ಎಬಿವಿಪಿ ೭೨ನೇ ಸಂಸ್ಥಾಪನ ದಿನ, ಅಮಿತ್ ಶಾ ಅಭಿನಂದನೆ

ನವದೆಹಲಿ, ಜುಲೈ 9: ಅಖಿಲ ಭಾರತೀಯ  ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಸ್ಥಾಪನಾ ದಿನದ ಅಂಗವಾಗಿ  ಹಿರಿಯ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ  ಅಮಿತ್ ಶಾ  ಸಂಘಟನೆಯ ಸದಸ್ಯರನ್ನು ಅಭಿನಂದಿಸಿದ್ದಾರೆ.

ದೇಶದ  ಅತಿದೊಡ್ಡ   ವಿದ್ಯಾರ್ಥಿ  ಸಂಘಟನೆಯಾಗಿರುವ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಇಂದು ೭೨ನೇ ಸಂಸ್ಥಾಪನ ದಿನ ಆಚರಿಸಿಕೊಳ್ಳುತ್ತಿದೆ.

ಅಖಿಲ ಭಾರತೀಯ  ವಿದ್ಯಾರ್ಥಿ ಪರಿಷತ್    ಸಂಘಟನೆ  ತನ್ನ ರಾಷ್ಟ್ರೀಯವಾದಿ  ತತ್ವ ಸಿದ್ದಾಂತದೊಂದಿಗೆ   ಕಳೆದ ಏಳು ದಶಕಗಳಿಂದ  ರಾಷ್ಟ್ರ ಸೇವೆಯತ್ತ ಯುವ ಜನರನ್ನು ಪ್ರೇರೇಪಣೆಗೊಳಿಸುವ ಮೂಲಕ ಮಹತ್ವದ ಪಾತ್ರ  ನಿರ್ವಹಿಸುತ್ತಿದೆ ಎಂದು  ಟ್ವೀಟ್ ಮಾಡಿದ್ದಾರೆ. ಸ್ವಾಮಿ ವಿವೇಕಾನಂದ   ಅವರ  ಚಂತನೆ, ಆದರ್ಶಗಳನ್ನು   ಪಾಲಿಸುತ್ತಾ, ಸಂಘಟನೆಯ ಸದಸ್ಯರು  ರಾಷ್ಟ್ರ ನಿರ್ಮಾಣ ಪಥದಲ್ಲಿ  ಕಾರ್ಯಪ್ರವೃತ್ತವಾಗಿದ್ದಾರೆ ಎಂದು   ಅಮಿತ್ ಶಾ  ಹೇಳಿದ್ದಾರೆ.