ಪೌರತ್ವ ತಿದ್ದುಪಡಿ ಕಾಯ್ದೆಗೆ ಅಮೆರಿಕಾ ಬೆಂಬಲ

ವಾಷಿಂಗ್ಟನ್,  ಡಿ  ೧೯ ಭಾರತದಲ್ಲಿ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿ ಎ  ಸರ್ಕಾರ   ಜಾರಿಗೊಳಿಸಲು   ಮುಂದಾಗಿರುವ   ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ   ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ.  ದೇಶದಲ್ಲಿ ಆಂತರಿಕ ಚರ್ಚೆಗಳ ನಂತರವೇ  ನಾಗರಿಕ ತಿದ್ದುಪಡಿ ಕಾನೂನನ್ನು ಅಂಗೀಕರಿಸಲಾಗಿದೆ ಎಂದು ಅಮೆರಿಕದ ರಾಜತಾಂತ್ರಿಕರು ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗಾಗಿ   ತನ್ನ ದೇಶ  ನಿರಂತರವಾಗಿ  ಶ್ರಮಿಸುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ  ಹೇಳಿದ್ದಾರೆ.  ವಾಷಿಂಗ್ಟನ್‌ನಲ್ಲಿ ಬುಧವಾರ  ಮೈಕ್ ಪಾಂಪಿಯೋ    ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ,   ಭಾರತದಲ್ಲಿ ಪ್ರಜಾಸತ್ತಾತ್ಮಕ ಚರ್ಚೆಗಳು ತರ್ಕಬದ್ಧವಾಗಿದ್ದು,  ಇವು  ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ ಎಂದು ಕೊಂಡಾಡಿದರು.  ಈ ಸಂದರ್ಭದಲ್ಲಿ, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈ ಶಂಕರ್   ಉಪಸ್ಥಿತರಿದ್ದರು.ಭಾರತಕ್ಕೆ  ಸಂಬಂಧಿಸಿದ  ವಿಷಯಗಳಲ್ಲದೆ,  ಅನೇಕ  ಜಾಗತಿಕ  ವಿಷಯಗಳಿಗೂ ಅಮೆರಿಕ ಸ್ಪಂದಿಸುತ್ತಿದೆ  ಎಂದು   ಪೊಂಪಿಯೊ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಧಾರ್ಮಿಕ ಹಕ್ಕುಗಳನ್ನು ಕಾಪಾಡಲು ಪೌರತ್ವ ಕಾನೂನು ಎಷ್ಟರ ಮಟ್ಟಿಗೆ  ನೆರವಾಗಲಿದೆ  ಎಂದು ಪೊಂಪಿಯೊ ನಂತರ ಪ್ರಶ್ನಿಸಿದಾಗ,  ವಿಶ್ವದೆಲ್ಲೆಡೆ ಧಾರ್ಮಿಕ  ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳು  ನಡೆಯುತ್ತಿವೆ,  ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ     ಹಲವಾರು ಕ್ರಮಗಳನ್ನು   ಕೈಗೊಳ್ಳಲಾಗಿದೆ ಎಂದು  ವಿದೇಶಾಂಗ ವ್ಯವಹಾರಗಳ ಸಚಿವ  ಎಸ್. ಜೈಶಂಕರ್  ಉತ್ತರಿಸಿದರು.