ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ Annual General Meeting of the Primary Agricultural Credit Cooperative Society

ಲೋಕದರ್ಶನ ವರದಿ 

ಕಂಪ್ಲಿ 11 : ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಗೊರವರ ಹನುಮಂತಪ್ಪ ಹೇಳಿದರು. ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಇತ್ತೀಚಿನ ದಿನಮಾನದಲ್ಲಿ ಅಭಿವೃದ್ಧಿ ಕಡೆಗೆ ಮುಖ ಮಾಡಿದೆ. ಇಲ್ಲಿನ ಸಂಘದ ಸಿಬ್ಬಂದಿಗಳು ಸಕಾಲದಲ್ಲಿ ರೈತರಿಗೆ ಸಾಲ, ಗೊಬ್ಬರ ಸೇರಿದಂತೆ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಶ್ರಮಿಸಬೇಕು ಎಂದರು.  ನಂತರ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಲಿಂಗನಗೌಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 3204 ಸದಸ್ಯರಿದ್ದು, ಸುಮಾರು 81 ಲಕ್ಷ 98 ಶೇರು ಬಂಡವಾಳ ಹೊಂದಿದೆ.

2 ಕೋಟಿ ರಸಗೊಬ್ಬರ ವ್ಯಾಪಾರ ವಹಿವಾಟು ನಡೆಸಿ, 33 ಲಕ್ಷ ವ್ಯಾಪಾರ ಲಾಭ ಹೊಂದಿದೆ. 17 ಲಕ್ಷ 56 ಸಾವಿರ 775 ನಿವ್ವಳ ಲಾಭಗಳಿಸಿದೆ. ಸಂಘದ ಅಭಿವೃದ್ಧಿಗೆ ಸಹಕಾರ ಅಗತ್ಯವಾಗಿದೆ. 5 ಕೋಟಿ 12 ಲಕ್ಷ ರೈತರಿಗೆ ಸಾಲ ವಿತರಿಸಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿ.ಮುಕ್ಕಣ್ಣ, ನಿರ್ದೇಶಕರಾದ ಹನುಮಂತಪ್ಪ, ಗೌಡ್ರು ಕೆ.ಸಿದ್ದಪ್ಪ, ಷಣ್ಮುಕಪ್ಪ, ಮಲ್ಲಿಕಾರ್ಜುನ, ಹನುಮಂತಪ್ಪ, ಮಹಾದೇವಪ್ಪ, ಗುಬಾಜಿ ಶಿಲ್ಪಮ್ಮ, ರಮೇಶ, ಮಲ್ಲಮ್ಮ, ವಿಶ್ವನಾಥ, ಗಂಗಾಧರ, ವಿಪ್ಕೋ ಕಂಪನಿ ನಿರ್ದೇಶಕ ಗೌಡ್ರು ನಾಗರಾಜ, ಮುಖಂಡರಾದ ಜಿ.ಮರೇಗೌಡ, ಗೌಡ್ರು ಅಂಜಿಪ್ಪ, ದೇವರಮನೆ ಮಲ್ಲಿಕಾರ್ಜುನ ಸೊಂಗ್ಟಿ ರಾಮಯ್ಯ, ವಿರೇಶ, ಕೆ.ಶಿವಕುಮಾರ ಸೇರಿದಂತೆ ರೈತರು, ಸಿಬ್ಬಂದಿ ಇದ್ದರು.