ರೈತರ ಸಮಸ್ಯೆಗಳು ದ್ವಿಗುಣಗೊಂಡಿರುವ ಕುರಿತು ಹಾಗೂ ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ

ರೈತರ ಸಮಸ್ಯೆಗಳು ದ್ವಿಗುಣಗೊಂಡಿರುವ ಕುರಿತು ಹಾಗೂ ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ Appeal to take immediate action regarding the doubling of farmers' problems and the fulfillment of f


  ಕೊಪ್ಪಳ 23: ದೇಶದ ಬೆನ್ನೆಲುಬಾಗಿರುವ ರೈತರು ಇಂದು ಗಂಭೀರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ರೈತರ ಬದುಕು ಹಸನಾಗಿಸುವ ಬದಲು, ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಕೇವಲ ಘೋಷಣೆಯಾಗಿ ಉಳಿದು, ಅನ್ನದಾತನ ಬದುಕು ಅತೀವ ದುಸ್ಥಿತಿಗೆ ತಲುಪಿದೆ. 

ರೈತ ದಿನಾಚರಣೆಯ ಅಂಗವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಈ ಜ್ಞಾಪಕ ಪತ್ರವನ್ನು ಸಲ್ಲಿಸುತ್ತಿದ್ದು, ದೇಶದ ಹಾಗೂ ರಾಜ್ಯದ ರೈತಾಪಿ ವರ್ಗ ಎದುರಿಸುತ್ತಿರುವ ಹತ್ತುಹಲವಾರು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶವಾಗಿದೆ. ಆಡಳಿತದಲ್ಲಿರುವ ಸರ್ಕಾರಗಳು ರೈತರ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ತೋರದೆ, ಸಂಪೂರ್ಣ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿವೆ ಎಂಬುದು ವಿಷಾದಕರ ಸಂಗತಿ. 

ರಾಜ್ಯದ ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಸೂಕ್ತ ಬೆಲೆ ನಿಗದಿಪಡಿಸುವ ಕುರಿತು ಎಂ.ಎಸ್‌. ಸ್ವಾಮಿನಾಥನ್ ಆಯೋಗವು ನೀಡಿರುವ ಶಿಫಾರಸುಗಳನ್ನು ಇನ್ನೂ ಜಾರಿಗೊಳಿಸದಿರುವುದರ ಹಿಂದೆ ಕಾರ​‍್ೊರೇಟ್ ಬಂಡವಾಳದ ಪ್ರಭಾವವಿರುವುದು ಜಗಜ್ಜಾಹಿರವಾಗಿದೆ. ಕಳೆದ 40ಹಿ50 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಇನ್ನೂ ಪಟ್ಟಾ ಒದಗಿಸಲಾಗದಿರುವುದು ಈ ದೇಶದ ದೊಡ್ಡ ದುರಂತವಾಗಿದೆ. 

ಪ್ರತಿ ಟನ್ ಕಬ್ಬಿನಿಂದ ಕನಿಷ್ಠ ರೂ.14,000 ರಿಂದ ರೂ.15,000ವರೆಗೆ ಆದಾಯ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರನ್ನು ನಿರಂತರವಾಗಿ ಶೋಷಿಸುತ್ತಿದ್ದಾರೆ. ಕಬ್ಬು ಪೂರೈಸಿದ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ಕಾನೂನು ಇದ್ದರೂ, ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಾದರೂ ಹಣ ಪಾವತಿಸದಿರುವುದು ಸಾಮಾನ್ಯವಾಗಿದೆ. ನೀರೀಕ್ಷಿತ ಬೆಲೆ ಸಿಗದ ಕಾರಣ ಅನೇಕ ರೈತರು ಕಬ್ಬು ಬೆಳೆಯಿಚಿದ ವಿಮುಖರಾಗುತ್ತಿದ್ದಾರೆ. ಶೇ. 9.5 ಇಳುವರಿಗೆ ಕನಿಷ್ಠ ರೂ.5,500 ಎಫ್‌ಆರ್‌ಪಿ ನಿಗದಿಪಡಿಸಬೇಕಾದರೂ, ರಾಜಕೀಯ ಪ್ರಭಾವ ಹೊಂದಿರುವ ಕಾರ್ಖಾನೆ ಮಾಲೀಕರು ದರ ನಿಗದಿಗೆ ಅಡ್ಡಿಯಾಗುತ್ತಿದ್ದಾರೆ. ವರ್ಷಗಳೇ ಕಳೆದರೂ ರೈತರಿಗೆ ಅವರ ಹಣ ಸಿಗದೆ ಸರ್ಕಾರ ಮೌನ ವಹಿಸಿರುವುದು ತೀವ್ರ ಖಂಡನೀಯ. 

