ಭಾಗ್ಯವಂತಿ ಆತ್ಮಹತ್ಯೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ
Appeal to take action against those responsible for Bhagyavanti's suicide
ಭಾಗ್ಯವಂತಿ ಆತ್ಮಹತ್ಯೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ
ರಾಯಬಾಗ, 19 : ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವಂತಿ ಅಗ್ಗಿಮಠ ಅವರ ಆತ್ಮಹತ್ಯೆಗೆ ಕಾರಣರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಶನಿವಾರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕ ಶ್ರೀನಾಥ ಶಿರಗೂರ ಮಾತನಾಡಿ, ಭಾಗ್ಯವಂತಿ ಅಗ್ಗಿಮಠ ಆತ್ಮಹತ್ಯೆಗೆ ಕಾರಣರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತೆಯ ಕುಟುಂಬಕ್ಕೆ ಸರ್ಕಾರದಿಂದ ಒಂದು ಕೋಟಿ ಪರಿಹಾರ ಒದಗಿಸಬೇಕು. ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿ ನೀಡಬೇಕು ಮತ್ತು ಮುಂದೆ ಈ ತರಹ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಪಂಚಾಯತ ವತಿಯಿಂದ ಮೇಲ್ವಿಚಾರಕರಿಗೆ ಇಲ್ಲಿಯವರೆಗೆ ಬರಬೇಕಾದ ವ್ಯತ್ಯಾಸದ ಮೊತ್ತವು ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ ಈ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತೆ ಸರ್ಕಾರದ ಗಮನಕ್ಕೂ ತರಬೇಕೆಂದು ಮನವಿ ಮಾಡಿಕೊಂಡರು.
ತಾಲೂಕಿನಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರು ಎದುರಿಸುತ್ತಿರುವ ವೇತನ ವಿಳಂಬ, ದಿನಪತ್ರಿಕೆ ಬಿಲ್ಲುಗಳನ್ನು ಸರಿಯಾದ ಸಮಯಕ್ಕೆ ಪಾವತಿಸದೆ ಇರುವುದು, ಶುಚಿತ್ವ ಭತ್ಯೆ ನೀಡದೆ ಇರುವುದು, ಸ್ಟೇಷನರಿ ಸಾಮಗ್ರಿಗಳನ್ನು ಒದಗಿಸದೆ ಇರುವುದು, ಅಂತರ್ಜಾಲದ ವ್ಯವಸ್ಥೆ ಕಲ್ಪಿಸದಿರುವುದು ಸೇರಿದಂತೆ ತಮ್ಮ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನ ಹರಿಸಬೇಕೆಂದರು. ಮನವಿ ಸ್ವೀಕರಿಸಿದ ತಾಲೂಕು ಪಂಚಾಯತ ಯೋಜನಾಧಿಕಾರಿ ನಿಂಗಪ್ಪ ಬೀರಣಗಡ್ಡಿ ಮಾತನಾಡಿ, ತಾಲೂಕನಲ್ಲಿರುವ ಪ್ರತಿ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ವೇತನ ಮತ್ತು ಪತ್ರಿಕೆಗಳ ಬಾಕಿ ಬಿಲ್ ಪಾವತಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯತ ಅಧಿಕಾರಿ ಬಿ.ವಿ. ಮಸಲಾಜಿ, ಸಂಘದ ತಾಲೂಕ ಅಧ್ಯಕ್ಷ ಸಿದ್ದರಾಯ ಬಸಳಿಗುಂದಿ, ಕಾರ್ಯದರ್ಶಿ ವಿಠಲ ಮಾದರ ಗ್ರಂಥಾಲಯ ಮೇಲ್ವಿಚಾರಕರಾದ ಪರ್ಪ ಭಾನಿ, ಭರತೇಶ ಗಣೇಶವಾಡಿ, ದುಂಡಪ್ಪ ಮ್ಯಾಗಡಿ, ರಾಜು ಖೋತ, ಮಲ್ಲಪ್ಪ ಕುಳಲಿ, ದತ್ತಾತ್ರೇಯ ಪಾಟೀಲ, ಶೋಭಾ ಪತ್ತಾರ, ಸುಧಾಕರ ಪಾಟೀಲ, ಶೇಖರ ಕಾಂಬಳೆ, ಸುವರ್ಣ ಬನಸಿ, ರಾಜು ನನದಿ, ಸಂಜು ಬಾಪಕರ, ಚಿದಾನಂದ ಕಡಲಸಕರ, ರಾಹುಲ ಸಂಗೋಟಿ, ಕಾಶವ್ವ ಕರಿಗಾರ, ಗಂಗವ್ವ ಸುಭಾನಿ, ಕಲ್ಲಪ್ಪ ಸಗರೆ, ಕುಮಾರ ಸುತಾರ, ನಿಂಗಪ್ಪ ಧನಗರ, ಸುಭಾಷ ಬೆಳಕೂಡ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 