ ಪದಾಧಿಕಾರಿಗಳು ಸಂಘಟನೆಯ ಬಲವರ್ಧನೆ, ಕನ್ನಡ ಹಾಗೂ ಕನ್ನಡಿಗರ ಹಿತಾಸಕ್ತಿಗಾಗಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ರಹಿಮಾನಸಾಬ ಕನಕಾಲ್ ತಿಳಿಸಿದ್ದಾರೆ.