ಸಮಗ್ರ ಭೂ ಸುಧಾರಣೆಯಿಲ್ಲದೆ ಭೂ ವಂಚಿತರ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ರೈತರಿಗೆ ವಸತಿ ಹಕ್ಕು ಒದಗಿಸಲೇಬೇಕು. ನೀರಾವರಿ ವಂಚಿತ ಸಾಗುವಳಿ ಭೂಮಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ. ಎ.ಪಿ.ಎಂ.ಸಿ. ವ್ಯವಸ್ಥೆಯ ಖಾಸಗೀಕರಣವು ಅಪಾಯಕಾರಿ ಸೂಚನೆಯಾಗಿದ್ದು, ವಿದ್ಯುತ್ ಸರಬರಾಜಿನಲ್ಲೂ ರೈತ ವಿರೋಧಿ ನೀತಿಗಳು ಮುಂದುವರಿದಿವೆ. ರೈತರ ಆತ್ಮಹತ್ಯೆಗಳನ್ನು ತಡೆಯುವ ದೃಢ ಕಾರ್ಯಯೋಜನೆ ಸರ್ಕಾರದ ಬಳಿ ಇಲ್ಲ. ರೈತರು ಹಾಗೂ ರೈತ ಮಹಿಳೆಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳು, ಕೃಷಿ ವಲಯದ ಮೇಲೆ ನಡೆಯುತ್ತಿರುವ ಕಾರ​‍್ೊರೇಟ್ ಲೂಟಿಯ ಪರಿಣಾಮವೆಂದು ನಾವು ಗಂಭೀರವಾಗಿ ಆತಂಕ ವ್ಯಕ್ತಪಡಿಸುತ್ತೇವೆ. 

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೂ, ಸಾಲಬಾಧೆ, ಅತಿವೃಷ್ಟಿಹಿಅನಾವೃಷ್ಟಿ, ಬೆಳೆ ನಷ್ಟದ ಕಾರಣದಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ನಿಂತಿಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್‌ ಬ್ಯೂರೋ (ಓಅಖಃ) ವರದಿ ಪ್ರಕಾರ, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 2023ಹಿ24ರಿಂದ 2025ರ ನವೆಂಬರ್ ವರೆಗೆ ರಾಜ್ಯದಲ್ಲಿ 2,809 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2,422 ಅರ್ಹ ಪ್ರಕರಣಗಳನ್ನು ಪರಿಹಾರಕ್ಕೆ ಪರಿಗಣಿಸಲಾಗಿದ್ದು, ಇದುವರೆಗೆ 2,170 ಕುಟುಂಬಗಳಿಗೆ ತಲಾ ರೂ.5 ಲಕ್ಷದಂತೆ ಒಟ್ಟು ರೂ.108.50 ಕೋಟಿ ಪರಿಹಾರ ನೀಡಲಾಗಿದೆ. ಆದರೆ ಇನ್ನೂ 233 ರೈತ ಕುಟುಂಬಗಳಿಗೆ ಪರಿಹಾರ ದೊರಕಿಲ್ಲ. 

