ಕೆಜಿಬಿ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಯಶಸ್ವಿ: ಶ್ರೀನಿವಾಸಮೂರ್ತಿ
Annual meeting of KGB Employees' Cooperative Society a success: Srinivasa Murthy
ಬಳ್ಳಾರಿ 21: ಕೆಜಿಬಿ ನೌಕರರ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ದಿ. 21ರಂದು ಬೆಳಿಗ್ಗೆ 11.30 ಗಂಟೆಗೆ ಸಂಘಧ ಸಮುದಾಯ ಭವನದ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ನಾಗರಾಜ .ಟಿ ರವರ ಸ್ವಾಗತದೊಂದಿಗೆ ಮಹಾಸಭೆ ಪ್ರಾರಂಭವಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ .ಕೆ ವಹಿಸಿದ್ದರು.
ಆರಂಭದಲ್ಲಿ ಮುಖ್ಯ ಕಾರ್ಯನಿರ್ವಾಹಕದಾರ ನಾಗರಾಜ .ಟಿ ರವರು ಸಂಘದ ಹಿಂದಿನ ಮಹಾಸಭೆಯ ಗೊತ್ತುವಳಿಗಳನ್ನು ಹಾಗೂ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ 2024-25ನ ಸಾಲಿನ ಲೆಕ್ಕಪತ್ರಗಳ ವರದಿಯನ್ನು ಮಹಾಸಭೆಯ ಅಂಗೀಕಾರಕ್ಕಾಗಿ ಮಂಡಿಸಿದ ನಂತರ ಮಹಾಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಮಹಾಸಭೆಯು 2025-26ನೇ ಸಾಲಿನ ಮುಂಗಡ ಆಯವ್ಯಯ ಪತ್ರಕ್ಕೆ 2024-25ನೇ ಸಾಲಿನ ಲಾಭ ವಿಂಗಡಣೆಗೆ ಮಹಾಸಭೆಯು ಕರತಾಡನಗಳ ಮಧ್ಯೆ ಅಂಗೀಕರಿಸಿತು.
ಸಂಘದ ಉಪಾಧ್ಯಕ್ಷರಾದ, ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಪ್ರಾಣೇಶ್ ಮುತಾಲಿಕ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಶ್ರೀನಿವಾಸಮೂರ್ತಿ ರವರು ಮಾತನಾಡುತ್ತಾ, ಸಂಘದ 35 ವರ್ಷಗಳ ಬೆಳವಣಿಗೆಗೆ, ಯಶಸ್ಸಿಗೆ ಮತ್ತು ಸಮುದಾಯ ಭವನದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ನಿರ್ದೇಶಕ ಮಂಡಳಿಗಳಿಗೆ, ಸದಸ್ಯ ಬಾಂಧರವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಸಹಕಾರವನ್ನು ಕೋರಿದರು.
ನಂತರ ಸಭೆಯಲ್ಲಿ ಮಂಡಿಸಿದ ಎಲ್ಲಾ ವಿಷಯಗಳಿಗೆ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಉಪಾಧ್ಯಕ್ಷರಾದ ಎಸ್.ಶರಣೇಶ ರವರ ವಂದನಾರೆ್ಣಯೊಂದಿಗೆ ಮಹಾಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 