ಅನ್ನದಾನೇಶ್ವರ ಶ್ರೀಗಳ ಅಂತ್ಯಕ್ರಿಯೆ: ಲಕ್ಷಾಂತರ ಭಕ್ತರು
Annadaneshwara Sri's funeral: Lakhs of devotees participated
ಲೋಕದರ್ಶನ ವರದಿ
ಜಮಖಂಡಿ 08: ತಾಲೂಕಿನ ಸಮೀಪದ ಬಂಡಿಗಣಿ ಬಸವಗೋಪಾಲ ನೀಲಮಾಣಕ ಮಠದ ಅನ್ನದಾನೇಶ್ವರ ಶ್ರೀಗಳ ಅಂತ್ಯಕ್ರಿಯೆ ಲಕ್ಷಾಂತರ ಭಕ್ತರು, ನಾಡಿನ ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಠದ ಆವರಣದಲ್ಲಿ ವಿಧಿವಿಧಾನ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ಜರುಗಿತು.
ಬಂಡಿಗಣಿ ಮಠಕ್ಕೆ ಶ್ರೀಗಳ ಪಾರ್ಥಿವ ಶರೀರ ರಾತ್ರಿ 11 ಗಂಟೆ ಸುಮಾರಿಗೆ ಆಗಮಿಸಿತು. ಪಾರ್ಥಿವ ಶರೀರ ಬರುತ್ತಿದ್ದಂತೆ ಭಕ್ತರ ಹಾಗೂ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿತ್ತು. ಬೆಳಿಗ್ಗೆ 5 ಗಂಟೆಯಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾತ್ರಿಯಿಂದ ಸರತಿ ಸಾಲಿನಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ಅಂದಾಜು 3 ಲಕ್ಷಕ್ಕೂ ಅಧಿಕ ಭಕ್ತರು ಅಂತಿಮ ದರ್ಶನ ಪಡೆದರು.
ಬಂದಿರುವ ಲಕ್ಷಾಂತರ ಭಕ್ತರಿಗೆ ಸಾವಿರಕ್ಕೂ ಅಧಿಕ ಮಠದ ಕಾರ್ಯಕರ್ತರು ಸೇರಿ ಹುಗ್ಗಿ, ಅನ್ನ ಸಾಂಬರ್ ಪ್ರಸಾದ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದರು. ಮಠದ ಆವರಣದಲ್ಲಿ ಶ್ರೀಗಳು ಗುರುತಿಸಿದ ಸ್ಥಳದಲ್ಲಿ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಿಸಿದರು. ಎರಡು ಸಾವಿರಕ್ಕೂ ಅಧಿಕ ವಿಭೂತಿಗಳಲ್ಲಿ ಬಿಲ್ವಪತ್ರಗಳಲ್ಲಿ ಶ್ರೀಗಳು ಲೀನರಾದರು. ಅಂತಿಮ ವಿಧಿವಿಧಾನವನ್ನು ಯಡೂರಿನ 10ಕ್ಕೂ ಅಧಿಕ ಶ್ರೀಗಳು ನೆರವೇರಿಸಿದರು.
ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬಂಡಿಗಣಿಗೆ ಇನ್ನೊಂದು ಹೆಸರು ದಾಸೋಹ, ಅವರ ದಾಸೋಹ ನೋಡಿದರೆ ದೇವರೆ ಅವರಲ್ಲಿ ನೆಲೆಸಿದ್ದ. ಜಾತಿ, ಮತ, ಪಂಥ ಎನ್ನದೆ ನಾಡಿನ ಎಲ್ಲ ದೇವಸ್ಥಾನಗಳಲ್ಲಿ ದಾಸೋಹ ನಡೆಸುತ್ತಿದ್ದರು. ಇಂದು ದೇವರಸ್ವರೂಪಿಯಾಗಿದ್ದಾರೆ ಎಂದರು.
ಅಂತಿಮ ದರ್ಶನಕ್ಕೆ ಬಬಲಾದಿ ಮಠದ ಶಿದ್ರರಾಮಯ್ಯ ಶ್ರೀಗಳು, ಹುಕ್ಕೇರಿ ಚಂದ್ರಶೇಖರ ಶ್ರೀ, ಬನಹಟ್ಟಿ ಶರಣಬಸವ ಶ್ರೀ, ಕುಂಚನೂರ ಮಾಧುಲಿಂಗ ಮಹಾರಾಜರು, ಹಿಪ್ಪರಗಿ ಪ್ರಭು ಬೆನ್ನಾಳ ಮಹಾರಾಜರು ಸೇರಿದಂತೆ ಅನೇಕ ಮಠಾಧೀಶರು, ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಂಸದ ಪಿ,ಸಿ, ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಶಾಸಕ ದುರ್ಯೋದನ ಐಹೋಳೆ, ಹಣಮಂತ ನಿರಾಣಿ, ಮಾಜಿ ಶಾಸಕ ಅನಂದ ನ್ಯಾಮಗೌಡ, ತೇರದಾಳ ಮತಕ್ಷೇತ್ರ ಕಾಂಗ್ರೇಸ್ ಮುಖಂಡ ಸಿದ್ದು ಕೊಣ್ಣೂರ ಸೇರಿದಂತೆ ಅನೇಕರು ಇದ್ದರು, ಅಂತ್ಯಸಂಸ್ಕಾರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಲಕ್ಷಾಂತರ ಭಕ್ತರು ಸೇರಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 