ಕಳೆದ ಐದು ವರ್ಷಗಳಲ್ಲಿ (2020ಹಿ2025) ಕಲ್ಯಾಣ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 756 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ, ಸಾಲದ ಬಾಧೆ ತಾಳಲಾರದೆ ರೈತರ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಸಾಲ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಹಾಗೂ 2+15 ಶೇಕಡಾ ಸೂತ್ರದೊಂದಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು. 

ಗ್ರಾಮೀಣ ಬ್ಯಾಂಕುಗಳಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ದೊರೆಯುತ್ತಿಲ್ಲ. ಸಾಲ ನವೀಕರಣ ಮಾಡದಿದ್ದರೆ ಶೇ.14 ಬಡ್ಡಿ, ನವೀಕರಿಸಿದ ಸಾಲಕ್ಕೆ ಶೇ.4 ಬಡ್ಡಿ ವಿಧಿಸಲಾಗುತ್ತಿದೆ. ಇದರಿಂದ ರೈತರು ಖಾಸಗಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮೊರೆ ಹೋಗುವಂತಾಗಿ, ಆತ್ಮಹತ್ಯೆಯ ದಾರಿಗೆ ತಳ್ಳಲ್ಪಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಗಣಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. 

ಹಕ್ಕೊತ್ತಾಯಗಳು :- 

1) ಎಂ.ಎಸ್‌. ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. 

2) ಸಮಗ್ರ ಭೂ ಸುಧಾರಣೆಯ ಮೂಲಕ ಭೂ ಹಂಚಿಕೆ ನೀತಿಯನ್ನು ಜಾರಿಗೊಳಿಸಿ, ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಭೂಮಿ ನೀಡಬೇಕು. 

3) ಭೂಮಿ ಮತ್ತು ವಸತಿ ವಂಚಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. 

4) 40ಹಿ50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಕೂಡಲೇ ಪಟ್ಟಾ ನೀಡಬೇಕು. 

5) ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಬೆಲೆ ನಿಗದಿಪಡಿಸಬೇಕು. 

6) ನೀರಾವರಿ ವಂಚಿತ ರೈತರ ಸಾಗುವಳಿ ಭೂಮಿಗೆ ನೀರು ಒದಗಿಸಬೇಕು. 

7) ರಾಜ್ಯ ಸರ್ಕಾರ ಘೋಷಿಸಿದಂತೆ ಟನ್ ಕಬ್ಬಿಗೆ ರೂ.150 ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು. 

8) ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 

9) ಕಳಪೆ ಬೀಜಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. 

10) ಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಮತ್ತು ಸಮರ​‍್ಕ ಪ್ರಮಾಣದಲ್ಲಿ ಪೂರೈಸುವ ವ್ಯವಸ್ಥೆ ಮಾಡಬೇಕು. 

ಮಾನ್ಯರೇ, ಮೇಲ್ಕಂಡ ನ್ಯಾಯಸಮ್ಮತ ಬೇಡಿಕೆಗಳ ಕುರಿತು ತಾವು ಕೂಡಲೇ ಹಸ್ತಕ್ಷೇಪ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ರೈತರ ಬದುಕಿಗೆ ನ್ಯಾಯ ಒದಗಿಸಬೇಕೆಂದು ಮಾನ್ಯ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಕರ್ನಾಟಕ ರಾಜ್ಯಪಾಲರು, ರಾಜಭವನ ಬೆಂಗಳೂರು ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಆದಿಲ್ ಪಟೇಲ್, ಎಸ್‌.ಡಬ್ಲೂ.ಸಿ. ರಾಜ್ಯ ಸದಸ್ಯರಾದ ಮಹಮ್ಮದ್ ಅಲೀಮುದ್ದೀನ್, ಇಸ್ಹಾಕ್ ಫಜೀಲ್, ನಾಸಿರ್ ಮಾಳೆಕೊಪ್ಪ ಮತ್ತು ಇತರರು ಉಪಸ್ಥಿತರಿದ್ದರು.